24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಗೇರುಕಟ್ಟೆ : ಕಳಿಯ, ನ್ಯಾಯತರ್ಪು ಪ್ರದೇಶದಲ್ಲಿ ಏರ್ ಟೆಲ್ ನೆಟ್ವರ್ಕ್ ಸಮಸ್ಯೆ

ಬೆಳ್ತಂಗಡಿ : ಗೇರುಕಟ್ಟೆ, ನಾಳದ ಪರಿಸರದಲ್ಲಿ ಏರ್ ಟೆಲ್ ಕಂಪನಿಯ ನೆಟ್ವರ್ಕ್ ಸಮಸ್ಯೆಯಿಂದ ಸಾವಿರಾರು ಗ್ರಾಹಕರು ಕಂಗಲಾಗಿದ್ದಾರೆ.


ನಾಳದಲ್ಲಿ ಬಿ.ಎಸ್.ಎನ್.ಎಲ್. ಗೇರುಕಟ್ಟೆಯಲ್ಲಿ ಏರ್ ಟೆಲ್ ಟವರ್ ಗಳು ಜನರಿಗೆ ಲಭ್ಯವಿದ್ದರೂ, ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬ ಗಾದೆ ಮಾತಿನಂತೆ ಆಗಿದೆ. ನಾಳದಲ್ಲಿ ಮತ್ತು ಗೇರುಕಟ್ಟೆಯ ಟವರ್ ಗಳಲ್ಲಿ ಬಿ.ಎಸ್.ಎನ್.ಎಲ್ ಟವರ್ ನಲ್ಲಿ ಏರ್ ಟೆಲ್ ಮತ್ತು ಇನ್ನೆರಡು ಕಂಪನಿಯವರು ಸೇರಿಸಿಕೊಂಡರೂ ಗ್ರಾಹಕರಿಗೆ ಪ್ರಯೋಜನವಿಲ್ಲ.


ಈಗಾಗಲೇ ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ, ಶಾಲಾ ವಿದ್ಯಾರ್ಥಿಗಳ ವಿದ್ಯಾಭ್ಯಾಸ ವರ್ಕ್ ಫ್ರಮ್ ಹೋಂ ಉದ್ಯೋಗಿಗಳಿಗೆ ಹಾಗೂ ಸರಕಾರದ ವಿವಿಧ ರೀತಿಯ ಸೌಲಭ್ಯಗಳನ್ನು ಪಡೆಯುವಲ್ಲಿ ಜನರು ವಂಚಿತರಾಗಿದ್ದರೆ.


ಈ ಹಿಂದೆ ಗೇರುಕಟ್ಟೆ ಏರ್ ಟೆಲ್ ಟವರ್ ಬುಡದಲ್ಲಿ ಬೆಂಕಿ ಹೊತ್ತಿಗೊಂಡ ಸಮಯದಲ್ಲಿ ಗ್ರಾಹಕರು ರಕ್ಷಿಸಿ ಮಾನವೀಯತೆ ಮೆರೆದರು. ಸಂಸ್ಥೆಯು ಗ್ರಾಹಕರ ಸಹಾಯಕ್ಕೆ ಬರದೆ ಸತಾಯಿಸುದನ್ನು ಗ್ರಾಮಸ್ಥರು ಸಹಿಸುವುದಿಲ್ಲ. ತಕ್ಷಣ ಸರಿಯಾದ ಕ್ರಮಕೈಗೊಳಬೇಕು. ತಪ್ಪಿದಲ್ಲಿ ಪಂಚಾಯತ್ ಮೇಲೆ ಒತ್ತಡ ಹೇರಿ ಪರವಾನಿಗೆ ರದ್ದು ಪಡಿಸುವ ಕಾರ್ಯಕ್ಕೆ ಮುಂದಾಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ.

ವರದಿ: ಕೆ.ಎನ್ ಗೌಡ

Related posts

ಬೆಳ್ತಂಗಡಿ ತಾಲೂಕಿನ ಕಲಾವಿದರೇ ನಟಿಸಿ- ನಿರ್ಮಾಣ ಮಾಡಿರುವ ಧರ್ಮಸ್ಥಳ ಕಾತ್ಯಾಯಣಿ ಕ್ರಿಯೆಷನ್‌ನವರ “ತೀರ್ಪು” ಟೆಲಿಫಿಲ್ಮ್ ಯೂಟ್ಯೂಬ್ ನಲ್ಲಿ ಬಿಡುಗಡೆ

Suddi Udaya

ಚಂದ್ರಯಾನ -3 ಯಶಸ್ವಿ ಸಂಭ್ರಮಿಸಿದ ಬೆಳ್ತಂಗಡಿ ಎಸ್ ಡಿಎಮ್ ಸ್ಕೌಟ್ ಗೈಡ್ಸ್ ನ ವಿದ್ಯಾರ್ಥಿಗಳು

Suddi Udaya

ಸುದೇಮುಗೇರು ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮರೋಡಿ: ವೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದ 90 ವರ್ಷದ ವಯೋವೃದ್ದೆ

Suddi Udaya

ಬಿರು ಬೇಸಿಗೆಯಲ್ಲಿ ನೀರಿನ ಕೊರತೆಯ ನಡುವೆ ಕುಡಿಯುವ ನೀರನ್ನು ಪೂರೈಸಿ ಮಾದರಿ ಎನಿಸಿಕೊಂಡ ಲಾಯಿಲ ಗ್ರಾ.ಪಂ. ಸದಸ್ಯರು

Suddi Udaya

ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ

Suddi Udaya
error: Content is protected !!