September 6, 2026
ಚಿತ್ರ ವರದಿಪ್ರಮುಖ ಸುದ್ದಿವರದಿಶಿಕ್ಷಣ ಸಂಸ್ಥೆ

ಆಳ್ವಾಸ್ ನ್ಯಾಚುರೋಪಥಿ ಕಾಲೇಜಿಗೆ 12 ರ‍್ಯಾಂಕ್

ಮೂಡುಬಿದಿರೆ: ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ  ಕಾಲೇಜಿನ ವಿದ್ಯಾರ್ಥಿಗಳು ಈ ವರ್ಷದ  ವಿಶ್ವವಿದ್ಯಾನಿಲಯ ಮಟ್ಟದ ಅಂತಿಮ ಪರೀಕ್ಷೆಗಳಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದು  ಪದವಿ ವಿಭಾಗದಲ್ಲಿ 3 ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ 9 ರ‍್ಯಾಂಕ್‌ಗಳೊಂದಿಗೆ ಒಟ್ಟು 12 ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ.  

ಜುಲೈ 2024ರಲ್ಲಿ ನಡೆದ ಸ್ನಾತಕೋತ್ತರ ವಿಭಾಗದ ಎಂ.ಡಿ. ಇನ್ ಕ್ಲಿನಿಕಲ್ ನ್ಯಾಚುರೋಪಥಿಯಲ್ಲಿ ಡಾ. ಶಾಲಿನಿ ಪಿ.ವೈ ಪ್ರಥಮ ರ‍್ಯಾಂಕ್ ಪಡೆದಿದ್ದು,  ಡಾ. ಗ್ರೀಷ್ಮಾ ವಿವೇಕ್ ಆಳ್ವ ದ್ವಿತೀಯ ರ‍್ಯಾಂಕ್‌ ಹಾಗೂ ಡಾ. ಶ್ರದ್ಧಾ ಎಂ.ಕೆ 9ನೇ  ರ‍್ಯಾಂಕ್ ಗಳಿಸಿದ್ದಾರೆ. ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ರೋಡ್ರಿಗಸ್ ಪ್ರಣೀಲ್ ಮೆಲ್ವಿನ್ ಪ್ರಥಮ ರ‍್ಯಾಂಕ್ ಪಡೆದು ವಿಶ್ವವಿದ್ಯಾನಿಲಯ ಟಾಪರ್ ಆಗಿ ಹೊರಹೊಮ್ಮಿದ್ದು, ಪ್ರತಿಷ್ಠಿತ ಸೀತಾರಾಮ ಜಿಂದಾಲ್ ಗೋಲ್ಡ್ ಮೆಡಲ್‌ಗೆ ಭಾಜನರಾಗಿದ್ದಾರೆ. ಜೊತೆಗೆ ಅಕ್ಷತಾ ಪಿ. 7ನೇ ರ‍್ಯಾಂಕ್ ಮತ್ತು ದೀಕ್ಷಾ ಬಿ 10ನೇ ರ‍್ಯಾಂಕ್‌ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಎಂ.ಡಿ. ಇನ್ ಕ್ಲಿನಿಕಲ್ ಯೋಗ ವಿಭಾಗದಲ್ಲಿ ಡಾ. ವಿನಯ್ ಕುಮಾರ್ ಟಿ ದ್ವಿತೀಯ ರ‍್ಯಾಂಕ್ ಪಡೆದಿದ್ದು, ಡಾ. ಭೂಮಿಕಾ ಬಿ.ಆರ್ 5ನೇ ರ‍್ಯಾಂಕ್ ಗಳಿಸಿದ್ದಾರೆ. ಡಾ. ಹೋಬಿಜಾಮ್ ಕೇಕೆಸಾನಾ ದೇವಿ ಮತ್ತು ಡಾ. ಮಾರ್ಗರೆಟ್ ಸಲಾಂ ತಲಾ 6ನೇ ರ‍್ಯಾಂಕ್ ಗಳಿಸಿದ್ದು, ಡಾ. ಕಂಚನ್ ಮೈಬಾಮ್ 8ನೇ ರ‍್ಯಾಂಕ್ ಹಾಗೂ ಡಾ. ಕೃಷ್ಣೇಂದು ಪಿ ವಿನಯ್ 10ನೇ ರ‍್ಯಾಂಕ್ ಪಡೆದು ಕಾಲೇಜಿನ ಹೆಗ್ಗಳಿಕೆಯನ್ನು ಹೆಚ್ಚಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ ಆಳ್ವ, ಪ್ರಾಂಶುಪಾಲರು ಹಾಗೂ ಬೋಧಕ ವೃಂದದವರು ಅಭಿನಂದಿಸಿದ್ದಾರೆ. 

Related posts

ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸೈನಿಕರಿಗಾಗಿ ವಿಶೇಷ ದುವಾ ಪ್ರಾರ್ಥನೆ

Suddi Udaya

ನಾವೂರು : ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಕುವೆಟ್ಟು; ವಿಕಲಚೇತನರ ಸಮನ್ವಯ ಗ್ರಾಮಸಭೆ : ವಿಕಲಚೇತನರಿಗೆ ರೂ.2.15 ಲಕ್ಷ ನೆರವಿನ ಚೆಕ್ ವಿತರಣೆ

Suddi Udaya

ಖಿಳರ್ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್

Suddi Udaya

ಮಚ್ಚಿನ ಬೂತ್ ಸಂಖ್ಯೆ 181, 182, 183ರ ಮತಗಟ್ಟೆಗೆ ಆರ್‌ಎಸ್‌ಎಸ್ ಮುಖಂಡ ಪ್ರಭಾಕರ್ ಭಟ್ ಕಲ್ಲಡ್ಕ ಭೇಟಿ

Suddi Udaya
error: Content is protected !!