37.9 C
ಪುತ್ತೂರು, ಬೆಳ್ತಂಗಡಿ
March 6, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ನಡ ನೆಲ್ಲಿಗುಡ್ಡೆ ಅನಾರೋಗ್ಯದಿಂದ ಬಳಲುತ್ತಿರುವ ಶೀನಪ್ಪ ಗೌಡ ಕುಟುಂಬದ ಜೊತೆಗೆ ಹುಟ್ಟುಹಬ್ಬ ಆಚರಿಸಿ ತಾಲೂಕಿಗೆ ಮಾದರಿಯಾದ ನಡ ಪ.ಪೂ. ಕಾಲೇಜು ವಿದ್ಯಾರ್ಥಿ: ಅಕ್ಕಿ, ದವಸಧಾನ್ಯ ವಿತರಣೆ

ನಡ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹರೀಶ್ ರವರ ಹುಟ್ಟುಹಬ್ಬವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ನಡ ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ, ಮನೆಯ ಆಧಾರಸ್ತಂಭವಾಗಿದ್ದ ಶೀನಪ್ಪ ಗೌಡ ಮತ್ತು ಅವರ ಬುದ್ಧಿಮಾಂದ್ಯ ಮಗಳ ಜೊತೆಗೆ ಜೀವನ ಸಾಗಿಸುತ್ತಿರುವ ಕುಟುಂಬದ ಜೊತೆಗೆ ಹರೀಶ್ ತನ್ನ ಹುಟ್ಟುಹಬ್ಬವನ್ನು ಆಚರಿಸಿದರು. ತನ್ನ ಹುಟ್ಟುಹಬ್ಬದ ಆಚರಣೆಗಾಗಿ ಈ ಕುಟುಂಬಕ್ಕೆ ಅಕ್ಕಿ, ದವಸಧಾನ್ಯಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಗೆಳೆಯರಾದ ದೀಕ್ಷಿತ್, ರಕ್ಷಿತ್, ಜೀತೆಶ್, ಕಿರಣ್. ನಿತಿನ್, ಯತೀಶ್, ಪ್ರಣಿತ್ ಉಪಸ್ಥಿತರಿದ್ದರು. ಈಗಿನ ವಿದ್ಯಾರ್ಥಿ, ಯುವಜನರು ಹುಟ್ಟುಹಬ್ಬವನ್ನು ಮೋಜು, ಮಸ್ತಿನಲ್ಲಿ ಆಚರಣೆ ಮಾಡುವ ಮೂಲಕ ಹಣವನ್ನು ಪೋಲು ಮಾಡುತ್ತಿರುವ ಈ ಸಂದರ್ಭದಲ್ಲಿ ಪಿಯುಸಿ ವಿದ್ಯಾರ್ಥಿಯ ಹುಟ್ಟುಹಬ್ಬ ಆಚರಣೆ ಇತರರಿಗೆ ಮಾದರಿಯಾಗಿದೆ.

Related posts

ಜು.13: ಮಡಂತ್ಯಾರು ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಉಚಿತ ಆರೋಗ್ಯ ತಪಾಸಣಾ ಶಿಬಿರ, ಸಾಧಕ ರೈತರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ

Suddi Udaya

ಶಿಶಿಲ: ಕಂಚಿನಡ್ಕ ನಿವಾಸಿ ಸುಂದರಿ ನಿಧನ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಕಾಯರ್ತಡ್ಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ರವರಿಗೆ ಸನ್ಮಾನ

Suddi Udaya

ಶಾಲಾ ವಾಹನ ಡಿಕ್ಕಿ: ಪಾದಾಚಾರಿ ಕಡಿರುದ್ಯಾವರ ನಿವಾಸಿ ಸುರೇಶ್‌ ನಾಯ್ಕ ಮೃತ್ಯು

Suddi Udaya

ಮೇಲಂತಬೆಟ್ಟು : ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

Suddi Udaya

ಕಾರು – ಬೈಕ್ ಅಪಘಾತ: ಬೈಕ್ ಸವಾರ ನಾವೂರಿನ ಚಂದ್ರಹಾಸ ಮೃತ್ಯು

Suddi Udaya
error: Content is protected !!