ಇಂದಬೆಟ್ಟು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಳ್ತಂಗಡಿ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ನಿಯಮಿತ, ಕುಲಶೇಖರ, ಮಂಗಳೂರು ಹಾಲು ಉತ್ಪಾದಕರ ಸಂಘ, ಕಜೆ, ಇಂದಬೆಟ್ಟು ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗದ ವಿರುದ್ಧ ಲಸಿಕಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಜೂ.26 ರಂದು ಉಮೇಶ್ ಗುಡಿಗಾರ್ ಇವರ ಡೈರಿ ಫಾರ್ಮ್ ನಲ್ಲಿ ಜರುಗಿತು.
ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾಲತಾ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸಭೆಯಲ್ಲಿ ಕಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಗೌಡ, ಡಾ. ರವಿಕುಮಾರ್ ಎಮ್, ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಹಾಗೂ ಡಾ. ಗಣಪತಿ ಸಹಾಯಕ ವ್ಯವಸ್ಥಾಪಕರು ಕೆ.ಎಂ.ಎಫ್ ಬೆಳ್ತಂಗಡಿ, ಪಶುವೈದ್ಯಕೀಯ ಪರೀಕ್ಷಕರಾದ ಪ್ರಶಾಂತ್, ರಾಜವರ್ಮ ಜೈನ್, ಶ್ರೀಧರ್ ಉಪಸ್ಥಿತರಿದ್ದರು.