September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜಡಿಮಳೆ: ಕಳೆಂಜ ಕುಟ್ರುಪ್ಪಾಡಿ ರಾಮಣ್ಣ ನಾಯ್ಕರ ಸೋಗೆ ಮನೆ ಛಾವಣಿ ಸಂಪೂರ್ಣ ಕುಸಿತ

ಕಳೆಂಜ: ಇಲ್ಲಿಯ ಶಿಬರಾಜೆ ಕುಟ್ರುಪ್ಪಾಡಿ ನಿವಾಸಿ ರಾಮಣ್ಣ (ದಿನೇಶ್) ನಾಯ್ಕರ ಸೋಗೆ ಮನೆ ಛಾವಣಿಯು ಜೂ.29 ರಾತ್ರಿ ಸುರಿದ ಜಡಿಮಳೆಗೆ ಮುಂಜಾನೆ 3.30ಕ್ಕೆ ಸಂಪೂರ್ಣ ಛಾವಣಿ ಕುಸಿದಿದ್ದು, ಈ ವೇಳೆ ಮನೆಯಲ್ಲಿ ನಿದ್ರಿಸುತ್ತಿದ್ದ ರಾಮಣ್ಣ (ದಿನೇಶ್) ನಾಯ್ಕ, ಪತ್ನಿ ವಾರಿಜ, ಪುತ್ರ ಅಪಾಯದಿಂದ ಪಾರಾಗಿದ್ದಾರೆ.


ಈ ಸಂದರ್ಭ ಅತಂತ್ರರಾದ ರಾಮಣ್ಣರವರ ಕುಟುಂಬದವರಿಗೆ ಪಕ್ಕದ ಮನೆಯ ಅನೂಪ್ ನಾಯ್ಕ ದೇರ್ಯ ಆಶ್ರಯ ನೀಡಿದ್ದರು. ವಿಷಯ ತಿಳಿದು ತಕ್ಷಣ ಧಾವಿಸಿದ ಬಿಜೆಪಿ ಬೂತ್ ಸಮಿತಿ 174ರ ಅಧ್ಯಕ್ಷ ಹರೀಶ ವಳಗುಡ್ಡೆ, ಸದಸ್ಯರು ಮತ್ತು ಕಾರ್ಯಕರ್ತರು ಮುರಿದು ಬಿದ್ದ ಮನೆಯ ಸಾಮಾನುಗಳನ್ನು ವಿಲೇವಾರಿ ಮಾಡಿ ಅವರ ಕಷ್ಟಕ್ಕೆ ಸ್ಪಂದಿಸಿದರು.


ಬಡವರಾದ ರಾಮಣ್ಣ (ದಿನೇಶ) ನಾಯ್ಕರವರಿಗೆ ಒಂದು ತಾತ್ಕಾಲಿಕ ಮನೆಯನ್ನು ಒಂದು ವಾರದೊಳಗೆ ನಿರ್ಮಿಸಿ ಕೊಡಬೇಕೆಂದು ಪಣತೊಟ್ಟ ಹರೀಶ ವಳಗುಡ್ಡೆಯವರು, ಕಾರ್ಯಕರ್ತರು, ಗ್ರಾಮಸ್ಥರು, ದಾನಿಗಳನ್ನು ಸಂಪರ್ಕಿಸುತ್ತಿದ್ದಾರೆ.
ಸದ್ಯದ ಮಟ್ಟಿಗೆ ರಾಮಣ್ಣ ನಾಯ್ಕರ ಕುಟುಂಬದವರು ಸಂಬಂಧಿಕರಾದ ದಯಾನಂದ ನಾಯ್ಕರ ಮನೆಯಲ್ಲಿ ಉಳಿದುಕೊಂಡಿದ್ದಾರೆ.

Related posts

ಬೆಳ್ತಂಗಡಿ ತಾಲೂಕಿನ ವಿವಿದೆಡೆ ಧಾರಕಾರ ಗಾಳಿ ಮಳೆ, ವ್ಯಾಪಕ ಹಾನಿ: ಧರೆಗುರುಳಿದ ಮರ, ಗುಡ್ಡ ಕುಸಿತ, ಮನೆಗಳಿಗೆ ಹಾನಿ. ವಿದ್ಯುತ್ ವ್ಯತ್ಯಯ, ತೋಟಕ್ಕೆ ನುಗ್ಗಿದ ನೀರು: ಅಧಿಕಾರಿಗಳ ಭೇಟಿ, ಪರೀಶೀಲನೆ, ಹತೋಟಿಗೆ ಕ್ರಮ,

Suddi Udaya

ಉಜಿರೆ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಭಾರತೀಯ ಜನತಾ ಪಾರ್ಟಿಯ ನಾವೂರು ಶಕ್ತಿ ಕೇಂದ್ರದ ಬೂತ್ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ

Suddi Udaya

ಬೆಳ್ತಂಗಡಿ ಪವರ್ ಆನ್ ಸಂಸ್ಥೆಗೆ ದಶಕದ ಸಂಭ್ರಮ: ಕೇಕ್ ಕತ್ತರಿಸಿ ಸಂಭ್ರಮಾಚರಣೆ

Suddi Udaya

ಸಿ.ಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

Suddi Udaya

ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ: ‘ಟೆಕ್ನೋ-ಸಾಂಸ್ಕೃತಿಕ ಉತ್ಸವ – 2026’

Suddi Udaya
error: Content is protected !!