ಮುಂಡಾಜೆ ಪ.ಪೂ. ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ಓದುವ ಸಪ್ತಾಹ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ‘ಪುಸ್ತಕ ಓದುವ ಸಪ್ತಾಹ’ವನ್ನು ಹಮ್ಮಿಕೊಳ್ಳಲಾಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ತಾಲೂಕು ಪಂಚಾಯತಿಯ ಸಂಯೋಜಕರಾದ ಜಯಾನಂದ ಇವರು ‘ಶಿಕ್ಷಣದೊಂದಿಗೆ ಗ್ರಂಥಾಲಯವನ್ನು ಬಳಸಿಕೊಂಡಲ್ಲಿ ಹೆಚ್ಚಿನ ಪ್ರಬುದ್ಧತೆಯನ್ನು ಸಾಧಿಸಬಹುದು’ ಎಂದರು. ಮುಂಡಾಜೆ ಗ್ರಾಮ ಪಂಚಾಯತಿನ ಗ್ರಂಥಪಾಲಕಿ ಶ್ರೀಮತಿ ಮಮತಾ ಗ್ರಂಥಾಲಯದ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಜಾಲಿ ಓ ಎ ಮಾತನಾಡಿ ‘ಗ್ರಂಥಾಲಯಗಳು ಜ್ಞಾನದ ಭಂಡಾರ, ವ್ಯಕ್ತಿಯ ಜ್ಞಾನವನ್ನು ವಿಸ್ತರಿಸಲು ಗ್ರಂಥಾಲಯವು ಬಹಳ ಉಪಯುಕ್ತ ಮಾಧ್ಯಮವಾಗಿದೆ’ ಎಂದರು.


ವಿದ್ಯಾರ್ಥಿಗಳಾದ ವರ್ಷಾ ಪ್ರಾಸ್ತಾವಿಕ ಮಾತನಾಡಿ, ಕೆ ಎನ್ ಧನುಷ್ ಸ್ವಾಗತಿಸಿ, ಲತೇಶ್ ಕಾರ್ಯಕ್ರಮವನ್ನು ನಿರೂಪಿಸಿ, ಪೂಜಿತ್ ವಂದಿಸಿದರು.

Leave a Comment

error: Content is protected !!