24.5 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮಲ್ಲೊಟ್ಟು -ಕೊಯ್ಯೂರು ವಿದ್ಯುತ್ ಫೀಡರ್ ನಲ್ಲಿ ಪರಿಹಾರ ಕಾಣದ ವಿದ್ಯುತ್ ಸಮಸ್ಯೆ.

ಗೇರುಕಟ್ಟೆ: ಮಲ್ಲೊಟ್ಟು-ಕೊಯ್ಯೂರು ಭಾಗದಲ್ಲಿ ವಿದ್ಯುತ್ ಸರಬರಾಜುವಿನಲ್ಲಿ ಪದೇ-ಪದೇ ಸಮಸ್ಯೆಗಳು ಎದುರಾಗುತ್ತಿದ್ದು ಜನರು ಕತ್ತಲೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.

ಕೊಯ್ಯೂರಿನಲ್ಲಿ ಫೀಡರ್ ಇದ್ದು, ಮಲ್ಲೊಟ್ಟುನಿಂದ ಕೊಯ್ಯೂರಿಗೆ ಸಂರ್ಪಕದ ವಿದ್ಯುತ್‌ ಲೈನ್‌ ನಲ್ಲಿ ರಾತ್ರಿಯಿಂದ ಬೆಳಗಿನವರೆಗೆ ವಿದ್ಯುತ್ ಇರುವುದಿಲ್ಲ. ಕೊಯ್ಯೂರು ಮತ್ತು ಮಲ್ಲೊಟ್ಟು ಭಾಗಕ್ಕೆ ಬೇರೆ ಬೇರೆ ಪವರ್ ಮ್ಯಾನ್‌ ಗಳಿದ್ದರೂ ಕೂಡ ಸಮರ್ಪಕವಾಗಿ ಟೀ ಕಟ್ಟಿಂಗ್ ನಡೆಸದ ಪರಿಣಾಮ ವಿದ್ಯುತ್ ಸಮಸ್ಯೆ ಉಂಟಾಗಿದೆ. ಮಲ್ಲೊಟ್ಟು ವಿಭಾಗದ ಪವರ್‌ಮಾನ್‌ಗೆ ಕೇಳಿದರೆ ಕೊಯ್ಯೂರು ಭಾಗದ ಲೈನ್‌ ಸಮಸ್ಯೆ ಎಂದಷ್ಟೇ ಉತ್ತರ ಬರುತ್ತದೆ. ರಾತ್ರಿ ವೇಳೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಬಂದರೆ ಅಥವಾ ಮರ ಬಿದ್ದ ಹಾನಿಯಾದನ್ನು ಮೆಸ್ಕಾಂ ಕಚೇರಿಗೆ ಕರೆ ಮಾಡಿದರೆ, ದೂರವಾಣಿ ಸಂಖ್ಯೆ ಮತ್ತು ವಿಳಾಸ ಕೇಳಿ ಅವರು ಸುಮ್ಮನಾಗುತ್ತಾರೆ. ಈ ಬಗ್ಗೆ ಜೆ.ಇ ಮತ್ತು ಎ.ಇ.ಇ ಅವರಿಗೆ ದೂರು ನೀಡಿದ್ದರು ಅವರಿಂದಲೂ ಕೂಡ ಸಮಸ್ಯೆ ಪರಿಹಾರವಾಗದೆ ಸಾರ್ವಜನಿಕರು ಕತ್ತಲಲ್ಲಿ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿ ಪರಿಹರಿಸದಿದ್ದಲ್ಲಿ ಮಲ್ಲೊಟ್ಟು-ಕೊಯ್ಯೂರು ವಿಭಾಗದ ವಿದ್ಯುತ್ ಬಳಕೆದಾರರು ಕಚೇರಿಯಲ್ಲಿ ಧರಣಿ ಕುಳಿತುಕೊಳ್ಳುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಭಾರತೀಯ ಸೇನೆಗೆ ಆಯ್ಕೆಯಾದ ಬಳಂಜದ ಯುವಕ ಮನೋಹರ್ ಪೂಜಾರಿಯವರಿಗೆ ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ವತಿಯಿಂದ ಗೌರವಾರ್ಪಣೆ

Suddi Udaya

ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 19ನೇ ಬೆಳ್ತಂಗಡಿ ಮಹಿಳಾ ಶಾಖೆಯ ಉದ್ಘಾಟನಾ ಸಮಾರಂಭ

Suddi Udaya

ಶಿರ್ಲಾಲು: ಶ್ರೀ ತುಳಸಿ ಮೆನ್ಸ್ ಪಾರ್ಲರ್ ಶುಭಾರಂಭ

Suddi Udaya

ಕುವೆಟ್ಟು: ಮಾರಿಯಮ್ಮ ದೇವಿಯ ನೂತನ ಕಟ್ಟೆ ನಿರ್ಮಿಸಲು ಭೂಮಿ ಪೂಜೆ

Suddi Udaya

ಉಜಿರೆ ಗ್ರಾಮ ಪಂಚಾಯತ್ ನ ಎಲ್ಲಾ ವಾರ್ಡ್ ಗಳಲ್ಲಿ ಸ್ವಚ್ಛ ಶನಿವಾರದ ಅಂಗವಾಗಿ ಸ್ವಚ್ಛತಾ ಶ್ರಮದಾನ ಹಾಗೂ ಮಾಹಿತಿ ಕಾರ್ಯಾಗಾರ:

Suddi Udaya

ನಿಡ್ಲೆ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ