September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರತಿಭಟನೆವರದಿಶಾಲಾ ಕಾಲೇಜುಸಂಘ-ಸಂಸ್ಥೆಗಳು

ಕೋಲ್ಕತ್ತಾದ ಮೆಡಿಕಲ್ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ಉಜಿರೆಯಲ್ಲಿ ಎನ್ ಎಸ್ ಯು ಐ ಹಾಗೂ ಸರ್ವ ಕಾಲೇಜು ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ

ಉಜಿರೆ : ಕೋಲ್ಕತ್ತಾ ಟ್ರೈನಿ ಡಾಕ್ಟರ್ ಅತ್ಯಾಚಾರವನ್ನು ಖಂಡಿಸಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ ಎಸ್ ಯು ಐ) ಹಾಗೂ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಬೆಳ್ತಂಗಡಿ ಘಟಕದಿಂದ ಆ.17ರಂದು ಉಜಿರೆ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಮುಖಂಡ ತನುಷ್ ಎಂ. ಶೆಟ್ಟಿ ಮಾತನಾಡಿ ಇಂದು ನಮ್ಮ ದೇಶದಲ್ಲಿ ಇಂತಹ ಕಾಮ ಪಿಶಾಚಿಗಳು ಹುಟ್ಟಿಕೊಂಡಿದ್ದಾರೆ ಇಂತಹ ಕಾಮಿಗಳು ತಮ್ಮ ಕಾಮದಾಸೆಗಳನ್ನು ಪೂರೈಸಿಕೊಳ್ಳಲು ಇಂತಹ ವಿದ್ಯಾರ್ಥಿಗಳ ಮೇಲೆ ಲೈಂಗಿಕವಾಗಿ ಕ್ರೂರ ರೀತಿಯಲ್ಲಿ ಅತ್ಯಾಚಾರ ಮಾಡುತ್ತಿದ್ದಾರೆ. ಇಂತಹ ವಿಕೃತ ಕಾಮಿಗಳ ವಿರುದ್ಧ ನಾವು ಪಕ್ಷಭೇದ ಮರೆತು ಹೋರಾಡಬೇಕು. ಇಲ್ಲವಾದರೆ ಇಂದು ಕೊಲ್ಕತ್ತಾದಲ್ಲಿ ನಡೆದ ಘಟನೆಯು ನಾಳೆ ನಮ್ಮ ಮನೆಯಲ್ಲಿ ನಡೆದರು ಅಚ್ಚರಿಯ ವಿಷಯವೇನಲ್ಲ. ಇಂತಹ ಕಾಮುಕರ ವಿರುದ್ಧ ನಾವು ವಿದ್ಯಾರ್ಥಿ ಸಂಘಟನೆಗಳ ಮೂಲಕ ಹೋರಾಡಬೇಕು ಎಂದು ವಿದ್ಯಾರ್ಥಿಗಳನ್ನು ಹೋರಾಟಕ್ಕೆ ಕರೆಕೊಟ್ಟರು.

ಎನ್ ಎಸ್ ಯು ಐ ನಾ ವಿದ್ಯಾರ್ಥಿ ನಾಯಕ ಸೆಬಾಸ್ಟಿನ್ ಡಿ’ಸೋಜಾ ಮಾತನಾಡಿ ಇಂತಹ ವಿಕೃತ ಕಾಮಿಗಳನ್ನು ನಾಲಾಯಕ್ ಜನ ಪ್ರತಿನಿಧಿಗಳೇ ಬೆಳೆಸುತ್ತಿದ್ದಾರೆ. ನಾವು ಮೊದಲು ಇಂತಹ ನಾಲಾಯಕ್ ಜನಪ್ರತಿನಿಧಿಗಳ ವಿರುದ್ಧ ಹೋರಾಡಬೇಕು ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅವಿನ್ ಟಿ.ಬಿ ಮಾತನಾಡಿ ಅಂದು ಮಹಾತ್ಮ  ಗಾಂಧೀಜಿಯವರು ಕಂಡ ಕನಸು ಇನ್ನೂ ನನಸಾಗದೇ ಕನಸಾಗಿಯೇ ಉಳಿದಿದೆ. ಇಂದು ನಾವು ಬೀದಿಗಿಳಿದು ಹೋರಾಟ ಮಾಡದೆ ಇದ್ದರೆ ಮುಂದೆ ಇದೇ ಪರಿಸ್ಥಿತಿ ಮನೆಯ ಮಹಿಳೆಯರಿಗೆ ಬಂದರು ನಾವು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುವ ಸಂದರ್ಭ ಎದುರಾಗಬಹುದು ಎಂದು ಸೂಚನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಎನ್ ಎಸ್ ಯು ಐ ನ ಜಿಲ್ಲಾ ಉಪಾಧ್ಯಕ್ಷ ಹರ್ಷನ್ ಪೂಜಾರಿ, ಎನ್ ಎಸ್ ಯು ಐ ನ  ನಾಯಕ ಪ್ರಿಯಾದರ್ಶನ್ ವಿ.ಎಸ್ ಹಾಗೂ ಎನ್ ಎಸ್ ಯು ಐ ಬೆಳ್ತಂಗಡಿ ತಾಲೂಕು ಘಟಕದ ಉಪಾಧ್ಯಕ್ಷ ಜೋಶಿಲ್ ಆಂಟೋನಿ ಫೆರ್ನಾಂಡಿಸ್ ಹಾಗೂ ಸಂಘಟನೆಯ ಮುಖಂಡರಾದ ಭರತ್, ಕೀರ್ತನ್ ಶೆಟ್ಟಿ, ಮಾನಸ್ ಹಾಗೂ ಇನ್ನಿತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಕಬ್ ಬುಲ್ ಬುಲ್, ರೇಂಜರ್ ರೋವರ್, ಮಕ್ಕಳಿಗೆ ದೇಶ ಭಕ್ತಿ ಗೀತ ಗಾಯನ ಸ್ಪರ್ಧೆ

Suddi Udaya

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ: ಧ್ವಜಾರೋಹಣ

Suddi Udaya

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಸಹಕಾರಿ ಭಾರತಿ ಬಿಜೆಪಿ ಬೆಂಬಲಿತ-9 ಸ್ಥಾನ,‌ ಕಾಂಗ್ರೆಸ್ ಬೆಂಬಲಿತ -3 ಸ್ಥಾನ: ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ

Suddi Udaya

ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ: ಮುಂಡಾಜೆ ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಹಾಗೂ ಸಹಶಿಕ್ಷಕ ಮೋಹನ ಕೆ. ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ವಾರ್ಷಿಕ ಕ್ರೀಡಾಕೂಟ

Suddi Udaya

ಬೆನ್ನುಹುರಿಯ ದ್ರವ ತುಂಬಿದ ಚೀಲಗಳ ಎಂಡೋಸ್ಕೋಪಿಕ್ ಸರ್ಜರಿ: ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮತ್ತೊಂದು ಅಪರೂಪದ ಶಸ್ತ್ರಚಿಕಿತ್ಸೆ

Suddi Udaya
error: Content is protected !!