27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಕುಟುಂಬಸ್ಥರಿಗೆ ಮೆಸ್ಕಾಂ ಇಲಾಖೆಯ ಪರಿಹಾರದ ಚೆಕ್ ನ್ನು ಶಾಸಕ ಹರೀಶ್ ಪೂಂಜರಿಂದ ಹಸ್ತಾಂತರ

ಬೆಳ್ತಂಗಡಿ: ಶಿಬಾಜೆಯ ಬರ್ಗುಲಾದಲ್ಲಿ ಜೂ.27ರಂದು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಯವರಿಗೆ ಮೆಸ್ಕಾಂ ಇಲಾಖೆಯ ಪರಿಹಾರವಾಗಿ ರೂ.5 ಲಕ್ಷದ ಚೆಕ್ ನ್ನು ಶಾಸಕ ಹರೀಶ್ ಪೂಂಜ ಅವರ ಮುಖಾಂತರ ಕುಟುಂಬಸ್ಥರಿಗೆ ಶ್ರಮಿಕ ಕಾರ್ಯಾಲಯದಲ್ಲಿ ಜು.1 ರಂದು ವಿತರಿಸಿದರು.

ಈ ವೇಳೆ ಶಾಸಕ ಹರೀಶ್ ಪೂಂಜ ಮಾತನಾಡಿ ಮೆಸ್ಕಾಂ ಇಲಾಖೆಯ ನಿರ್ಲಕ್ಷದಿಂದ ಯುವತಿ ಸಾವನ್ನಪ್ಪಿದ್ದರಿಂದ ಇಲಾಖೆಯಿಂದ 5 ಲಕ್ಷ ಪರಿಹಾರ ವನ್ನು ನೀಡಲಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪರಿಹಾರ ದೊರಕಿಸುವಂತೆ ಇಲಾಖೆಗಳಿಗೆ ಹಾಗೂ ಸಚಿವರಿಗೆ ಮನವಿಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು..

ಈ ಸಂದರ್ಭದಲ್ಲಿ ಬೆಳ್ತಂಗಡಿ ಉಪವಿಭಾಗದ ಸ‍.ಕಾ. ಇಂಜಿನಿಯರ್ ಕ್ಲೇಮೆಂಟ್ ಬೆಂಜಮಿನ್ ಬ್ರಾಗ್ಸ್, ಶಿಬಾಜೆ ಗ್ರಾ.ಪಂ. ಉಪಾಧ್ಯಕ್ಷ ದಿನಕರ ಕುರುಪ್, ಮಾಜಿ ಅಧ್ಯಕ್ಷ ರತೀಶ್ ಗೌಡ ಹಾಗೂ ಮೃತ ಯುವತಿಯ ಕುಟುಂಬಸ್ಥರು ಉಪಸ್ಥಿತರಿದ್ದರು.

Related posts

ಬಿಲ್ಲು ಇಲ್ಲದೆ ಅಡಿಕೆ ಸಾಗಾಟ ವಾಹನ ವಶಕ್ಕೆ: ವಾಣಿಜ್ಯ ತೆರಿಗೆ ಇಲಾಖೆಯಿಂದ ದಂಡ

Suddi Udaya

ಓಡೀಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕೊಕ್ಕಡ: ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಶಬರಾಯ ನಿಧನ

Suddi Udaya

ಅರಸಿನಮಕ್ಕಿ: ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ಮೂಡುಕೋಡಿ: ಆಲಡ್ಕ ನಿವಾಸಿ ಜಿನ್ನಪ್ಪ ಪೂಜಾರಿ ನಿಧನ

Suddi Udaya

ಶ್ರೀ ಭಗವದ್ಗೀತಾ ಅಭಿಯಾನ -2023: ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತೆ ಸ್ಪರ್ಧೆಗಳ ಉದ್ಘಾಟನೆ

Suddi Udaya
error: Content is protected !!