ಉಜಿರೆ: 2024 25 ನೇ ಸಾಲಿನ ಮೊದಲನೇ ತಿಂಗಳ ತಿರುಳು ಕಾರ್ಯಕ್ರಮದ ಅಂಗವಾಗಿ ವರ್ಷದ ಯಕ್ಷಗಾನ ಕೇಂದ್ರದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀಮತಿ ಸೋನಿಯಾ ಯಶೋವರ್ಮ ಆಗಮಿಸಿ ಯಕ್ಷಗಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಯುವರಾಜ ಪೂವಣಿ , ಪಠ್ಯೇತರ ಸಮಿತಿಯ ಸಂಯೋಜಕರು ಡಾ. ಸುಧೀರ್, ಕನ್ನಡ ವಿಭಾಗದ ಮುಖ್ಯಸ್ಥರು ಡಾ. ಭೋಜಮ್ಮ, ಕಲಾ ವೈಭವದ ಮುಖ್ಯಸ್ಥರಾದ ತೃಪ್ತ ಜೈನ್, ಕನ್ನಡ ಪ್ರಾಧ್ಯಾಪಕರಾದ ಭವ್ಯಶ್ರೀ, ರಂಗ ತರಬೇತುದಾರರಾದ ಯಶವಂತ್ ಬೆಳ್ತಂಗಡಿ, ಯಕ್ಷಗಾನ ಗುರುಗಳಾದ ಅರುಣ್ ಕುಮಾರ್ ಧರ್ಮಸ್ಥಳ, ಸಂಸ್ಕೃತ ಪ್ರಾಧ್ಯಾಪಕರಾದ ಶ್ರೇಯಸ್ ಪಾಲಂದೆ, ಹಾಗೂ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಡಾ. ಸುಧೀರ್ ಇವರು ಯಕ್ಷಗಾನ ವಿಶ್ವಗಾನ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕಳೆದ ವರ್ಷದ ಕಾರ್ಯ ಚಟುವಟಿಕೆಯ ಪುಸ್ತಕದ ಬಿಡುಗಡೆ ಕಾರ್ಯಕ್ರಮವನ್ನು ಸೋನಿಯಾ ಯಶವರ್ಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಪೂರನ್ ವರ್ಮ ಇವರಿಗೆ ಯಕ್ಷಗಾನ ಹಾಡಿನ ಮೂಲಕ ಸಿಂಚನ ಹಾಗೂ ತಂಡದವರು ಗೌರವ ಸಲ್ಲಿಸಲಾಯಿತು. ಹಾಗೂ ಯಕ್ಷಗಾನದ ಗುರುಗಳಾದ ಅರುಣ್ ಕುಮಾರ್ ಧರ್ಮಸ್ಥಳ ಧನ್ಯವಾದವನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸುಮಾರು 80 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸೌರವ ಶೆಟ್ಟಿ ನಿರ್ವಹಿಸಿದರು.