30.8 C
ಪುತ್ತೂರು, ಬೆಳ್ತಂಗಡಿ
April 13, 2025
Uncategorized

ಸುದ್ದಿ ಉದಯ ಫಲಶ್ರುತಿ: ಬಂದಾರು ಬೋಲೋಡಿ ಎಂಬಲ್ಲಿ ಗುಡ್ಡ ಕುಸಿತ ವರದಿ ಬೆನ್ನಲ್ಲೇ ಗ್ರಾ.ಪಂ. ನಿಂದ ತಕ್ಷಣ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ

ಬಂದಾರು : ಬಂದಾರು ಗ್ರಾಮದ ಮೈರೋಳ್ತಡ್ಕ, ಶಿವನಗರ – ಪೆರ್ಲಬೈಪಾಡಿ ಸಂಪರ್ಕಿಸುವ ಮುಖ್ಯ ರಸ್ತೆಯ ಬೋಲೋಡಿ ಎಂಬಲ್ಲಿನ ಸೇತುವೆ ಪಕ್ಕದಲ್ಲಿ ರಾತ್ರಿ ಸುರಿದ ವಿಪರೀತ ಮಳೆಯ ಪರಿಣಾಮ ಗುಡ್ಡ ಕುಸಿದು ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಈ ಬಗ್ಗೆ ಸುದ್ದಿ ಉದಯ ಆನ್ ಲೈನ್ ವರದಿ ಪ್ರಕಟಿಸಿದ ಕೂಡಲೇ ಸ್ಪಂದಿಸಿದ ಗ್ರಾ.ಪಂ. ನವರು ಜೆಸಿಬಿ ಮುಖಾಂತರ ಮಣ್ಣು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ರವರು ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಮುಗ್ರೋಡಿ ಕನ್ ಸ್ಟ್ರಕ್ಷನ್ ನವರಿಗೆ ತಿಳಿಸಿದಾಗ ಮಣ್ಣು ತೆರವು ಕಾರ್ಯಕ್ಕೆ ಸ್ಥಳಕ್ಕೆ ಎರಡೂ ಜೆಸಿಬಿ ಕಳುಹಿಸಿ ಮಣ್ಣು ತೆರವು ನಡೆಸಿದರು. ಸ್ಥಳಕ್ಕೆ ಬಂದಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಪಂಚಾಯತ್ ಸದಸ್ಯೆ ಸುಚಿತ್ರ ಮುರ್ತಾಜೆ ಆಗಮಿಸಿ ಪರಿಶೀಲನೆ ನಡೆಸಿದರು.

Related posts

ಕಕ್ಕಿಂಜೆ ಶ್ರೀಕೃಷ್ಣ ಸ್ಟೋರ್ ಗೆ ನುಗ್ಗಿದ ಕಳ್ಳ

Suddi Udaya

ಭಾರೀ ಮಳೆಯಿಂದಾಗಿ ಹದಗೆಟ್ಟ ರಸ್ತೆ : ಸೋಮಂತ್ತಡ್ಕದಲ್ಲಿ ಗಂಟೆಗಟ್ಟಲ್ಲೇ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ

Suddi Udaya

ಅಳದಂಗಡಿ: ಕಿಶೋರ್-ಕಾವ್ಯ ದಂಪತಿ ವಿವಾಹ ಭೋಜನಾ ಕೂಟಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾ ಕುಮಾರಿ ಭಾಗಿ

Suddi Udaya

ಬೆಳ್ತಂಗಡಿ: ಅಪ್ಸರಾ ಫ್ಯಾಶನ್ ಸೆಂಟರ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ಕ್ರಿಸ್ ಮಸ್ ಮತ್ತು ಹೊಸ ವರುಷದ ಪ್ರಯುಕ್ತ ಸ್ಪೆಷಲ್ ಆಫರ್: ಪ್ರತಿ ಖರೀದಿಯ ಮೇಲೆ ಶೇ.20 ಡಿಸ್ಕೌಂಟ್

Suddi Udaya

ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾಗಿ ಮರಿಟಾ ಪಿಂಟೋ

Suddi Udaya

ಪ್ರೌಢಶಾಲಾ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ: ನಯನಾಡು ಸ.ಪ್ರೌ. ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ