24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ: ರೂ. 3.74 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ 10% ಡಿವಿಡೆಂಡ್

ಮೇಲಂತಬೆಟ್ಟು: ಮೇಲಂತಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸಾಮಾನ್ಯ ಸಭೆಯು ಆ.22ರಂದು ಸಮುದಾಯ ಭವನ ಮೇಲಂತಬೆಟ್ಟುವಿನಲ್ಲಿ ಸಂಘದ ಅಧ್ಯಕ್ಷರಾದ ಚಂದ್ರರಾಜ್ ಎಂ. ಅಧ್ಯಕ್ಷತೆಯಲ್ಲಿ ಜರಗಿತು.

ಸಂಘದಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 3.74 ಲಕ್ಷ ನಿವ್ವಳ ಲಾಭ ಗಳಿಸಿ, ಸದಸ್ಯರಿಗೆ 10% ಡಿವಿಡೆಂಡ್ ಮತ್ತು 65% ಬೋನಸ್ ಸಂಘದ ಅಧ್ಯಕ್ಷ ಚಂದ್ರರಾಜ್ ಘೋಷಿಸಿದರು. ವಿಸ್ತರಣಾಧಿಕಾರಿ ಸುಚಿತ್ರಾ ಇವರು ಭಾಗವಹಿಸಿ ಮಾತನಾಡಿ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಪಾಧ್ಯಕ್ಷರಾದ ಬೋಜ ಪೂಜಾರಿ, ನಿರ್ದೇಶಕರಾದ ಧರ್ಣಪ್ಪ ಬಂಗೇರ, ಜಾನ್ ಪಿಂಟೊ, ಗೀತಾ ಎಸ್. ಶೆಟ್ಟಿ, ಮೋಹನ್ ಸಪಲ್ಯ, ವಾಸು ಕೆ, ಇಜಿದೋರ್ ರೊಡ್ರಿಗಸ್, ಪುಷ್ಪಾ, ಗೀತಾ ಆ‌ರ್ ಸುವರ್ಣ, ಮಲ್ಲಿಕಾ, ಸತ್ಯ ಶಂಕರ್ ಭಟ್, ಡಾ.ಪೂಜಾ ಪಶುಗಳ ರಕ್ಷಣೆ ಮತ್ತು ಪೋಷಣೆ ಬಗ್ಗೆ, ಹಾಲಿನ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.

ಸಂಘವು 2007ರಲ್ಲಿ ಪ್ರಾರಂಭಗೊಂಡು 40ಲೀಟರ್ ಹಾಲು ಸಂಗ್ರಹವಾಗುತ್ತಿದ್ದು 1,250 ಲೀಟರ್ ವರೆಗೆ ತಲುಪಿ ಇದೀಗ 900ಲೀಟರ್ ಹಾಲು ಸಂಗ್ರಹವಾಯುತ್ತದೆ. 211 ಮಂದಿ ಸದಸ್ಯರನ್ನು ಹೊಂದಿದ್ದು ಪ್ರತೀ ದಿನ 99 ಜನ ಹಾಲು ಪೂರೈಸುತ್ತಿದ್ದಾರೆ. ಸಂಘವು ಸತತ 8 ವರ್ಷದಿಂದ ಎ ಗ್ರೇಡ್ ಮಾನ್ಯತೆ ಪಡೆದಿದೆ. ಒಳ್ಳೆಯ ರೀತಿಯಲ್ಲಿ ಸಭೆ ನಡೆದಿದೆ. ಸಂಘದ ಎಲ್ಲ ಸದಸ್ಯರು ಉತ್ತಮ ಗುಣಮಟ್ಟದ ಹಾಲು ಪೂರೈಸಬೇಕು. ಸಂಘದ ಹೆಸರು ಉನ್ನತ ಮಟ್ಟಕ್ಕೇರಿಸಲು ಸಹಕರಿಸಬೇಕು. ಸದಸ್ಯರ ಉತ್ತಮ ಸಹಕಾರದಿಂದ ಸಂಘ ಮುನ್ನಡೆಸಿಕೊಂಡು ಹೋಗಲು ಸಾಧ್ಯ ಎಂದು ಅಧ್ಯಕ್ಷ ಚಂದ್ರರಾಜ್ ಹೇಳಿದರು.

ಕಾರ್ಯದರ್ಶಿ ಪ್ರಶಾಂತ್ ಕುಮಾರ್ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಸಂಘದ ಸದಸ್ಯರುಗಳಾದ ಜಾನ್ ಪಿಂಟೊ, ಕಿರಣ್, ಸೌಮ್ಯ ಇವರನ್ನು ಉಡುಗೊರೆ ನೀಡಿ ಗೌರವಿಸಲಾಯಿತು. 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಅಧ್ಯಕ್ಷ ಚಂದ್ರರಾಜ್ ಸ್ವಾಗತಿಸಿ, ನಿರ್ದೇಶಕ ಜಾನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ಲಾರೆನ್ಸ್ ಡೇಸಾ, ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ನಿರ್ದೇಶಕ ಸಚಿನ್ ಕುಮಾರ್ ನೂಜೋಡಿ, ಸಿಬಂದಿ ಗಳಾದ ಸೀತಾ, ಚೇತನ್, ದೀಕ್ಷಿತ್, ವಿನ್ಸೆಂಟ್ ರೊಡ್ರಿಗಸ್, ಆರೋಗ್ಯ ಇಲಾಖೆ ಕಾರ್ಯಕರ್ತರಿಂದ ಶುಗ‌ರ್, ಬಿ.ಪಿ.ಟೆಸ್ಟ್ ನಡೆಸಿದರು. ಬ್ಯಾಂಕ್ ಆಪ್ ಬರೋಡಾದಿಂದ ಸಾಲಗಳ ಮಾಹಿತಿ ನೀಡಿದರು.

Related posts

ಭಾರತೀಯ ಜನತಾ ಪಾರ್ಟಿಯ ಮೂವರು ಪಕ್ಷದ ಸದಸ್ಯತ್ವದಿಂದ ಅಮಾನತು: ನೆರಿಯ ಗ್ರಾ.ಪಂ ಅಧ್ಯಕ್ಷೆ ಸೇರಿ ಇಬ್ಬರು ಸದಸ್ಯರಿಗೆ ಗೆಟ್ ಪಾಸ್ ನೀಡಿದ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷರು

Suddi Udaya

ಮೊಗ್ರು : ಮುಗೇರಡ್ಕ ದೈವಸ್ಥಾನ ವತಿಯಿಂದ ಮುಗೇರಡ್ಕ ಮುಳುಗು ಸೇತುವೆ ಸಂಚಾರಕ್ಕೆ ಮುಕ್ತ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ರಂಜಿತ್ ಹೆಚ್ ಡಿ ಬಳಂಜ

Suddi Udaya

ಗುರುವಾಯನಕೆರೆ: ಎಕ್ಸೆಲ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಂದ ಶುಚಿತ್ವ ಅಭಿಯಾನ

Suddi Udaya

ಮದ್ಯದ ಅಂಗಡಿ ಹೆಚ್ಚಿಸಲು ಮುಂದಾದ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಎಸ್‌ಡಿಪಿಐ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ

Suddi Udaya

ರಕ್ಷಿತ್ ಶಿವರಾಂ ನೇತೃತ್ವದಲ್ಲಿ ಜ. 8ರಂದು ನಡೆಯುವ ಹೋರಾಟಕ್ಕೆ ನನ್ನ ಬೆಂಬಲ ಇಲ್ಲ : ಮಾಜಿ ಶಾಸಕ
ವಸಂತ ಬಂಗೇರ

Suddi Udaya
error: Content is protected !!