ಧರ್ಮಸ್ಥಳ : ನೂತನವಾಗಿ ಉದ್ಘಾಟನೆಗೊಂಡ ಉನ್ನತಿ ವಾಣಿಜ್ಯ ಸಂಕೀರ್ಣದಲ್ಲಿ ‘ಆತಿಥ್ಯ ವೆಜ್ ‘ ಇದರ ಉದ್ಘಾಟನಾ ಸಮಾರಂಭವು ಜು.16 ರಂದು ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಮಣೆಗಾರರು ವಸಂತ ಮಂಜಿತ್ತಾಯ ದೀಪ ಬೆಳಗಿಸಿ ಮಾತನಾಡಿ ಧರ್ಮಸ್ಥಳ ಪರಿಸರಕ್ಕೆ ‘ಆದಿತ್ಯ ವೆಜ್’ ಶೋಭೆಯನ್ನು ತಂದಿದೆ. ಗ್ರಾಹಕರಿಗೆ ಶುಚಿ – ರುಚಿಯಾದಂತಹ ಆತಿಥ್ಯವನ್ನು ನೀಡಿ. ಪಾಲುದಾರಿಕೆಯ ನಿಮ್ಮ ಉದ್ಯಮ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.
ಧರ್ಮಸ್ಥಳ ಪ್ರಾ.ಕೃ.ಪ.ಸ. ಅಧ್ಯಕ್ಷ ಪ್ರೀತಮ್ ಡಿ. ಮಾತನಾಡಿ ನೂತನವಾಗಿ ಉದ್ಘಾಟನೆಗೊಂಡ ಉನ್ನತಿ ಕಟ್ಟಡಕ್ಕೆ ‘ಆತಿಥ್ಯ ವೆಜ್’ ಇನ್ನಷ್ಟು ಶೋಭೆಯನ್ನು ತಂದಿದೆ. ಕ್ಷೇತ್ರಕ್ಕೆ ಬರುವಂತಹ ಭಕ್ತರು, ಪ್ರವಾಸಿಗರು ಹಾಗೂ ಸ್ಥಳೀಯರು ಆತಿಥ್ಯ ವೆಜ್ ಗೆ ಬರುವಂತಾಗಲಿ. ಉದ್ಯಮ ಉತ್ತಮ ಅಭಿವೃದ್ಧಿಯಾಗಲಿ ಎಂದು ಶುಭಹಾರೈಸಿದರು.
ವೇದಿಕೆಯಲ್ಲಿ ಧರ್ಮಸ್ಥಳ ಪ್ರಾ.ಕೃ.ಪ.ಸ. ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ಧರ್ಮಸ್ಥಳ ಪ್ರಾ.ಕೃ.ಪ.ಸ. ವ್ಯವಸ್ಥಾಪಕ ಎಂ. ಸತೀಶ್ ಹೊಳ್ಳ, ಅಖಿಲೇಶ್ ಕುಮಾರ್ ಎಂ, ರವಿಕುಮಾರ್, ಹರ್ಷಿತ್ ಕುಮಾರ್ ಜೈನ್, ಮುರಳೀದರದಾಸ್, ಧರ್ಮಸ್ಥಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ದೇವಸ್ಯ ಟಿ.ವಿ. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಲಕರಾದ ನಿಶಾಂತ್ ಹೆಬ್ಬಾರ್ ಮತ್ತು ವಿನಾಯಕ್ ಹಾಗೂ ಬಂಧು-ಮಿತ್ರರು ಉಪಸ್ಥಿತರಿದ್ದರು.
ರೇಖಾ ಪ್ರಶಾಂತ್ ಹೆಬ್ಬಾರ್ ಪ್ರಾರ್ಥಿಸಿದರು. ಮೋಹನ್ ಕೆ. ಧರ್ಮಸ್ಥಳ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.