25.5 C
ಪುತ್ತೂರು, ಬೆಳ್ತಂಗಡಿ
September 18, 2026
Uncategorized

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಪೊಸಳ್ಳಿ ಬಿ.ಸಿ.ರೋಡು: ನೂತನ ಪದಾಧಿಕಾರಿಗಳ ಆಯ್ಕೆ

ಸಂಘದ ನೂತನ ಅಧ್ಯಕ್ಷರಾಗಿ ಬಿ. ರಮೇಶ್ ಸಾಲಿಯಾನ್ ಸಂಚಯಗಿರಿ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಎಸ್ ಸಂಪಾಜೆ, ಕೋಶಾಧಿಕಾರಿ ಸೋಮನಾಥ್ ಸಾಲಿಯಾನ್ ಆಯ್ಕೆ

ಬಿ. ರಮೇಶ್ ಸಾಲಿಯಾನ್

ಸತೀಶ್ ಎಸ್. ಸಂಪಾಜೆ

ಸೋಮನಾಥ್. ಸಾಲಿಯಾನ್

ಬಂಟ್ವಾಳ: ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಪೊಸಳ್ಳಿ ಬಿ.ಸಿ.ರೋಡು ಇದರ 2026-28 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಜೂ.14 ರಂದು ಜರುಗಿತು.
ಸಂಘದ ನೂತನ ಅಧ್ಯಕ್ಷರಾಗಿ ದ್ವಿತೀಯ ಬಾರಿಗೆ ಬಿ. ರಮೇಶ್ ಸಾಲಿಯಾನ್ ಸಂಚಯಗಿರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಎಸ್ ಸಂಪಾಜೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ರಾಗಿ ಗಣೇಶ್ ಮರ್ದೋಳಿ, ಜೊತೆ ಕಾರ್ಯದರ್ಶಿಗಳಾಗಿ ಜಯಂತ್ ಕುಲಾಲ್ ವಗ್ಗ ಮತ್ತು ಶ್ರೀಮತಿ ಪ್ರೇಮಾ ಜನಾರ್ಧನ್ ಪೊಸಳ್ಳಿ, ತೃತೀಯ ಬಾರಿಗೆ ಕೋಶಾಧಿಕಾರಿ ಸೋಮನಾಥ್ ಸಾಲಿಯಾನ್, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಆಶಾ ಗಿರಿಧರ್ , ಸೇವಾ ದಳಪತಿ ಚಂದ್ರ ಶೇಖರ್ ಕಾಮಾಜೆ ಆಯ್ಕೆಯಾಗಿದ್ದಾರೆ.
ಮಹಿಳಾ ಸಂಘದ ಅಧ್ಯಕ್ಷೆ ಯಾಗಿ ವಾರಿಜಾ ಚೇತನ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮಚ್ಚೇಂದ್ರ ಸಾಲಿಯಾನ್, ಶ್ರೀ ಮತಿ ಜಲಜಾಕ್ಷಿ ಕುಲಾಲ್, ಜನಾರ್ಧನ ಬೊಂಡಾಲ, ರಮೇಶ್ ಸಾಲಿಯಾನ್ ಗುರುಕೃಪಾ, ಮಾಧವ ಕುಲಾಲ್ ಬಿ.ಸಿ ರೋಡ್, ಕವಿತಾ ಯಾದವ ಅಗ್ರಬೈಲ್, ಸುರೇಶ್ ಕುಲಾಲ್ ಬಂಟ್ವಾಳ ಹಾಗೂ ಶ್ರೀ ಮತಿ ಸುಶೀಲ ಲಿಂಗಪ್ಪ ಇವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಮಚ್ಚೇಂದ್ರ ಸಾಲ್ಯಾನ್ , ಮಾಧವ ಕುಲಾಲ್ ಬಿ.ಸಿ.ರೋಡು, ಶ್ರೀ ಮತಿ ಜಲಜಾಕ್ಷಿ ಕುಲಾಲ್ ಸಹಕರಿಸಿದರು.
ಸರ್ಕಾರದ ಅನುದಾನವನ್ನು ತರುವಲ್ಲಿ ಶ್ರಮವಹಿಸಿದ ಕಟ್ಟಡ ಸಮಿತಿಯ ಅಧ್ಯಕ್ಷರಾದ ಸುರೇಶ್ ಕುಮಾರ್ ನಾವೂರವರನ್ನು ಅಭಿನಂದಿಸಲಾಯಿತು.
ಜಯಂತ ಕುಲಾಲ್ ವಗ್ಗ ಧನ್ಯವಾದ ನೀಡಿದರು.

Related posts

ಪುಂಜಾಲ್ ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಲಿಕಾ ಹಬ್ಬ ಮಕ್ಕಳ ಪ್ರತಿಭೆಗಳ ಅನಾವರಣ

Suddi Udaya

ಹದಗೆಟ್ಟ ರಾಜ್ಯದ ಆರ್ಥಿಕತೆ ತುಂಬಲು ಕುಮ್ಕಿ ಭೂಮಿಯ ಕಬಳಿಕೆಗೆ ಸರಕಾರದ ಹುನ್ನಾರ: ಬಿಜೆಪಿ ರೈತ ಮೋರ್ಚಾ ಆಕ್ರೋಶ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ವಿಡಿಯೋ: ಯುವಕನ ಮೇಲೆ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ: ಶೇಂದಿ ತೆಗೆಯುವ ವೇಳೆ ವ್ಯಕ್ತಿ ಮರದಿಂದ ಬಿದ್ದು ಸಾವು

Suddi Udaya

ಚಾರ್ಮಾಡಿ ಘಾಟಿ ಅರಣ್ಯದಲ್ಲಿ ಬೆಂಕಿ

Suddi Udaya

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ

Suddi Udaya
error: Content is protected !!