ಉಜಿರೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಜುಲೈ 22 ರಿಂದ 28ರ ವರೆಗೂ ಭಾರತ ಸರ್ಕಾರ ಶಿಕ್ಷಣ ಸಚಿವಾಲಯದ ಸಿ.ಬಿ.ಎಸ್.ಇ ಬೋರ್ಡ್ ಆಯೋಜಿಸಿರುವ “ಶಿಕ್ಷಾ ಸಪ್ತಾಹ” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಿ.ಬಿ.ಎಸ್.ಇ ಬೋರ್ಡ್ ಸೂಚಿಸಿರುವ ಏಳು ದಿನಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಶಾಲೆಯಲ್ಲಿ ನಡೆಸಲಾಯಿತು.
ಮೊದಲನೇ ದಿನ ಜು22 ಟಿ.ಎಲ್.ಎಮ್ ದಿನ, ಜು23 ಎಫ್.ಎಲ್.ಎಮ್ ದಿನ, ಜು24 ಗ್ರಾಮೀಣ ಕ್ರೀಡಾ ದಿನ, ಜು25 ಸಾಂಸ್ಕೃತಿಕ ದಿನ, ಜು26 ಕೌಶಲ್ಯ ಮತ್ತು ಡಿಜಿಟಲ್ ಉಪಕ್ರಮಗಳ ದಿನ, ಜು27 ಜೀವನಕ್ಕಾಗಿ ಎಕೋ ಕ್ಲಬ್ ದಿನ, ಜು28 ಸಮುದಾಯದಲ್ಲಿ ಒಳಗೊಳ್ಳುವ ದಿನ. ಈ ವಿಷಯಗಳಿಗೆ ಸಂಬಂಧಿಸಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.