April 2, 2025
ಅಪಘಾತಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಪುದುವೆಟ್ಟಿನ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

ಬೆಳ್ತಂಗಡಿ: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಜು.9ರಂದು ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಜು.15ರಂದು ಮೃತಪಟ್ಟಿದ್ದಾರೆ.

ಪುದುವೆಟ್ಟು ಗ್ರಾಮದ ಬಾಜಿದಡಿ ನೋಣಯ್ಯ ಪೂಜಾರಿ-ಮೀನಾಕ್ಷಿ ದಂಪತಿ ಪುತ್ರ ಗಣೇಶ್ (೩೯ ವ) ಮೃತಪಟ್ಟವರು. ಟ್ಯಾಂಕರ್ ಚಾಲಕ ಮಹಮ್ಮದ್ ಆಸಿಫ್ ಎಂಬಾತ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದು, ಈ ವೇಳೆ ಬೈಕ್‌ಗೆ ಡಿಕ್ಕಿಯಾಗಿ ಗಣೇಶ್ ರಸ್ತೆಗೆ ಎಸೆಯಲ್ಪಟ್ಟು, ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ ಪೂರ್ಣಿಮಾ, ತಂದೆ, ತಾಯಿ, ಸಹೋದರ ಯಶೋಧರ, ಸಹೋದರಿ ಪ್ರಮೀಳಾರನ್ನು ಅಗಲಿದ್ದಾರೆ.
ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಹದಗೆಟ್ಟ ರಸ್ತೆ: ಮಡಂತ್ಯಾರು ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಿಂದ ರಸ್ತೆ ದುರಸ್ತಿ

Suddi Udaya

ಸಿನಿಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಬಾರ್ಯದ ಕಲ್ಲಾಜೆಯ ನಿವಾಸಿ ಯುವ ಸಂಗೀತ ನಿರ್ದೇಶಕ ಪ್ರಸಾದ್ ಕೆ ಶೆಟ್ಟಿ

Suddi Udaya

ರಂಜಿತ್ ಎಚ್ ಡಿ ಯವರಿಗೆ ಜೆಸಿಐ ವಲಯ 15ರ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ

Suddi Udaya

ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ

Suddi Udaya

ಬೆಳ್ತಂಗಡಿ ಮಂಜುಶ್ರೀ ಜೆಸಿಐ ವತಿಯಿಂದ ಜೂನಿಯರ್ ಜೇಸಿ ಪದಗ್ರಹಣ ಹಾಗೂ ಯೂತ್ ಡೇ ಕಾರ್ಯಕ್ರಮ

Suddi Udaya

ಕಳೆಂಜ: ಮಿಯಾರು ಪಾದೆ ಮೀಸಲು ರಕ್ಷಿತಾ ಅರಣ್ಯದಲ್ಲಿ ಹಣ್ಣಿನ ಗಿಡ ನೇಡುವ ಕಾರ್ಯಕ್ರಮ

Suddi Udaya
error: Content is protected !!