ಉಜಿರೆ: ಮನಸ್ಸು ಮತ್ತು ದೇಹಕ್ಕೆ ಯೋಗ್ಯ ಸ್ಥಿತಿ ತಂದು ಕೊಡುವಲ್ಲಿ ಯೋಗದ ಪಾತ್ರ ಬಹಳ ಮುಖ್ಯ. ಮಾನಸಿಕ ದೈಹಿಕ ಒತ್ತಡಗಳಿಂದ ಹೊರಬರುವಲ್ಲಿ ಚಿಕಿತ್ಸೆಯಂತೆ ಫಲಕಾರಿ, ಯೋಗ ಬಲ್ಲವನಿಗೆ ರೋಗವಿಲ್ಲ, ಇತ್ತೀಚಿಗಿನ ಒತ್ತಡ ತುಂಬಿದ ಬದುಕಿನಲ್ಲಿ ಮಾನಸಿಕ ಸಮತೋಲನವೇ ಬಹಳ ಮುಖ್ಯ , ಹಾಗಾಗಿ ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ಯೋಗದ ಮೊರೆ ಹೋದರೆ ಆರೋಗ್ಯಯುತ ಬದುಕು ಸಾಧ್ಯವೆಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತ್ ಹೇಳಿದರು.
ಕಾಲೇಜಿನಲ್ಲಿ ನಡೆದ ‘ಯೋಗ ದಿನ’ದ ಆಚರಣೆ ಅಂಗವಾಗಿ ಯೋಗ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಲಾಯಿತು, ನಂತರ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.
ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿದ್ದ ಲಕ್ಷ್ಮಣ್ ಜಿ. ಡಿ ಹಾಗೂ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಭೌತಶಾಸ್ತ್ರ ಉಪನ್ಯಾಸಕರಾದ ವಿಕ್ರಂ.ಪಿ ವಂದಿಸಿ,ನಿರೂಪಿಸಿದರು.