September 6, 2026
Uncategorized

ವಿದ್ವತ್ ಪಿಯು ಕಾಲೇಜಿನಲ್ಲಿ CA ಓರಿಯೆಂಟೇಶನ್ ಕಾರ್ಯಕ್ರಮ

ಬೆಳ್ತಂಗಡಿ: ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದಲ್ಲಿರುವ ಉದ್ಯೋಗವಕಾಶ ಮತ್ತು CA ಪೌಂಡೇಶನ್ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡುವ ಮಹತ್ವದ ಓರಿಯೆಂಟೇಶನ್ ಕಾರ್ಯಕ್ರಮವು ವಿದ್ವತ್ ಪಿಯು ಕಾಲೇಜಿನಲ್ಲಿ ಆ. 10 ರಂದು ನಡೆಯಿತು.
ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಈ ಮಂಡಗಳಲೆಯವರು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿರುವ ವಿಫುಲವಾದ ಉದ್ಯೋಗವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕಗುಣವನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.

ವಿದ್ವತ್ ಪಿಯು ಕಾಲೇಜಿನ ಆಡಳಿತ ಅಧಿಕಾರಿಗಳಾದ ಚಂದ್ರಶೇಖರವರು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ಈಗಿನಿಂದಲೇ ನಡೆಸಬೇಕೆಂದು ತಿಳಿ ಹೇಳಿದರು.
ವಿದ್ವತ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಅರುಣ್ ಕ್ಯಾಸ್ಟಲಿನೋರವರು ವಿದ್ವತ್ ಪಿಯು ಕಾಲೇಜಿನಲ್ಲಿ ನಡೆಯುವ CA ಪೌಂಡೇಶನ್ ತರಬೇತಿಯ ಬಗ್ಗೆ ವಿದ್ಯಾರ್ಥಿಗಳಿಗೆ ವಿಸ್ತೃತ ಮಾಹಿತಿಯನ್ನು ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿಯನ್ನು ನಡೆಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಜಯೇಂದ್ರ ಬಂದ್ಯಾನ್, ಹಾಗೂ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ. ಮಹಿತ ಕುಮಾರಿ, ಕನ್ನಡ ವಿಭಾಗದ ಉಪನ್ಯಾಸಕರಾದ ನೀಲಕಂಠ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಆಂಗ್ಲ ವಿಭಾಗದ ಉಪನ್ಯಾಸಕರಾದ ಆಶಿಕ್ ಬಾಲಚಂದ್ರ ನಿರೂಪಿಸಿದರು.

Related posts

ನವೀಕೃತ ಯೂನಿಯನ್ ಬ್ಯಾಂಕ್ ಉಜಿರೆ ಶಾಖೆಯ ಉದ್ಘಾಟನೆ

Suddi Udaya

ಶಿಶಿಲ ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸೂರಜ್ ನೆಲ್ಲಿತ್ತಾಯ ಆಯ್ಕೆ

Suddi Udaya

ಧರ್ಮಸ್ಥಳ: 26ನೇ ವರ್ಷದ ‘ಭಜನಾ ತರಬೇತಿ ಕಮ್ಮಟ’ ಕಾರ್ಯಾಗಾರದ ಉಪನ್ಯಾಸ ಸರಣಿ ಕಾರ್ಯಕ್ರಮ

Suddi Udaya

ಪಡ್ಡಂದಡ್ಕ ಮದರಸದಲ್ಲಿ ಗಣರಾಜ್ಯೋತ್ಸವ

Suddi Udaya

ಧರ್ಮಸ್ಥಳ: ಅಪರಿಚಿತ ಮಹಿಳೆ ಸಾವು: ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಬೆಂಗಳೂರಿನಿಂದ ಮೈಸೂರು ನವರೆಗೆ ಬೃಹತ್ ಪಾದಯಾತ್ರೆಗೆ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ

Suddi Udaya
error: Content is protected !!