22.6 C
ಪುತ್ತೂರು, ಬೆಳ್ತಂಗಡಿ
July 23, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಉಜಿರೆ :ರೋಟರಿ ಕ್ಲಬ್ ನಲ್ಲಿ ಇಫ್ತಾರ್ ಆಚರಣೆ

ಉಜಿರೆ : ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಎ.19 ರಂದು ಇಫ್ತಾರನ್ನು ಆಚರಿಸಲಾಯಿತು.
ರೊ. ಡಾ. ಪ್ರದೀಪ್ ನಾವೂರು ರಂಜಾನ್- ಸೌಹಾರ್ದತೆಯ ಸಂಕೇತ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು. ಎಲ್ಲಾ ಧರ್ಮಗಳಲ್ಲಿರುವ ಭಾವೈಕ್ಯತೆಯ ಮೌಲ್ಯಗಳ ಬಗ್ಗೆ ಅವರು ವಿಶ್ಲೇಷಿಸಿದರು.

ರೋಟರಿ ಕ್ಲಬ್ ಅಧ್ಯಕ್ಷೆ ರೊ. ಮನೋರಮಾ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನಡ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಯಾಕೂಬ್, ಉಜಿರೆ ಗ್ರಾಮ ಪಂಚಾಯತ್ ಸದಸ್ಯರಾದ ಷರೀಫ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕ್ಲಬ್ ನ ಕಾರ್ಯದರ್ಶಿ ರೊ. ರಕ್ಷಾ ರಾಗ್ನೀಶ್, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ರೊ. ನಿವೃತ್ತ ಮೇಜರ್ ಜನರಲ್ ಎಂ ವಿ ಭಟ್, ಕ್ಲಬ್ ನ ಪೂರ್ವಾಧ್ಯಕ್ಷರುಗಳು, ನಿಯೋಜಿತ ಅಧ್ಯಕ್ಷ ರೊ. ಅನಂತ ಭಟ್ ಮಚ್ಚಿಮಲೆ, ಸದಸ್ಯರುಗಳು, ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಸುಜಾತಾ ಅಣ್ಣಿ ಪೂಜಾರಿ ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.

Related posts

ಮುಂಡಾಜೆ: ಮಕ್ಕಳು ಇಲ್ಲದ ಕೊರಗು; ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ

Suddi Udaya

ಎಸ್.ಐ.ಟಿ ತಂಡ ಬೆಳ್ತಂಗಡಿ ಕಚೇರಿಗೆ ಆಗಮನ: ಇಂದು ತಲೆಬುರುಡೆ ತೆಗೆದ ಸ್ಥಳ ಮಹಜರು ಸಾಧ್ಯತೆ

Suddi Udaya

ಕಾಪಿನಡ್ಕ: ಧಾರಕಾರವಾಗಿ ಸುರಿದ ಮಳೆಯಿಂದ ಮನೆಯಂಗಳಕ್ಕೆ ನುಗ್ಗಿದ ನೀರು

Suddi Udaya

ಉಜಿರೆ : ಕಾಲೇಜು ವಿದ್ಯಾರ್ಥಿ ಚಂದ್ರಶೇಖರ್ ಗೌಡ ನಿಧನ

Suddi Udaya

ವಲಯ ಮಟ್ಟದ ಕ್ರೀಡಾಕೂಟ: ಮರಿಯಾಂಬಿಕ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಮುಂಡಾಜೆ: ರಬ್ಬರ್ ತೋಟದಲ್ಲಿ ನಾಲ್ಕು ಚಿರತೆಗಳು ಪ್ರತ್ಯಕ್ಷ: ಅಪಾಯದಿಂದ ಪಾರಾದ ಕಾರ್ಮಿಕರು

Suddi Udaya
error: Content is protected !!