September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ : ಪರಿಸರ ಗಿಡ ನಾಟಿ ಕಾರ್ಯಕ್ರಮ

ಬಳಂಜ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ ) ಗುರುವಾಯನಕೆರೆ ಹಾಗೂ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಳಂಜ ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಪರಿಸರ ಗಿಡ ನಾಟಿ ಕಾರ್ಯಕ್ರಮ ನಡೆಸಲಾಯಿತು.

ಪ್ರಥಮವಾಗಿ ಗಿಡ ನೆಡುವ ಮೂಲಕ ಪ್ರಮೋದ್ ಕುಮಾರ್ ಜೈನ್ ರವರು ಕಾರ್ಯಕ್ರಮ ಚಾಲನೆ ನೀಡಿದರು

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಮೇಲ್ವಿಚಾರಕರು ಕೃಷ್ಣ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಿದೆ ಮಕ್ಕಳಿಗೆ ಹುಟ್ಟುಹಬ್ಬ ಆಚರಣೆ ದಿನ ಗಿಡ ನೆಡುವ ಮೂಲಕ ಆಚರಿಸಿದರೆ ಉತ್ತಮ ಹಾಗೂ ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಸೇವಾ ಪ್ರತಿನಿಧಿ ಪ್ರಮೀಳಾ ಪಿ ಆಚಾರ್ಯ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಅಳದಂಗಡಿ ವಲಯದ ಮಾಜಿ ಜನ ಜಾಗೃತಿ ಅಧ್ಯಕ್ಷರಾದ ಪ್ರಮೋದ್ ಕುಮಾರ್ ಜೈನ್, ವಲಯ ಮೇಲ್ವಿಚಾರಕರಾದ ಗಣೇಶ್, ಕಿರಿಯ ಹಾಗೂ ಹಿರಿಯ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಸೇವಾ ಪ್ರತಿನಿಧಿ ಪ್ರಮೀಳಾ, ಎಸ್ ಡಿ ಎಂ ಅಧ್ಯಕ್ಷರಾದ ರತ್ನಾಕರ ಪೂಜಾರಿ, ಬಳಂಜ ಬಿ ಒಕ್ಕೂಟದ ಪದಾಧಿಕಾರಿ ನಿತ್ಯಾನಂದ ಹೆಗ್ಡೆ, ಶೌರ್ಯ ವಿಪತ್ತು ಘಟಕದ ಸಂತೋಷ್ ಭಂಡಾರಿ ಹಾಗೂ ಬೇಬಿ, ಜೆಸಿಐ ಮಂಜುಶ್ರೀ ಬೆಳ್ತಂಗಡಿ ಇದರ ಅಧ್ಯಕ್ಷರಾದ ಹೆಚ್ ಡಿ ರಂಜಿತ್, ಪಂಚಾಯತ್ ಸದಸ್ಯರಾದ ಯಕ್ಷಿತಾ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Related posts

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ವಾಣಿ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿ ಕು. ಮಾನ್ಯ 620 ಅಂಕದೊಂದಿಗೆ ರಾಜ್ಯಮಟ್ಟದಲ್ಲಿ 6ನೇ ರ‍್ಯಾಂಕ್

Suddi Udaya

ಆಳ್ವಾಸ್ ನ್ಯಾಚುರೋಪಥಿ ಕಾಲೇಜಿಗೆ 12 ರ‍್ಯಾಂಕ್

Suddi Udaya

ಕುಂಟಾಲಪಳಿಕೆ ಶಾಲೆಯಲ್ಲಿ ತುಂಬೆತ್ತಡ್ಕ ರಾಣೆಯಾರ್ ಸಮಾಜ ಸೇವಾ ಸಂಘದಿಂದ ಶ್ರಮದಾನ

Suddi Udaya

ಟೀಮ್ ದೇವರಗುಡ್ಡೆ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಅಂಗನವಾಡಿಗೆ ಚೇರ್ ವಿತರಣೆ

Suddi Udaya

ಕಳೆದ ಎರಡೂವರೆ ದಶಕಗಳಿಂದ ಅಮೂಲ್ಯ ಸೇವೆ ಸಲ್ಲಿಸಿದ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ರವರಿಗೆ ಬೀಳ್ಕೊಡುಗೆ

Suddi Udaya

ನಾವೂರು: ನಮನ ಟ್ರೇಡರ್‍ಸ್ ಶುಭಾರಂಭ

Suddi Udaya
error: Content is protected !!