25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಂಚೆ ಇಲಾಖೆಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಬೆಳ್ತಂಗಡಿ:: ಆರನೇ ತರಗತಿಯಿಂದ 9ನೇ ತರಗತಿ ವರೆಗೆ ಕಲಿಯುತ್ತಿರುವ ಶಾಲಾ ವಿದ್ಯಾರ್ಥಿಗಳಲ್ಲಿ ಅಂಚೆ ಚೀಟಿ ಸಂಗ್ರಹಣೆ ಬಗ್ಗೆ ಆಸಕ್ತಿ ಮೂಡಿಸುವುದಕ್ಕಾಗಿ ದೀನ್ ದಯಾಳ್ ಸ್ಪರ್ಶ್ ಯೋಜನೆಯಡಿ ವಿದ್ಯಾರ್ಥಿವೇತನಕ್ಕಾಗಿ ಅಂಚೆ ಇಲಾಖೆ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.


ಅರ್ಜಿಯನ್ನು ಇದೆ ಸೆಪ್ಟೆಂಬರ್ 3ರೊಳಗೆ ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು ವಿಭಾಗ, ಪುತ್ತೂರು-574201 ಇವರಿಗೆ ತ್ವರಿತ ಅಂಚೆ ಅಥವಾ ನೋಂದಾಯಿತ ಅಂಚೆ ಮೂಲಕ ಕಳುಹಿಸಬೇಕು.


ಕಳೆದ ಬಾರಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 60 ಕ್ಕಿಂತ ಅಧಿಕ ಅಂಕಗಳನ್ನು ಪಡೆದವರು ಫಿಲಾಟೆಲಿ ಖಾತೆ ಅಥವಾ ಶಾಲಾ ಫಿಲಾಟೆಲಿ ಕ್ಲಬ್ ಸದಸ್ಯರಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಛೇರಿಯಿಂದ ಪಡೆಯಬಹುದು ಎಂದು ಅಂಚೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Related posts

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪ.ಪೂ.ಕಾಲೇಜು ಕನ್ನಡ ರಾಜ್ಯೋತ್ಸವ

Suddi Udaya

ಕುವೆಟ್ಟು ಸ.ಉ. ಹಿ.ಪ್ರಾ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ದಂತ ಚಿಕಿತ್ಸಾ ಶಿಬಿರ

Suddi Udaya

ಬೆಳ್ತಂಗಡಿ : ಯಾವುದೇ ಬಟ್ಟೆ ಖರೀದಿಸಿದರೂ ರೂ. 200 ಮಾತ್ರ: ಇನ್ನು ಕೆಲವೇ ದಿನಗಳು

Suddi Udaya

ಕೋಟ್ಯಾನ್ ಫ್ರೆಂಡ್ಸ್ ವಾಟ್ಸಾಪ್ ಗ್ರೂಪಿನಿಂದ ಎರಡನೇ ಸೇವಾ ಯೋಜನೆ ಹಸ್ತಾಂತರ

Suddi Udaya

ನಾರಾವಿ ಬಿಜೆಪಿ ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Suddi Udaya

ಜಿಲ್ಲಾ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರನ್ನು ಭೇಟಿ ಮಾಡಿದ ಬೆಳ್ತಂಗಡಿ ವಕೀಲರ ಸಂಘ

Suddi Udaya
error: Content is protected !!