September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿದ್ಯುತ್ ತಂತಿಗೆ ತಾಗಿದ ಕಾಂಕ್ರೀಟ್ ಮಿಕ್ಸಿಂಗ್ ಲಾರಿ : ರಸ್ತೆಗೆ ಉರುಳಿದ ಎರಡು ವಿದ್ಯುತ್ ಕಂಬ

ಬೆಳ್ತಂಗಡಿ: ಕಾಂಕ್ರೀಟ್ ಮಿಕ್ಸಿಂಗ್ ಲಾರಿಯೊಂದು ವಿದ್ಯುತ್ ತಂತಿಗಳನ್ನು ಎಳೆದಾಡಿ, ಎರಡು ವಿದ್ಯುತ್ ಕಂಬಗಳನ್ನು ರಸ್ತೆಗೆ ಉರುಳಿಸಿದ ವಿದ್ಯಮಾನ ನಾಲ್ಕೂರು ಗ್ರಾಮದ ಸೂಳಬೆಟ್ಟು ಎಂಬಲ್ಲಿ ತಡರಾತ್ರಿ ನಡೆದಿದೆ.

ವೇಣೂರು- ಅಳದಂಗಡಿ ರಸ್ತೆಯಲ್ಲಿನ ಸೂಳಬೆಟ್ಟು ಎಂಬಲ್ಲಿ ರಾತ್ರಿ, ಲಾರಿಯ ಚಾಲಕ ಮೇಲಿರುವ ತಂತಿಗಳನ್ನು ಗಮನಿಸದೆ ಚಲಾಯಿಸಿದ್ದರಿಂದ ತಂತಿಗಳು ವಾಹನಕ್ಕೆ ಸಿಲುಕಿವೆ. ಅದು ಚಾಲಕನ‌ ಗಮನಕ್ಕೆ ಬಾರದೆ ಆತ ಏಕಾಏಕಿ ಮುಂದುವರಿದಿದ್ದಾನೆ ಇದರಿಂದ ತಂತಿಗಳೊಂದಿಗೆ ಎರಡು ಜೋಡಿ ಕಂಬಗಳು ರಸ್ತೆಗೆ ಅಡ್ಡಲಾಗಿ ಬೀಳುವಂತಾಗಿದೆ. ತಂತಿಗಳ ಘರ್ಷಣೆಯಿಂದ ಭಾರೀ ಬೆಂಕಿ ಕಾಣಿಸಿತ್ತು.


ಕಾರ್ಕಳದ ಕನ್ಸ್ಟ್ರಕ್ಷನ್ ವೊಂದರ ಲಾರಿಯಾಗಿದ್ದು ಅದನ್ನು ಅಳದಂಗಡಿಯಲ್ಲಿ ತಡೆಹಿಡಿಯಲಾಗಿದೆ. ಚಾಲಕ ಹಾವೇರಿಯವರಾಗಿದ್ದಾರೆ.
ಸ್ಥಳಕ್ಕೆ ಮೆಸ್ಕಾಂ ಇಂಜಿನಿಯರ್, ವೇಣೂರು ಠಾಣೆಯ ವೆಂಕಟೇಶ್ ಭೇಟಿ ನೀಡಿದ್ದಾರೆ. ಘಟನೆಯಿಂದಾಗಿ ಘನ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

Related posts

ಮಚ್ಚಿನ: ಕುದ್ರಡ್ಕ ಭಜನೋತ್ಸವ-2026 ಕಾರ್ಯಕ್ರಮ

Suddi Udaya

ಉಜಿರೆ ಎಸ್. ಡಿ.ಎಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪೌರತ್ವ ತರಬೇತಿ ಶಿಬಿರ ಸಮಾರೋಪ

Suddi Udaya

ಓಡೀಲು ಶ್ರೀ ಕ್ಷೇತ್ರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಉಡುಪಿ ಪೇಜಾವರ ಸ್ವಾಮೀಜಿ ಬೇಟಿ

Suddi Udaya

ಕಡಿರುದ್ಯಾವರ ಶ್ರೀ ವನದುರ್ಗಾದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಎಕ್ಸೆಲ್ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಇವರಿಗೆ ಅಭಿನಂದನೆ

Suddi Udaya

ನಡ ಅಂತ್ರಾಯ ಗುಂಡಿಗೆ ಸ್ನಾನಕ್ಕೆ ಬಂದಿದ್ದ ನಾಲ್ವರಲ್ಲಿ ಓವ೯ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು

Suddi Udaya

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!