ಕಲ್ಲೇರಿ: ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಜು. 13ರಂದು ಸಂಘದ ಹೊಸ ಕಟ್ಟಡದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಜಗದೀಶ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ 2023-24ನೇ ಸಾಲಿನಲ್ಲಿ ಸಂಘವು ರೂ.276ಕೋಟಿ ವ್ಯವಹಾರ ನಡೆಸಿ ರೂ.1.15ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ 12% ಡಿವಿಡೆಂಡ್ ಘೋಷಣೆ ಮಾಡಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಂದ್ರ ಪ್ರಸಾದ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ತಾಜುದ್ದೀನ್, ನಿರ್ದೇಶಕರಾದ ರೋಹಿತ್ ಶೆಟ್ಟಿ, ಲಿಂಗಪ್ಪ ನಾಯ್ಕ, ಶ್ರೀಧರ ಗೌಡ, ಜಯಂತಿ ಪಾಲೇದು, ಓಬಯ್ಯ ಪೂಜಾರಿ, ಪುಷ್ಪಲತಾ, ಶೂರ,
ಕಳೆದ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತು ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಮತ್ತು 10 ಮಂದಿ ಸಾಧಕರಿಗೆ ಸನ್ಮಾನಿಸಲಾಯಿತು.
ನಿರ್ದೇಶಕ ಪೂವಪ್ಪ ಬಂಗೇರ ಸ್ವಾಗತಿಸಿ, ಯುವರಾಜ್ ಅನರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಜಯಂತಿ ಪಾಲೆದು ಧನ್ಯವಾದವಿತ್ತರು