July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಉಜಿರೆ : “ವರ್ಷದ ಪ್ರತಿಯೊಂದು ದಿನವೂ ಸ್ವಾತಂತ್ರ್ಯ ದಿನ ಆಚರಿಸುವ ಹಾಗೆ ನಮ್ಮ ಜೀವನವನ್ನು ತ್ಯಾಗ ಮಾಡಿರುವವರನ್ನು ನಾವು ಪ್ರತಿದಿನವೂ ನೆನೆಯಲೇ ಬೇಕು. ದೇಶದ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು.” ಎಂದು ಉಜಿರೆ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಹೆಚ್ ಪ್ರಕಾಶ್ ಶೆಟ್ಟಿ ಮೊಚ್ಚ ಇವರು ಹೇಳಿದರು.

ಇವರು ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಆಚರಿಸಿದ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಆಗಮಿಸಿ, ಧ್ವಜಾರೋಹಣ ನಡೆಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ದೇಶಭಕ್ತಿ ಗೀತೆ, ಕವನ ವಾಚನ ಹಾಗೂ ಭಾಷಣ ಆಯೋಜಿಸಲಾಗಿತ್ತು.

ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ವಿದ್ಯಾರ್ಥಿಗಳಾದ ಮಾಧವ್ ಹಾಗೂ ಸಹಮ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿ, ವಿದ್ಯಾರ್ಥಿಗಳಾದ ಮೆಲ್ರಿನ್ ಹಾಗೂ ತನ್ವಿ ವಂದಿಸಿದರು.

Related posts

ಜೆಸಿಐ ಕೊಕ್ಕಡ ಕಪಿಲಾ ಘಟಕ ಹಾಗೂ ಗ್ರಾಮಾಭ್ಯುದಯ ಅನುಷ್ಠಾನ ಸಮಿತಿಯಿಂದ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೆರಿಯಲ್ ರವರಿಗೆ ಗೌರವಾರ್ಪಣೆ

Suddi Udaya

ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಉಜಿರೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ದೂರು ಪ್ರಕರಣ : ವಕೀಲರ ತಂಡ ಭೇಟಿ ನೀಡಿದ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿಗೆ ಲಭ್ಯವಿರದ ವಿಷಯ: ಉದ್ದೇಶ ಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ವರದಿ ಮಾಡಿದ ವೆಬ್ ನ್ಯೂಸ್ ಮೇಲೆ ಕೇಸು

Suddi Udaya

ಲಾಯಿಲ ಗ್ರಾಮ ಪಂಚಾಯತ್ ವಾರ್ಡ್ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ

Suddi Udaya

ನಿಡ್ಲೆ ಸ.ಪ್ರೌ. ಶಾಲೆಗೆ ಶೇ. 100 ಫಲಿತಾಂಶ: ಅಭಿನಂದನಾ ಕಾರ್ಯಕ್ರಮ

Suddi Udaya
error: Content is protected !!