September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆ 21: ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಸಿ.ಆರ್ ರಿಕೇಶ್ ಶರ್ಮಾ ಬೆಳ್ತಂಗಡಿಗೆ

ಬೆಳ್ತಂಗಡಿ: ಜೆಸಿಐ ಭಾರತದ ಅಮೃತ ಮಹೋತ್ಸವ ವರ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಡ್ವಕೇಟ್ ಸಿ.ಆರ್ ರಿಕೇಶ್ ಶರ್ಮಾರವರು ಆ. 21 ರಂದು ಬೆಳ್ತಂಗಡಿಗೆ ಆಗಮಿಸಲಿದ್ದಾರೆಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಹೆಚ್.ಡಿ ತಿಳಿಸಿದ್ದಾರೆ.

ಜಿಸಿಐ ವಲಯ 15ರ ಅಧಿಕೃತ ಭೇಟಿಯನ್ನು ಆಗಸ್ಟ್ 21 ಮತ್ತು 22ರಂದು ಹಮ್ಮಿಕೊಂಡಿದ್ದು ಆ. 21ನೇ ಬುಧವಾರ 11 ಘಂಟೆಗೆ ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಬಳಂಜ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿರುವ ಶಾಶ್ವತ ಯೋಜನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜೊತೆಗೆ ವಲಯ 15ರ ಅಧ್ಯಕ್ಷರಾದ ಅಡ್ವಕೇಟ್ ಗಿರೀಶ್ ಎಸ್ ಪಿ, ಉಪಾಧ್ಯಕ್ಷರಾದ ಶಂಕರ್ ರಾವ್ ಹಾಗೂ ವಲಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

Related posts

ಮಡಂತ್ಯಾರು ಯಂಗ್ ಟೈಗರ್ಸ್ ಅಲೆಕ್ಕಿ ಫ್ರೆಂಡ್ಸ್ ಇದರ ಹತ್ತನೇ ವರ್ಷದ ವಾರ್ಷಿಕೋತ್ಸವ

Suddi Udaya

ಬೆಳ್ತಂಗಡಿ: ಅಕ್ರಮ ಮರ ಕಡಿತಲೆ ಪ್ರಕರಣ: ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಹೆಚ್.ಎನ್. ಅಮಾನತು

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪೋಷಕರಿಗೆ ಪುನಶ್ಚೇತನ ಕಾರ್ಯಾಗಾರ

Suddi Udaya

ಸ್ಕೂಟರ್-ಟಿಪ್ಪರ್ ನಡುವೆ ಅಪಘಾತ: ಕೂಟದಕಲ್ಲು ನಿವಾಸಿ ಸುಧಾಕರ್ ರವರಿಗೆ ಗಾಯ

Suddi Udaya

ನಾಳೆ(ಜೂ.21) ನೀಟ್ ಮರು ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ 5,570 ಅಭ್ಯರ್ಥಿಗಳು

Suddi Udaya

ಪುರಿಯ ಹಾಲಿನ ಸೊಸೈಟಿ ನೂತನ ಕಟ್ಟಡದ ಅನುದಾನಕ್ಕಾಗಿ ಶಾಸಕ ಹರೀಶ್ ಪೂಂಜರಿಗೆ ಮನವಿ

Suddi Udaya
error: Content is protected !!