25.7 C
ಪುತ್ತೂರು, ಬೆಳ್ತಂಗಡಿ
September 20, 2026
ತಾಲೂಕು ಸುದ್ದಿ

ನಾಳ: ಶಿಥಿಲ ಗೊಂಡ ಅಂಗನವಾಡಿ ಕೇಂದ್ರಕ್ಕೆ ತಡೆ ಬೇಲಿ ಹಾಗೂ ನೂತನ ಕಟ್ಟಡ ರಚನೆಗೆ ಪೋಷಕರ ಆಗ್ರಹ

ಬೆಳ್ತಂಗಡಿ : . ನಾಳ ಅಂಗನವಾಡಿ ಕೇಂದ್ರ ಬಾಲ ವಿಕಾಸ ಸಮಿತಿ ಹಾಗೂ ಪೋಷಕರ ಸಭೆ ಆ.6.ರಂದು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ನಾಳ ಅಂಗನವಾಡಿ ಕೇಂದ್ರ 42 ಹಿಂದೆ ಪ್ರಾರಂಭವಾಗಿದ್ದು,. 38 ವರ್ಷಗಳ ಹಿಂದೆ ನಿರ್ಮಾಣವಾದ ಕಟ್ಟಡ ಶಿಥಿಲವಾಗಿದೆ.ನೂತನ ಕಟ್ಟಡ ರಚನೆ ಆಗಬೇಕೆಂದು ಪೋಷಕರು ಬಾಲ ವಿಕಾಸ ಸಮಿತಿಯವರು ಒತ್ತಾಯಿಸಿದರು. ಈಗಾಗಲೇ ಅಂಗನವಾಡಿ ಕೇಂದ್ರ ವಠಾರದಲ್ಲಿದ್ದ ಅಪಾಯಕಾರಿ ಮರಗಳನ್ನು ತೆರವು ಗೊಳಿಸಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ಮೀಸಲಾದ 0.15 ಸೆಂಟ್ಸ್ ಜಾಗದ ಆಕ್ರಮಣವಾಗದಂತೆ ತಕ್ಷಣ ಸಿಮೆಂಟು ಕಂಬಗಳನ್ನು ಅಳವಡಿಸಿ ತಂತಿ ಬೇಲಿ ಮಾಡುವುದಾಗಿ ತೀರ್ಮಾನಿಸಿದರು.
ಕಳಿಯ ಗ್ರಾಮ ಪಂಚಾಯತ್ ವತಿಯಿಂದ ಅಂಗನವಾಡಿ 5 ಸಾವಿರ ಮೌಲ್ಯದ ಉಪಕರಣಗಳನ್ನು ವಿವರಿಸಲಾಯಿತು.ಅಂಗನವಾಡಿ ಅಭಿವೃದ್ಧಿಗೆ ಶ್ರಮ ವಹಿಸಿದ ಕೇಶವ ಪೂಜಾರಿ ನಾಳ ಅವರನ್ನು ಸನ್ಮಾನಿಸಿ ಗೌರವಿಸಿದರು. ಸ್ಥಳೀಯ ವಿಧ್ಯಾಭಿಮಾನಿ ಕಲ್ಲುಕಂಬ,ತಂತಿ ಹಾಗೂ ಚರಂಡಿ, ಮೋರಿ ವ್ಯವಸ್ಥೆಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದರು ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಭವಾನಿ ಲೋಕೇಶ್ ಅಧ್ಯಕ್ಷತೆ

ವಹಿಸಿದರು. ಈ ಸಂದರ್ಭದಲ್ಲಿ ಕಳಿಯ ಗ್ರಾ.ಪಂ. ಅಧ್ಯಕ್ಷ ದಿವಾಕರ ಎಮ್., ಕಳಿಯ ಪಂಚಾಯತ್ ಸದಸ್ಯರಾದ ವಿಜಯ ಕುಮಾರ್ ಕೆ,ಸುಧಾಕರ ಮಜಲು,ಪುಷ್ಪವತಿ, ಲತೀಫ್,ಕಳಿಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕುಂಞ್ಞ ಕೆ. ಮಾಜಿ ಅಧ್ಯಕ್ಷ ಕೇಶ‌ವ ಪೂಜಾರಿ ನಾಳ, ನಾಳ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ,ರಕ್ತೇಶ್ವರಿ ಪದವು ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನ್ಯಾಯತರ್ಪು ಆಶಾ ಕಾರ್ಯಕರ್ತೆ ಶಶಿಕಲಾ, ಪೂರ್ಣಿಮಾ, ಬಾಲ ವಿಕಾಸ ಸಮಿತಿ ಪದಾಧಿಕಾರಿಗಳು ಹಾಗೂ ಮಕ್ಕಳ ಪೋಷಕರು ಭಾಗವಹಿಸಿದರು. ಅಂಗನವಾಡಿ ಕಾರ್ಯಕರ್ತೆ ಸ್ವಾಗತಿಸಿ ಧನ್ಯವಾದ ವಿತ್ತರು.

Related posts

ಸುಲ್ಕೇರಿ ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಬಗ್ಗೆ ಸಮಾಲೋಚನ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪುತ್ತೂರು ಮುಳಿಯದಲ್ಲಿ ಡೈಮಂಡ್ ಉತ್ಸವಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಶಿಶಿಲ: ಬೈಕ್ ಮೇಲೆ ಬಿದ್ದ ಮರ: ಬೈಕ್ ಸವಾರ ಪ್ರಾಣಾಪಾಯಾದಿಂದ ಪಾರು

Suddi Udaya

ಗೇರುಕಟ್ಟೆ: ಪರಪ್ಪು ಮಸೀದಿಯಲ್ಲಿ ಕೂರತ್ ತಂಙಳ್ ಉರೂಸ್ ಪ್ರಚಾರ ಪೋಸ್ಟರ್ ಬಿಡುಗಡೆ

Suddi Udaya

ಡಿ.3ರಂದು ಮಂಗಳೂರು ಮಹಾತ್ಮ ಗಾಂಧೀಜಿ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ವರ್ಕಳ ಸಂವಾದದ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ

Suddi Udaya
error: Content is protected !!