September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಮಸ್ಯೆ

ಊಟಕ್ಕಿಲ್ಲದ ಉಪ್ಪಿನಕಾಯಿಯಂತಿರುವ ಬಳಂಜದ ಮೊಬೈಲ್ ಟವರ್: ಬಳಂಜ- ನಾಲ್ಕೂರಿನಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ಗ್ರಾಹಕರು

ಬಳಂಜ: ಬಳಂಜ ಗ್ರಾಮ‌ ಪಂಚಾಯತ್ ವ್ಯಾಪ್ತಿಗೆ ಬರುವ ಬಳಂಜ ಮತ್ತು ನಾಲ್ಕೂರು ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ.
ಇದರಿಂದ ಇಕ್ಕಟ್ಟಿಗೆ ಸಿಲುಕಿದ ನಾಗರಿಕರು ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾಕಷ್ಟು ವರ್ಷಗಳಿಂದ ಬಳಂಜದಲ್ಲಿ ಏರ್ಟೆಲ್ ಮೊಬೈಲ್ ಟವರ್ ಇದ್ದರೂ ನೆಟ್‌ವರ್ಕ್ ಸಮಸ್ಯೆ ಬಾಧಿಸುತ್ತಿದೆ. ವಿದ್ಯುತ್ ಹೋಗುತ್ತಿದ್ದಂತೆ ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೆ ಯಾವುದೇ ಉಪಯೋಗವಿಲ್ಲ ಎಂದು ಸ್ಥಳಿಯ ನಿವಾಸಿ ಕರುಣಾಕರ ಹೆಗ್ಡೆ ಬೊಕ್ಕಸ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಜನರಿಗೆ ನೆಟ್ವರ್ಕ್ ಸಮಸ್ಯೆಯಿಂದ ಮುಕ್ತಿ ಯಾವಾಗ,,‌‌,?ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆ ಇಲ್ಲದೆ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಯುವುದಿಲ್ಲ.ಸಾಮಾನ್ಯವಾಗಿ ಎಲ್ಲಾ ಸವಲತ್ತುಗಳನ್ನು ಪಡೆಯಲು ರೇಷನ್,‌ಬ್ಯಾಂಕ್,ಸೈಬರ್,ಪಂಚಾಯತ್ ಹಾಗೂ ಮೊದಲಾದ ವ್ಯವಸ್ಥೆಗೆ ಮೊಬೈಲ್ ಫೋನ್ ಅಗತ್ಯ.ಹೀಗಿರುವಾಗ ನೆಟ್ವರ್ಕ್ ಇಲ್ಲವಾದರೆ ಯಾವ ಸವಲತ್ತು ಇದ್ದು ಏನು ಪ್ರಯೋಜನ.ಇದೇ ಸಮಸ್ಯೆಯಿಂದ ನಮ್ಮ ನಾಲ್ಕೂರು ಗ್ರಾಮದ ಜನರು ಬಹಳ ಇಕ್ಕಟ್ಟಿಗೆ ಸಿಲುಕಿದ್ದಾರೆ.ಒಂದು ಯಾವುದೇ ಸುದ್ದಿಯನ್ನು ಡೌನ್ ಲೋಡ್ ಮಾಡಲು ಮನೆಯಿಂದ ಹೊರಗೆ ಅಂದರೆ ಎತ್ತರದ ಪ್ರದೇಶದಲ್ಲಿ ಹೋಗಿ ಡೌನ್ಲೋಡ್ ಮಾಡಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.ಬಳಂಜ ದಲ್ಲಿ ಒಂದು ಏರ್ಟೆಲ್ ಟವರ್ ಇದ್ದು ಯಾವುದೇ ಪ್ರಯೋಜನವಾಗಿಲ್ಲ. ಊಟಕ್ಕಿಲ್ಲದ ಉಪ್ಪಿನಕಾಯಿಯಂತಿರುವ ಬಳಂಜದ ಟವರ್ .ಇದಕ್ಕೆ ಸಂಬಂಧ ಪಟ್ಟ ಇಲಾಖೆ ‌ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಕರುಣಾಕರ ಹೆಗ್ಡೆ ಆಗ್ರಹಿಸಿದ್ದಾರೆ.

Related posts

ನಡ ಗ್ರಾಮದ ಬಸ್ರಾಯ ವೆಂಟೆಡ್ ಡ್ಯಾಮ್ ನಲ್ಲಿ ಪ್ರವಾಹಕ್ಕೆ ಬಂದು ಸಿಲುಕಿಕೊಂಡಂತಹ ಕಸ ಹಾಗೂ ಮರದ ದಿಮ್ಮಿಗಳ ತೆರವು

Suddi Udaya

ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸ.ಸಂಘದ 21ನೇ ವಾರ್ಷಿಕ ಮಹಾಸಭೆ: ಎಸ್ಸೆಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Suddi Udaya

ಡಿ.27-28: ಬರೆಂಗಾಯ ಸ.ಉ.ಹಿ.ಪ್ರಾ ಶಾಲಾ ಅಮೃತ ಮಹೋತ್ಸವ

Suddi Udaya

ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಸದಸ್ಯರಿಂದ ಗಂಡಿಬಾಗಿಲು ಸಿಯೋನ್ ಅಶ್ರಮಕ್ಕೆ ಭೇಟಿ

Suddi Udaya

ಕುಪ್ಪೆಟ್ಟಿ ಸ.ಉ.ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಉಜಿರೆ ಎಸ್‌.ಡಿ.ಎಂ ಸಿ.ಬಿ.ಎಸ್.ಇ ಶಾಲೆಯ ಶಿಕ್ಷಕರಿಗೆ “ಆಕ್ಸ್ಫರ್ಡ್ ಅಡ್ವಾಂಟೇಜ್ ಪೆಡಗೋಜಿ” ಕಾರ್ಯಾಗಾರ

Suddi Udaya
error: Content is protected !!