25.7 C
ಪುತ್ತೂರು, ಬೆಳ್ತಂಗಡಿ
September 20, 2026
Uncategorized

ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಟ್ಟದ ಪ್ರತಿಭಾ ಕಾರಂಜಿ

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಆ. 7 ರಂದು ಶಾಲಾ ಮಟ್ಟದ ಪ್ರತಿಭಾ ಕಾರಂಜಿಯು ನಡೆಯಿತು.

ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀಮತಿ ಬೆನೆಡಿಕ್ಟ ಡಿಸಿಲ್ವರವರು ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಶಿಕ್ಷಕರು ಮತ್ತು ಪೋಷಕರ ಪ್ರೋತ್ಸಾಹದೊಂದಿಗೆ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕೆಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಶಾಲಾ ಸಂಚಾಲಕರು ಅತೀ ವಂ ಫಾ ವಾಲ್ಟರ್ ಓಸ್ವಲ್ಡ್ ಡಿಮೆಲ್ಲೋ ರವರು ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಬಾಚಿಕೊಂಡು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕೆಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪರ್ಧೆಗಳ ನಿಯಮಗಳನ್ನು ತಿಳಿಸಿದರು.

ತೀರ್ಪುಗಾರರಾದ ಸುರೇಶ್ ಎ ಡಿ, ಶ್ರೀಮತಿ ನಿಶಾ ಭಟ್, ಮಂಜುನಾಥ್, ಬ್ರದರ್ ಆಲ್ರಿಕ್ ಗ್ಸೇವಿಯರ್, ಅಶ್ರಫ್ ಉಪಸ್ಥಿತರಿದ್ದರು. ಕಿರಿಯ, ಹಿರಿಯ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ವಿದ್ಯಾರ್ಥಿಗಳಾದ ವೀವನ್ ಪಿಂಟೋ ಸ್ವಾಗತಿಸಿ, ಪೃಥ್ವಿ ಪಿ ವಿ ವಂದಿಸಿದರು. ಆಲ್ಸ್ಟನ್ ಡಿಸಿಲ್ವ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿಯರಾದ ವಿನಿತಾ ಮೋರ‌ಸ್, ಶ್ರೀಮತಿ ಲೋನ ಲೋಬೋ, ಶ್ರೀಮತಿ ಸುಮಿತ್ರ ಬಿ. ಎಲ್ ಸಹಕರಿಸಿದರು.

Related posts

ದಿಡುಪೆ : ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು ಇದರ ಅಂಗ ಸಂಸ್ಥೆ ಮಸ್ಜಿದುಲ್ ಹಿದಾಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಯಕ್ಷಾಶ್ರಯ ಯೋಜನೆ ಅಡಿಯಲ್ಲಿ ಗುರುವಾಯನಕೆರೆ ದೇವಿಪ್ರಸಾದ್ ಆಚಾರ್ಯರಿಗೆ ಮನೆ ಹಸ್ತಾಂತರ

Suddi Udaya

ಸ್ಪೆಕ್ಟ್ರಮ್ ಧರ್ಮಸ್ಥಳ ನೇತೃತ್ವದಲ್ಲಿ ದ.ಕ. ಜಿಲ್ಲೆ ಹಾಗೂ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ

Suddi Udaya

ಕೊಕ್ಕಡ ಬಿಜೆಪಿ ಶಕ್ತಿಕೇಂದ್ರದಲ್ಲಿ ಬೈಠಕ್

Suddi Udaya

ಮಿತ್ತಬಾಗಿಲು ಗ್ರಾಮದ ಕೊಪ್ಪ ಬಾಳಪ್ಪ ಕುಂಬಾರರ ಮನೆಯ ಮೇಲ್ಚಾವಣಿ ಕುಸಿತ :ದುರಸ್ತಿಯ ವೆಚ್ಚ ಭರಿಸಿದ ಕಿರಣ್ ಚಂದ್ರ ಡಿ. ಪುಷ್ಪಗಿರಿ

Suddi Udaya

ಚಿಕ್ಕಮಗಳೂರು: ಇಬ್ಬರು ನಕ್ಸಲ್ ಬೆಂಬಲಿತ ಶಂಕಿತರಿಬ್ಬ ರು ವಶಕ್ಕೆ

Suddi Udaya
error: Content is protected !!