25.4 C
ಪುತ್ತೂರು, ಬೆಳ್ತಂಗಡಿ
April 9, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸ್ವಾತಿ ಸೂರಜ್ ನೆಲ್ಲಿತ್ತಾಯ ಶಿಶಿಲ ಇವರ ಚೊಚ್ಚಲ ಕವನ ಸಂಕಲನ “ಮಂಜರಿ” ಬಿಡುಗಡೆ

ಬೆಳ್ತಂಗಡಿ: ವಿಜಯ್ ಕುಮಾರ್ ಜೈನ್ ಸಾರಥ್ಯದ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ವತಿಯಿಂದ ಧರ್ಮಸ್ಥಳ ಪ್ರಣವ್ ಸಭಾಂಗಣದಲ್ಲಿ ಜು.21 ರಂದು ನಡೆದ ಪದಗ್ರಹಣ ಸಮಾರಂಭದಲ್ಲಿ ಸ್ವಾತಿ ಸೂರಜ್ ನೆಲ್ಲಿತ್ತಾಯ ಶಿಶಿಲ ಇವರ ಚೊಚ್ಚಲ ಕವನ ಸಂಕಲನ “ಮಂಜರಿ” ಬಿಡುಗಡೆಗೊಂಡಿತು.

ಮಕ್ಕಳಿಗಾಗಿಯೇ 26 ಗೀತೆಗಳನ್ನು ಒಳಗೊಂಡ ಈ ಪುಸ್ತಕವನ್ನು ಕರ್ನಾಟಕದ ಮುದ್ದು ಮಕ್ಕಳಿಗೆ ಅರ್ಪಿಸಿದರು. ಮುನ್ನುಡಿಯನ್ನು ದಿನೇಶ್ ಹೊಳ್ಳ ರವರು ಬರೆದಿದ್ದು, ಮುಖಪುಟ ವಿನ್ಯಾಸವನ್ನು ಪ್ರಾಂಜಲಿ ನಾವಡ ರಚಿಸಿದ್ದಾರೆ.

ಉಜಿರೆಯ ಉದ್ಯಮಿ ಲ|ನಿತ್ಯಾನಂದ ನಾವರ ಈ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ವಿಜಯ್ ಕುಮಾರ್ ಜೈನ್ ಆಮಂತ್ರಣ, ಕಲಾಪೋಷಕ ಭುಜಬಲಿ ಧರ್ಮಸ್ಥಳ , ಧರ್ಮಸ್ಥಳ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್. ಡಿ, ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ ಸುವರ್ಣ, ಉಜಿರೆ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪಿ ಹೆಚ್.ಪ್ರಕಾಶ್ ಶೆಟ್ಟಿ, ಬೆಳ್ತಂಗಡಿ ಜೆಸಿಐ ಅಧ್ಯಕ್ಷ ರಂಜಿತ್ ಎಚ್ ಡಿ, ಉಜಿರೆ ಡೆಂಟಲ್ ಕ್ಲಿನಿಕ್ ನ ದೀಪಾಲಿ ಡೋಂಗ್ರೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

ಪೆರೋಡಿತ್ತಾಯಕಟ್ಟೆ ಶಾಲೆಗೆ ಬ್ಯಾರಿ ಕೇಡ್ ಕೊಡುಗೆ

Suddi Udaya

ಧರ್ಮಸ್ಥಳ : ಇಬ್ಬರು ಸರಕಳ್ಳಿಯರನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ನಡ ಗ್ರಾ.ಪಂ ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ತಯಾರಿ ಬಗ್ಗೆ ವಿಶೇಷ ಗ್ರಾಮ ಸಭೆ

Suddi Udaya

ನಾರಾವಿಯಲ್ಲಿ ನಿರ್ಮಿಸಲಾದ ಚೆಕ್ ಪೋಸ್ಟ್ ಗೆ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ, ಪರಿಶೀಲನೆ

Suddi Udaya

ಗರ್ಡಾಡಿ ಶಕ್ತಿ ಕೇಂದ್ರದಲ್ಲಿ ಮೂರನೇ ಸುತ್ತಿನ ಬಿರುಸಿನ ಮತಯಾಚನೆ

Suddi Udaya

ತೆoಕಕಾರಂದೂರು ತಾರೆದೊಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!