23.3 C
ಪುತ್ತೂರು, ಬೆಳ್ತಂಗಡಿ
May 18, 2025
Uncategorized

ಬೆಳಾಲು ನಿವೃತ್ತ ಶಿಕ್ಷಕನ ಕೊಲೆ ಪ್ರಕರಣ: ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಭೇಟಿ

ಬೆಳ್ತಂಗಡಿ : ಮನೆಯಲ್ಲಿ ಒಬ್ಬ ಜಂಟಿ ಯಾಗಿದ್ದಾಗ ನಿವೃತ್ತ ಶಿಕ್ಷಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನಾ ಸ್ಥಳಕ್ಕೆ ಇಂದು ಪಶ್ಚಿಮ ವಲಯ ಐಜಿಪಿ ಅಮೀತ್ ಸಿಂಗ್ ಭೇಟಿ ನೀಡಿ ಮಾಹಿತಿ ಪಡೆದರು.ಕೊಲೆ ಆರೋಪಿಗಳ ಪತ್ತೆಗಾಗಿ ಮೂರು ತಂಡ ರಚಿಸಲಾಗಿದೆ.ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಎಸ್.ಪಿ.ಬಿ.ಕಾಂಪೌಂಡ್ ನ ನಿವೃತ್ತ ಶಿಕ್ಷಕ ಎಸ್.ಪಿ.ಬಾಲಕೃಷ್ಣ ಭಟ್ (83) ರನ್ನು ಆ. 20 ರಂದು ಮಧ್ಯಾಹ್ನದ ಬಳಿಕ ಮನೆಯಲ್ಲಿ ಒಬ್ಬರೇ ಇದ್ದಾಗ ದುಷ್ಕರ್ಮಿಗಳ ತಂಡ ಮನೆಯೊಳಗೆ ಬಂದು ದಾಳಿ ಮಾಡಿದ್ದು. ಈ ವೇಳೆ ತಪ್ಪಿಸಿಕೊಂಡು ಮನೆಯಿಂದ ಅಂಗಳಕ್ಕೆ ಬಂದಿದ್ರೂ ಹಂತಕರು ಕತ್ತಿಗೆ ಬಲವಾಗಿ ಕಡಿದು ಕೊಲೆ ಮಾಡಿ ಹೋಗಿದ್ದಾರೆ ಎನ್ನಲಾಗಿದೆ.

ಕೊಲೆಯಾದ ಬಾಲಕೃಷ್ಣ ಭಟ್ ಮನೆಗೆ ಆ.21 ರಂದು ಮಧ್ಯಾಹ್ನ ಪಶ್ಚಿಮ ವಲಯ ಐಜಿಪಿ ಅಮೀತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆಯವರಿಂದ ಹಾಗೂ ಪೊಲೀಸರಿಂದ ಮಾಹಿತಿ ಪಡೆದುಕೊಂಡರು.ಬಳಿಕ ತನಿಖಾ ತಂಡದ ಜೊತೆ ಐಜಿಪಿ ಚರ್ಚಿಸಿ ಕೊಲೆ ಪ್ರಕರಣ ಭೇದಿಸಲು ತಂಡಕ್ಕೆ ಮಾಹಿತಿ ನೀಡಿದರು‌‌.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ಬಾಲಕೃಷ್ಣ ಭಟ್ ಕಿರಿಯ ಮಗ ಸುರೇಶ್ ಭಟ್ ಆ.20 ರಂದು ರಾತ್ರಿ ನೀಡಿದ ದೂರಿನಂತೆ ಬಿ.ಎನ್.ಎಸ್ 103 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು. ಕೊಲೆ ಆರೋಪಿಗಳ ಪತ್ತೆಗಾಗಿ ಮೂರು ತಂಡ ರಚಿಸಲಾಗಿದ್ದು. ಬಂಟ್ಬಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ತಂಡ , ಧರ್ಮಸ್ಥಳ ಇಬ್ಬರು ಸಬ್ ಇನ್ಸ್ಪೆಕ್ಟರ್ ಗಳ ತಂಡ ಹಾಗೂ ಮತ್ತೊಂದು ತಂಡದಿಂದ ವಿವಿಧ ತಂಡಗಳನ್ನು ದ.ಕ.ಎಸ್ಪಿ ಯತೀಶ್.ಎನ್ ಮಾಡಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Related posts

ಲಾಯಿಲ: ಪ್ರಸನ್ನ ಕಾಲೇಜು ಬಳಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ

Suddi Udaya

ಮೇ 28: ಮಿತ್ತಬಾಗಿಲು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲಾಮಯ ಧ್ವಜಸ್ತಂಭ

Suddi Udaya

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಪ್ರಶಿಕ್ಷಣ ಕಾರ್ಯಕ್ರಮ

Suddi Udaya

ವೇಣೂರು: ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ ನಿರಂಜನ್ ಕೆ.ಎಸ್, ಕಾರ್ಯದರ್ಶಿಯಾಗಿ ದಯಾನಂದ ಭಂಡಾರಿ ಆಯ್ಕೆ

Suddi Udaya

ನಮ್ಮ ನಡೆ ಮತಗಟ್ಟೆ ಕಡೆ ಮತದಾರರ ಜಾಗೃತಿ ಆಂದೋಲನ

Suddi Udaya

ಪೆರಾಡಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Suddi Udaya
error: Content is protected !!