24.8 C
ಪುತ್ತೂರು, ಬೆಳ್ತಂಗಡಿ
September 20, 2026
Uncategorized

ಆ.18 ಉಜಿರೆಯಲ್ಲಿ ಬೃಹತ್ ರಕ್ತದಾನ ಶಿಬಿರ; ಬದುಕು ಕಟ್ಟೋಣ ಬನ್ನಿ ತಂಡ ಮತ್ತು ಇತರ ಸಂಘಟನೆಗಳ ನೇತೃತ್ವ ಯುವ ಜನತೆಯನ್ನು ತೊಡಗಿಸಿಕೊಂಡು ರಕ್ತದಾನಕ್ಕೆ ಪ್ರೇರಣೆ

ಉಜಿರೆ: ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ, ರೋಟರಿ ಕ್ಲಬ್ಬೆಳ್ತಂಗಡಿ, ಎಸ್.ಡಿ.ಎಂ.ಕಾಲೇಜು ಎನ್.ಎಸ್.ಎಸ್ ಘಟಕ, ತಾಲೂಕು ಪತ್ರಕರ್ತರ ಸಂಘ ಮತ್ತಿತರರು ಸಂಘಟನೆಗಳ ಜಂಟಿ ಆಶ್ರಯದಲ್ಲಿ ಆ.18ರಂದು ಉಜಿರೆ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಕೆ.ಮೋಹನ್ ಕುಮಾರ್ ತಿಳಿಸಿದ್ದಾರೆ.

ಅವರು ಆ.8ರಂದು ಉಜಿರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.5 ವರ್ಷಗಳ ಹಿಂದೆ ಚಾರ್ಮಾಡಿಯಲ್ಲಿ ಬಂದ ಪ್ರವಾಹದ ಸಂದರ್ಭದಲ್ಲಿ ಹಾನಿಯಾದ ಕುಟುಂಬದವರ ಬದುಕು ಕಟ್ಟಲು ಹುಟ್ಟಿಕೊಂಡ ಬದುಕು ಕಟ್ಟೋಣ ಬನ್ನಿ ತಂಡ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಇತರ ಸಂಘಟನೆಯೊಂದಿಗೆ ಸೇರಿಕೊಂಡು ನಡೆಸುತ್ತಿದೆ ಎಂದರು. ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಆ.18ರಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಇದರಲ್ಲಿ ಯುವ ಜನತೆಯನ್ನು ತೊಡಗಿಸಿಕೊಂಡು ರಕ್ತದಾನದ ಕುರಿತು ಪ್ರೇರಣೆ ನೀಡುವ ಕಾರ್ಯ ಮಾಡಲಾಗುವುದು ಎಂದು ವಿವರಿಸಿದರು

ರಕ್ತದಾನದ ಬಗ್ಗೆ ಪ್ರೇರಣೆ:

ರೋಟರಿ ಕ್ಲಬ್‌ ಅಧ್ಯಕ್ಷ ಪೂರನ್ ವರ್ಮ ಮಾತನಾಡಿ ಈ ಬಾರಿ ಬ್ಲಡ್ ಬ್ಯಾಂಕ್ ನಲ್ಲಿ ರಕ್ತದ ಕೊರತೆ ಇದ್ದು ಇಂತಹ ಶಿಬಿರದ ಮೂಲಕ ರಕ್ತದಾನದ ಬಗ್ಗೆ ಪ್ರೇರಣೆ ನೀಡುವ ಕೆಲಸ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌.ಡಿ.ಎಂ ಕಾಲೇಜು ಎನ್‌.ಎಸ್‌.ಎಸ್ ಘಟಕದ ಮುಖ್ಯಸ್ಥ ಮಹೇಶ್‌, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತೇಶ್‌ ಇಳಂತಿಲ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾಜೇಶ್ ಪೈ, ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ರಾವ್, ಮಾಜಿ ಕಾರ್ಯದರ್ಶಿ ಶ್ರೀಧರ ಕೆ.ವಿ., ಉಪಸ್ಥಿತರಿದ್ದರು.

Related posts

ವೇಣೂರು ಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘದಿಂದ ರಕ್ಷಿತ್ ಶಿವರಾಂರವರಿಗೆ ಅಭಿನಂದನೆ

Suddi Udaya

ಬೆಳಾಲು ಗ್ರಾ.ಪಂ. ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸತ್ಯನಪಲ್ಕೆ ಶಾಲೆ ಮಕ್ಕಳಿಗೆ ಊಟದ ತಟ್ಟೆ ವಿತರಣೆ

Suddi Udaya

ಗುರುವಾಯನಕೆರೆ:ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ: ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಣೆ

Suddi Udaya

ಶ್ರೀ ಕ್ಷೇತ್ರ ತೆಕ್ಕಾರು ಬ್ರಹ್ಮಕಲಶ ತಾಲೂಕು ಮಟ್ಟದ ಬೃಹತ್ ಹಸಿರು ಹೊರೆ ಕಾಣಿಕೆ ಸಮರ್ಪಣೆ-ಮೆರವಣಿಗೆ

Suddi Udaya

ಕುಪ್ಪೆಟ್ಟಿ ಸಮೀಪ ಗುಡ್ಡ ಜರಿದು ಅಪಾಯದ ಸ್ಥಿತಿ ನಿರ್ಮಾಣ

Suddi Udaya
error: Content is protected !!