ಕಳೆಂಜ: ಇಲ್ಲಿಯ ಶಿಬರಾಜೆ ನಿಂತಿಕಲ್ಲು ನಿವಾಸಿ ರಾಮಣ್ಣ (ದಿನೇಶ್ ನಾಯ್ಕ) ರ ಸೋಗೆ ಮನೆ ಚಾವಣಿಯು ಜೂ.29 ರಂದು ರಾತ್ರಿ ಸುರಿದ ಜಡಿಮಳೆಗೆ ಸಂಪೂರ್ಣ ಛಾವಣಿ ಕುಸಿದಿದ್ದು ಅತಂತ್ರರಾದ ರಾಮಣ್ಣರವರ ಕುಟುಂಬದವರಿಗೆ ಪಕ್ಕದ ಮನೆಯ ಅನೂಪ್ ನಾಯ್ಕ ದೇರ್ಯ ಆಶ್ರಯ ನೀಡಿದ್ದರು. ಅವರಿಗೆ ತಾತ್ಕಾಲಿಕ ಮನೆಯನ್ನು ನಿರ್ಮಿಸಿ ಕೊಡಬೇಕೆಂದು ಪಣತೊಟ್ಟ ಹರೀಶ್ ವಳಗುಡ್ಡೆಯವರು ದಾನಿಗಳನ್ನು ಸಂಪರ್ಕಿಸಿದರು. ಅಂತೆಯೇ ವಿಶ್ವಹಿಂದೂ ಪರಿಷತ್ ಭಜರಂಗದಳ ಕಳೆಂಜದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು, ಊರ ದಾನಿಗಳ ಸಹಕಾರ ದೊರೆಯಿತು. ಸಂಪೂರ್ಣ ಶೀಟಿನ ಆರ್ಥಿಕ ನೆರವನ್ನು ನೀಡಿದ ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮುಂದಾಳತ್ವದಲ್ಲಿ ಈ ತಾತ್ಕಾಲಿಕ ಶೀಟಿನ ಮಾಡಿನ ಮನೆ ನಿರ್ಮಾಣವಾಯಿತು.
ಈ ವೇಳೆ ದಯಾನಂದ ನಾಯ್ಕ, ಸುಂದರ ಗೌಡ ಪಳ್ಳದಮೂಲೆ, ಪ್ರವೀಣ್ ಬಟ್ಯಾಲು, ಧನಂಜಯ ಗೌಡ ವಳಚ್ಚಿಲು, ಶೇಖರ ಗೌಡ ನೆಕ್ಕರಾಜೆ, ದಿನೇಶ ಸೀಂಬೂಲು, ಎನ್.ಕೆ ಚಾಕೋ ಗುಂಡಿಗದ್ದೆ, ಗಂಗಾಧರ ಗೌಡ ಪಲ್ಲದಮೂಲೆ, ಸುಂದರ ಗೌಡ ಪಲ್ಲದಮೂಲೆ, ಮಾಧವ ಗೌಡ ಪಲ್ಲದಮೂಲೆ, ಸಂತೋಷ್ ಕುಮಾರ್ ಜೈನ್ ವಳಂಬಲ, ರತ್ನಾಕರ ಗೌಡ ಗುತ್ತು, ಕಾರ್ತಿಕ್ ಗೌಡ ಮಾಪಾಲ್ತಿಮಾರು, ಹರೀಶ್ ಕುಮಾರ್ ವಳಗುಡ್ಡೆ ಮುಂತಾದ ದಾನಿಗಳು ತಾತ್ಕಾಲಿಕ ಮನೆ ನಿರ್ಮಿಸುವಲ್ಲಿ ಸಹಕರಿಸಿದರು.