30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲಾ ಮಂತ್ರಿಮಂಡಲದ ನೂತನ ಸದಸ್ಯರಿಗೆ ಪ್ರಮಾಣ ವಚನ

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಜೂ.22ರಂದು ಶಾಲಾ ಮಂತ್ರಿಮಂಡಲದ ನೂತನ ಸದಸ್ಯರಿಗೆ ಪ್ರಮಾಣ ವಚನ ಸಮಾರಂಭವನ್ನು ಏರ್ಪಡಿಸಲಾಯಿತು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ. ಕ್ಲಿಫರ್ಡ್ ಪಿಂಟೋರವರು ಶಾಲಾ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಬೆಳ್ತಂಗಡಿ ಅರಕ್ಷಕ ಠಾಣೆಯ ಉಪನಿರೀಕ್ಷಕ ಅರ್ಜುನ್ ರವರು ಮಂತ್ರಿಮಂಡಲದ ಕಾರ್ಯ ವೈಖರಿ, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರ ಜವಾಬ್ದಾರಿಯನ್ನು ತಿಳಿಸುವುದರ ಜೊತೆಗೆ ಶಾಲಾ ಮಂತ್ರಿಮಂಡಲದ ನಾಯಕರ ಸಂದೇಹಗಳಿಗೆ ಉತ್ತರಿಸಿದರು.

ಶಾಲಾ ಸಂಚಾಲಕರಾದ ವಂ ಫಾ. ವೋಲ್ಟರ್ ಡಿಮೆಲ್ಲೋ ರವರು ಶಾಲಾ ಮಂತ್ರಿ ಮಂಡಲದ ನಾಯಕರಿಗೆ ಉತ್ತಮ ನಾಯಕತ್ವ ಗುಣ ಹಾಗೂ ಶಿಸ್ತಿನಿಂದ ತಮಗೆ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ ಶಾಲೆಯ ಪ್ರಗತಿಗೆ ಸಹಕರಿಸಬೇಕೆಂದು ಕಿವಿಮಾತು ನೀಡಿ ಆಶೀರ್ವದಿಸಿದರು. ಸಹಶಿಕ್ಷಕಿಯರಾದ ಶ್ರೀಮತಿ ಅನಿತಾ ಕೆ ಸ್ವಾಗತಿಸಿ, ಶ್ರೀಮತಿ ಎಲ್ವಿಟಾ ಪಾಯ್ಸ್ ವಂದಿಸಿದರು. ಸಹಶಿಕ್ಷಕಿ ಕು. ವಿದ್ಯಾ ಶ್ರೀ ಕಾರ್ಯಕ್ರಮ ನಿರ್ವಹಿಸಿದರು.

Related posts

ಅಳದಂಗಡಿ ಗ್ರಾಮ ಸಭೆ: ಅಂಗಡಿ ಬಾಡಿಗೆ ಬಾಕಿದಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಕರ್ನಾಟಕ ರಾಜ್ಯ ವೆಯಿಟ್ ಲಿಫ್ಟಿಂಗ್ ಅಸೋಸಿಯೇಷನ್ ಹಾಗೂ ಮೈಸೂರು ಜಿಲ್ಲಾ ವೆಯಿಟ್ ಲಿಫ್ಟಿಂಗ್ ಅಸೋಸಿಯೇಷನ್ ಸ್ಪರ್ಧೆಯಲ್ಲಿ ಎಸ್ ಡಿ ಎಮ್ ಕಾಲೇಜಿನ ಕ್ರೀಡಾ ವಿದ್ಯಾರ್ಥಿಗಳ ಅದ್ಭುತ ಸಾಧನೆ

Suddi Udaya

ಮಲೆಬೆಟ್ಟು ಗ್ರಾಮ ಒನ್ ಸೇವಾ ಕೇಂದ್ರ ಉದ್ಘಾಟನೆ

Suddi Udaya

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಶೇಖರ ಬಂಗೇರರಿಗೆ ಶ್ರೀ ರಾಘವೇಂದ್ರ ಸನ್ನಿಧಿಯಲ್ಲಿ ನುಡಿ ನಮನ

Suddi Udaya

ಕಸ್ತೂರಿ ರಂಗನ್ ವರದಿ ವಿರೋಧಿಸಿ ಶಿಶಿಲ ಗ್ರಾ.ಪಂ ನಲ್ಲಿ ಪ್ರತಿಭಟನೆ

Suddi Udaya
error: Content is protected !!