ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್, ಭಾರತೀಯ ಕಥೊಲಿಕ್ ಯುವ ಸಂಚಲನ ಹಾಗೂ ಯುವ ಕಥೊಲಿಕ್ ವಿದ್ಯಾರ್ಥಿ ಸಂಚಲನ ವತಿಯಿಂದ ಸ್ವಚ್ಛತಾ ಅಭಿಯಾನ

ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್ ಬೆಳ್ತಂಗಡಿ, ಭಾರತೀಯ ಕಥೋಲಿಕ್ ಯುವ ಸಂಚಲನ ಬೆಳ್ತಂಗಡಿ ಘಟಕ, ಯುವ ಕಥೊಲಿಕ್ ವಿದ್ಯಾರ್ಥಿ ಸಂಚಲನ ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನವು ಆ.18 ರಂದು ಹೋಲಿ ರಿಡೀಮರ್ ಚರ್ಚ್ ಆವರಣದಿಂದ ಬೆಳ್ತಂಗಡಿ ಬಸ್ ನಿಲ್ದಾಣದವರೆಗೆ ಕಾರ್ಯಕ್ರಮ ನಡೆಯಿತು.

ಈ ಅಭಿಯಾನಕ್ಕೆ ವಂದನೀಯ ಸ್ವಾಮಿ ಫಾ. ವಾಲ್ಟರ್ ಡಿ’ಮೆಲ್ಲೋ, ಹೋಲಿ ರಿಡೀಮರ್ ಸ್ಕೂಲ್ ಪ್ರಿನ್ಸಿಪಾಲ್ ರೆ. ಫಾ. ಕ್ಲಿಫರ್ಡ್ ಪಿಂಟೋ, ಪ್ಯಾರಿಷ್ ಕೌನ್ಸಿಲ್ ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಉದ್ಯಮಿ ಪ್ರೇಮ್ ರಾಜ್ ಸಿಕ್ವೇರಾ, ಸಿಸ್ಟರ್ ಜೆಸಿಂತಾ, ಮತ್ತು ಸಹೋದರ ಅಲ್ರಿಕ್ ಚಾಲನೆ ನೀಡಿದರು.

ಐಸಿವೈಎಮ್ ಆನಿಮೇಟರ್‌ಗಳಾದ ವಿಲ್ಸನ್ ಮೋನಿಸ್, ಡಾ. ಫ್ಲಾವಿಯಾ ಪೌಲ್ ಮತ್ತು ವೈಸಿಎಸ್ ಆನಿಮೇಟರ್‌ಗಳಾದ ಜೇಮ್ಸ್ ಬಾರ್ಬೋಜಾ ಮತ್ತು ಶ್ರೀಮತಿ ಪ್ರೀತಾ ಅವರ ಮಾರ್ಗದರ್ಶನದಲ್ಲಿ, ಐಸಿವೈಎಮ್ ಅಧ್ಯಕ್ಷೆ ಅನ್ಸೆಲ್ಮಾ ಡಿಸೋಜಾ, ಐಸಿವೈಎಮ್ ಕಾರ್ಯದರ್ಶಿ ಅಜಯ್ ರೋಡ್ರಿಗಸ್, ವೈಸಿಎಸ್ ಕಾರ್ಯದರ್ಶಿ ಸ್ಟಾಲನ್ ಅವರ ನೇತೃತ್ವದಲ್ಲಿ, ಯುವಕರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

ಸುಮಾರು 30ಕ್ಕೂ ಹೆಚ್ಚಿನ ಉತ್ಸಾಹಿ ಯುವಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.

Related posts

ಬಳಂಜ: ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯಿಂದ ದೀಪಾವಳಿ ಸಂಭ್ರಮಾಚರಣೆ

Suddi Udaya

ಜಾರಿಗೆ ಬೈಲು ಸಮೀಪ ಟ್ಯಾಂಕರ್, ಕಾರು ಡಿಕ್ಕಿ

Suddi Udaya

ಎಸ್.ಎಸ್.ಎಫ್ ಬೆಳ್ತಂಗಡಿ ಡಿವಿಷನ್ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ನಾರಾವಿ ಅರಸಿಕಟ್ಟೆ ನಿವಾಸಿ, ಪ್ರಸಿದ್ಧ ಜ್ಯೋತಿಷಿ ನಾರಾಯಣ ಮಯ್ಯ ನಿಧನ

Suddi Udaya

ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಥಾಮಸ್ ಕಪ್ ವಿಜೇತ ಹಾಗೂ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಆಯುಷ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ

Suddi Udaya
error: Content is protected !!