September 6, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ ರುಡ್ ಸೆಟ್ ನಲ್ಲಿ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ ಕಾರ್ಯಕ್ರಮದ ಸಮಾರೋಪ

ಉಜಿರೆ: ಮಹಿಳೆಯರು ಎಲ್ಲಾ ಜವಬ್ಧಾರಿಗಳನ್ನು ನಿಭಾಹಿಸುದರ ಜೊತೆಗೆ ತಮ್ಮ ಕನಸುಗಳನ್ನು ಸಕಾರಗೊಳಿಸಲು ಪ್ರಯತ್ನಿಸಬೇಕು. ಮಹಿಳೆಯರಿಗೆ ಅತ್ಯಂತ ಹೆಚ್ಚಿನ ಜವಬ್ಧಾರಿಗಳಿವೆ, ಆದರೂ ಎಲ್ಲಾ ಜವಬ್ಧಾರಿಗಳನ್ನು ಅತ್ಯಂತ ಹೆಚ್ಚಿನ ಮುತುವರ್ಜಿಯಿಂದ ಮಾಡುತ್ತಾಳೆ, ಅದರ ಜೊತೆಗೆ ತನ್ನ ಕನಸ್ಸುಗಳನ್ನು ಮತ್ತು ಆಸೆಗಳನ್ನು ಸಕಾರ ಮಾಡಲು ಪ್ರಯತ್ನಿಸಬೇಕು. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕಲ್ಪನೆಯ ಈ ರುಡ್‌ಸೆಟ್ ಸಂಸ್ಥೆಯು ಕಳೆದ 42 ವರ್ಷಗಳಿಂದ ದೇಶದ ಅನೇಕ ಮಹಿಳೆಯರ ಸ್ವ ಉದ್ಯೋಗದ ಕನಸುಗಳನ್ನು ಸಕಾರಗೊಳಿಸಿದೆ. ಉಜಿರೆಯಲ್ಲಿ ಪ್ರಾರಂಭಗೊಂಡ ಈ ರುಡ್‌ಸೆಟ್ ಸಂಸ್ಥೆ ದೇಶದ ಪ್ರತಿ ಜಿಲ್ಲೆಯಲ್ಲೂ ಮಾದರಿ ಸಂಸ್ಥೆ (ಆರ್‌ಸೆಟಿ) ಗಳಾಗಿ ಸ್ಥಾಪನೆಗೊಂಡಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾಕಿರಣ್ ಕಾರಂತ್ ರವರು ಅಭಿಪ್ರಾಯಪಟ್ಟರು.

ಅವರುಉಜಿರೆ ರುಡ್ ಸೆಟ್ ನಲ್ಲಿ ನಡೆದ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಭಿರಾರ್ಥೀಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಮ್. ಸುರೇಶ್ ಅತಿಥಿಗಳನ್ನು ಸ್ವಾಗತಿಸಿ ತರಬೇತಿಯ ಹಿನ್ನೋಟ ನೀಡಿದರು. ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ವಿಜಯಕುಮಾರ್ ಬಿ.ಪಿ ಅಧ್ಯಕ್ಷತೆ ವಹಿಸಿದ್ದರು, ಹಿರಿಯ ಉಪನ್ಯಾಸಕ ಕರುಣಾಕರ್ ಜೈನ್ ಕಾರ್ಯಕ್ರಮ ನಿರೂಪಿಸಿ, ಅಬ್ರಹಾಂ ಜೇಮ್ಸ್‌ರವರು ವಂದಿಸಿದರು. 30 ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ 32 ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

Related posts

ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ 29ನೇ ಪದವಿ ಪ್ರದಾನ ಸಮಾರಂಭ

Suddi Udaya

ಉಜಿರೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್‌ದಳದಿಂದ ಪ್ರಶಸ್ತಿ ಪತ್ರ ವಿತರಣೆ

Suddi Udaya

ಸೋಮಂತಡ್ಕ ನಿವಾಸಿ ಮೇರಿ ಒ.ಎ. ಹೃದಯಾಘಾತದಿಂದ ನಿಧನ

Suddi Udaya

ಮಡಂತ್ಯಾರುವಿನಲ್ಲಿ “ಲಸ್ಸಿ ಟೇಲ್ಸ್ ಕೆಫೆ” ಶುಭಾರಂಭ

Suddi Udaya

ಶ್ರೀ ಗುರುದೇವ ಸಹಕಾರ ಸಂಘದ 28ನೇ ಶಾಖೆ ಗುರುಪುರ-ಕೈಕಂಬದಲ್ಲಿ ಉದ್ಘಾಟನೆ

Suddi Udaya

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಅದ್ವೈತ ರಥ ಯಾತ್ರೆಗೆ ಭವ್ಯ ಸ್ವಾಗತ

Suddi Udaya
error: Content is protected !!