25.5 C
ಪುತ್ತೂರು, ಬೆಳ್ತಂಗಡಿ
July 23, 2026
ಸರ್ಕಾರಿ ಇಲಾಖಾ ಸುದ್ದಿ

ಮೊಳಹಳ್ಳಿ ಶಿವರಾಯರ 124ನೇ ಜನ್ಮದಿನೋತ್ಸವ

ಬೆಳ್ತಂಗಡಿ :ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಪಿ ತಾಮಹ ಎಂದೇ ಖ್ಯಾತರಾದ ಮೊಳಹಳ್ಳಿ ಶಿವರಾಯರ 124ನೇ ಜನ್ಮದಿನೋತ್ಸವವನ್ನು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೇಂದ್ರ ಕಚೇರಿಯಲ್ಲಿ ಆಚರಿಸಲಾಯಿತು.
ವೃತ್ತಿಯಲ್ಲಿ ವಕೀಲರಾಗಿದ್ದ ಶಿವರಾಯರು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿ, ಪುತ್ತೂರು ಟೌನ್ ಕೋ ಆಪರೇಟಿವ್ ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿ ಜಿಲ್ಲೆಯಾದ್ಯಂತ ಹಲವಾರು ಸಹಕಾರಿ ಸಂಘಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಹಕಾರಿ ಕ್ಷೇತ್ರದ ಮೂಲಕ ಕೃಷಿಕರ ಕೃಷಿ ಕಾರ್ಮಿಕರ ಬಗ್ಗೆ ಅಪಾರ ಕಾಳಜಿ ವಹಿಸಿ, ಮಧ್ಯವರ್ತಿಗಳನ್ನು ತಪ್ಪಿಸಿ ನೇರವಾಗಿ ಕೃಷಿಕರಿಗೆ ಸಹಕಾರಿ ಸಂಘಗಳ ಮೂಲಕ ಸಾಲವನ್ನು ಒದಗಿಸುವ ಯೋಜನೆಯನ್ನು ಆರಂಭಿಸಿದ ಕೀರ್ತಿ ಶಿವರಾಯರಿಗೆ ಸಲ್ಲುತ್ತದೆ. ಸಹಕಾರಿ ಕ್ಷೇತ್ರವಲ್ಲದೆ, ಶಿವರಾಮ ಕಾರಂತರ ಜೊತೆ ಸೇರಿ ಹಳ್ಳಿಹಳ್ಳಿಗಳಲ್ಲಿ ಶಾಲೆಗಳನ್ನು ಆರಂಭಿಸಿದರು. ಇವರ ಜೀವನ ಮೌಲ್ಯಗಳನ್ನು ಅರಿತು ಗ್ರಾಮೀಣ ಜನರ ಅಭಿವೃದ್ಧಿಗೆ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಸಹಕಾರಿಗಳೆಲ್ಲ ಅಳವಡಿಸಿಕೊಳ್ಳಬೇಕಾಗಿದೆಯೆಂದು ನಾರಾಯಣ ಫಡಕೆ ಮುಂಡಾಜೆ ಅಭಿಪ್ರಾಯ ಪಟ್ಟರು. ಸಂಘದ ಅಧ್ಯಕ್ಷ ಜನಾರ್ಧನ ನೂಜಿ ಶಿವರಾಯರ ಆದರ್ಶವನ್ನು ಅಳವಡಿಸಿಕೊಳ್ಳುವಂತೆ ಕೇಳಿಕೊಂಡರು.ಸಂಘದ ನಿರ್ದೇಶಕರಾದ ಜ್ಯೋತಿ ಪಡಕೆ ,
,ಕೊರಗಪ್ಪ ನಾಯ್ಕ ಸುಮಾ ಗೋಖಲೆ, ಸಿಇಓ ಚಂದ್ರಕಾಂತ ಪ್ರಭು ಉಪಸ್ಥಿತರಿದ್ದರು. ಸಂಘದ, ಸ್ನೇಹ ಸ್ವಾಗತಿಸಿ ಶಾಖಾವ್ಯವಸ್ಥಾಪಕ ಸದಾನಂದ ಧನ್ಯವಾದ ಅರ್ಪಿಸಿದರು.ಶಾಖಾ ವ್ಯವಸ್ಥಾಪಕ ಪ್ರಸನ್ನ ಪರಾಂಜಪೆ ಕಾರ್ಯಕ್ರಮ ನಿರ್ವಹಿಸಿದರು.

Related posts

ಗ್ರಾಮಕರಣಿಕ ಮಹೇಶ್ ಗೆ ಜೈಲು ಶಿಕ್ಷೆ

Suddi Udaya

ಲೋಕಾಯುಕ್ತ ಪೊಲೀಸರಿಂದ
ಪಂಚಾಯತ್ ರಾಜ್ ಎ.ಇ ರೂಪಾ ಬಂಧನ

Suddi Udaya

ಡಾ. ಡಿ. ವೀರೇಂದ್ರ ಹೆಗ್ಗಡೆ ಪರ ಪ್ರತಿಬಂಧಕಾದೇಶ ಜಾರಿಗೊಳಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ಸೂಚನೆ

Suddi Udaya

ಬೆಳ್ತಂಗಡಿ: ರೈತರು ಫ್ರುಟ್ಸ್ ಐ.ಡಿ. ಮಾಡಿಸಿಕೊಳ್ಳುವಂತೆ ತಹಶೀಲ್ದಾರ್ ಪೃಥ್ವಿ ಸಾನಿಕಂ ಮನವಿ

Suddi Udaya

ತೆಕ್ಕಾರು ಗ್ರಾ.ಪಂ. ನ ಪ್ರಥಮ ಹಂತದ ಗ್ರಾಮಸಭೆ

Suddi Udaya

51ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಸರಕಾರ ಆದೇಶ

Suddi Udaya
error: Content is protected !!