25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ಬೀಳುವ ಹಂತದಲ್ಲಿದ್ದ ಮನೆಯನ್ನು ಸರಿಪಡಿಸಿದ ಗ್ರಾಮಸ್ಥರು, ಸತೀಶ್ ದೇವಾಡಿಗರ ಸೇವಾ ಮನೋಭಾವ ಶ್ಲಾಘನೀಯ

ಬಳಂಜ: ಬಳಂಜ ಗ್ರಾಮದ ಕಜೆಕೋಡಿ ದರ್ಖಾಸು ನಿವಾಸಿ ರಾಜೇಶ್ ಆಚಾರಿರವರ ಮನೆಯು ಭಾರಿ ಮಳೆಗೆ ಬೀಳುವ ಸ್ಥಿತಿಯಲ್ಲಿತ್ತು. ಇದನ್ನು ಮನಗಂಡ ಸಮಾಜ ಸೇವಕರಾದ ಸತೀಶ್ ದೇವಾಡಿಗರ ನೇತೃತ್ವದಲ್ಲಿ ಯುವ ನಾಯಕರುಗಳಾದ ಪುರಂದರ ಪೂಜಾರಿ ಪೇರಾಜೆ, ಅಶ್ವಿನ್ ಕುಮಾರ್ ಬೊಂಟ್ರೋಟ್ಟು, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ದಿನೇಶ್ ಪಿ.ಕೆ, ದೇವಿ ಪ್ರಸಾದ್ ಶೆಟ್ಟಿ,ದೇಜಪ್ಪ ಪೂಜಾರಿ,ರಮನಾಥ್ ಶೆಟ್ಟಿ, ಸಮಾಜಸೇವಕರಾದ ಸದಾನಂದ ಪೂಜಾರಿ ಬೊಂಟ್ರೋಟ್ಟು, ಪಂಚಾಯತ್ ಸದಸ್ಯರಾದ ರವೀಂದ್ರ. ಬಿ.ಅಮೀನ್ , ಪ್ರಶಾಂತ್ ಶೆಟ್ರು ಕಜೆಕೋಡಿ,ಪುರುಷೋತ್ತಮ ಅಚಾರಿ ಅಟ್ಲಾಜೆ,ಪ್ರವೀಣ್ ಪೂಜಾರಿ ಮುಡಯಿಬೆಟ್ಟು, ಸದಾನಂದ ತೋಟದಪಲ್ಕೇ, ಅನ್ವಿತ್ ಕುಮಾರ್ ಮುಡಯಿಬೆಟ್ಟು, ರೂಪಾ ಮುಡಯಿಬೆಟ್ಟು,ತುಳಸಿ ಅಟ್ಲಾಜೆ, ಪ್ರೇಮಾ ಅಶೋಕ್ ಮುಡಾಯಿಬೆಟ್ಟು ಇವರೆಲ್ಲರ ಸಹಕಾರದಿಂದ ಮನೆಯ ಮಾಡಿಗೆ ಟಾರ್ಪಲ್ ಹಾಕಿ ಮಳೆಯ ನೀರು ಸೊರದಂತೆ ತಕ್ಕ ಮಟ್ಟಿನ ವ್ಯವಸ್ಥೆ ಮಾಡಲಾಗಿದೆ.

ಬಾವಿಯಿಂದ ನೀರು ತೆಗೆಯಲು ವ್ಯವಸ್ಥೆ ಕೂಡ ಇರಲಿಲ್ಲ ಅದಕ್ಕೆ ಬೇಕಾಗುವ ಮರದ ದಿಂಬುನ ವ್ಯವಸ್ಥೆ ಕೂಡ ಮಾಡಲಾಯಿತು. ಮಾನವೀಯ ನೆಲೆಯಲ್ಲಿ ಸಹಕಾರ ಕೊಟ್ಟ ಎಲ್ಲ ಹಿರಿಯರಿಗೆ,ಸಹೋದರ ಸಹೋದರಿಯರಿಗೆ ರಾಜೇಶ್ ಕುಟುಂಬದವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Related posts

ಮೂರು ಜನ ವಿಶೇಷ ಚೇತನರನ್ನು ಒಳಗೊಂಡ ಬಡ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯತ್ ನಿಂದ ನೆರವು

Suddi Udaya

ಸ್ಪರ್ಧಾತ್ಮಕ ಪರೀಕ್ಷೆ: ಕು. ಅಂಚಿತಾ ಡಿ. ಜೈನ್ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Suddi Udaya

ಕಲ್ಮಂಜ ಸ.ಹಿ.ಪ್ರಾ. ಶಾಲೆಯ ಶತಮಾನೋತ್ಸವ ವರ್ಷದ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಮನವಿ ಪತ್ರಗಳ ಬಿಡುಗಡೆ

Suddi Udaya

ಉಜಿರೆ: ಎಸ್.ಡಿ.ಎಂ. ಮಹಿಳಾ ಐಟಿಐಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ

Suddi Udaya

ಮದಕುಡೆ ಕುಟುಂಬಸ್ಥರಿಂದ ಪೆರಿಂಜೆ ಸ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಉಸ್ಮಾನ್ ಗರ್ಡಾಡಿರವರು ಪ್ರಮುಖ ಅಗ್ನಿಶಾಮಕ ಹುದ್ದೆಗೆ ಪದೋನ್ನತಿಗೊಂಡು ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ನಿಯುಕ್ತಿ

Suddi Udaya
error: Content is protected !!