July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಳದಂಗಡಿ ವಲಯದ ಬಡಗಕಾರಂದೂರು ಎ ಮತ್ತು ಬಿ ಒಕ್ಕೂಟದ ಪದಗ್ರಹಣ ಸಮಾರಂಭ

ಬೆಳ್ತಂಗಡಿ: ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಸಾಲ ಕೊಡುವುದಕ್ಕೆ ಮತ್ತು ಕಟ್ಟಿಸುವುದಕ್ಕೆ ಸೀಮಿತಗೊಳ್ಳದೆ ಸಾಮಾಜಿಕ ಪರಿವರ್ತನೆಗೆ ದೊಡ್ಡ ಕೊಡುಗೆಯನ್ನೇ ನೀಡಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ದಯಾನಂದ ಪೂಜಾರಿ ಹೇಳಿದರು.


ಅವರು, ಆ.23 ರಂದು ಅಳದಂಗಡಿ ಶ್ರೀಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ ನಡೆದ ಅಳದಂಗಡಿ ವಲಯದ ಬಡಗಕಾರಂದೂರು ಎ ಮತ್ತು ಬಿ ಒಕ್ಕೂಟದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಬಡಜನರ ಆರ್ಥಿಕ ಮತ್ತು ಸಾಮಾಜಿಕ ಉನ್ನತಿಯ ಗುರಿಯನ್ನು ಯೋಜನೆಯನ್ನು ಇಟ್ಟು ಕೊಂಡಿದೆ. ಅದಕ್ಕಾಗಿ ಸಾಮೂಹಿಕ ಸತ್ಯನಾರಾಯಣ, ಶನಿ, ವರಮಹಾಲಕ್ಷ್ಮೀ ಪೂಜೆ, ಭಜನಾ ಕಾರ್ಯಕ್ರಮಗಳ ಮೂಲಕ ಧಾರ್ಮಿಕ ಜಾಗೃತಿ ಹಾಗೂ ಮದ್ಯವರ್ಜನ ಶಿಬಿರಗಳನ್ನು ನಡೆಸುವುದರ ಮೂಲಕ ಸ್ವಸ್ಥ ಸಮಾಜವನ್ನು ನಿರ್ಮಾಣದ ಪ್ರಯತ್ನದಲ್ಲಿದೆ. ದುರ್ಬಲರು ಅದರಲ್ಲೂ ಮಹಿಳೆಯರು ಸ್ವಾವಲಂಬಿಯಾಗಿ ಬದುಕನ್ನು ನಡೆಸಬೇಕು ಎಂಬುದು ಯೋಜನೆಯ ಮುಖ್ಯ ಉದ್ದೇಶ. ಹೀಗಾಗಿ ಯೋಜನೆಯು ರಾಜ್ಯಾದ್ಯಂತ ವಿಸ್ತಾರಗೊಂಡಿದೆ. ಅಶಕ್ತರಿಗೆ, ವಿದ್ಯಾರ್ಥೀಗಳಿಗೆ ನೆರವಿನ ಮಹಾಪೂರವನ್ನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಹರಿಸಿದ್ದಾರೆ. ಆದ್ದರಿಂದ ಯೋಜನೆಯ ಬಗೆಗಿನ ಯಾವುದೇ ಅಪಪ್ರಚಾರಕ್ಕೆ ಕಿವಿಗೊಟ್ಟು ಜೀವನದ ಯಶಸ್ಸಿನ ಹಾದಿಯನ್ನು ಮುಚ್ಚಿಕೊಳ್ಳಬೇಡಿ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ಡಾ. ತಿಮ್ಮಣ್ಣರಸರಾದ ಪದ್ಮಪ್ರಸಾದ್ ಅಜಿಲರು ಉದ್ಘಾಟಿಸಿ ಮಾತನಾಡುತ್ತಾ ಶ್ರಾವಣ ಮಾಸದ ಪೂಜೆಯು ವಿಷೇಶ ಮಹತ್ವ ವನ್ನ ಪಡೆದಿವೆ ಯೋಜನೆಯ ಮೂಲಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರಿಂದ ಜನರಲ್ಲಿ ಜಾಗೃತಿ ಮೂಡಿದೆ ಬಡ ಜನರಿಗೆ ಬದುಕು ಕಟ್ಟಿಕೊಳಲು ಯೊಜನೆ ಸಹಕಾರಿ ಆಗಿದೆ ಎಂದರು.


ವೇದಿಕೆಯಲ್ಲಿ ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಸದಾನಂದ ಪೂಜಾರಿ ಉಂಗಿಲಬೈಲು, ಪ್ರಗತಿಪರ ಕೃಷಿಕ ಪಡ್ಯೋಡಿಗುತ್ತು ಸುಭಾಶ್ಚಂದ್ರ ರೈ, ಬಡಗಕಾರಂದೂರು ಸ.ಉ.ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯ ಸುರೇಶ್ ಎನ್., ಪ್ರಗತಿಬಂಧು ಎ ಮತ್ತು ಬಿ ಒಕ್ಕೂಟದ ಅಧ್ಯಕ್ಷರುಗಳಾದ ಮಂಜುನಾಥ ಆಚಾರ್ಯ, ಹರೀಶ್ ಆಚಾರ್ಯ, ಶ್ರೀ ವರಮಹಾಲಕ್ಷ್ಮೀ ವ್ರತ ಪೂಜಾ ಸಮಿತಿ ಕೋಶಾಧಿಕಾರಿ ಶಾರದಾ, ಎ ಮತ್ತು ಬಿ ಒಕ್ಕೂಟದ ನಿಯೋಜಿತ ಅಧ್ಯಕ್ಷರುಗಳಾದ ಹರೀಶ್ ಸಾಲಿಯಾನ್ ನಿನ್ನಿಕಲ್ಲು, ಕೃಷ್ಣಪ್ಪ ಪೂಜಾರಿ ಬಿಕ್ಕಿರ, ಸೇವಾಪ್ರತಿನಿಧಿಗಳಾದ ಶುಭಲತಾ, ಪೂರ್ಣಿಮಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಒಕ್ಕೂಟಗಳ ಹಿರಿಯ ಸದಸ್ಯರನ್ನು ಹಾಗೂ ಉತ್ತಮ ಗುಂಪುಗಳನ್ನು ಗುರುತಿಸಲಾಯಿತು. ಸಮಾರಂಭಕ್ಕೂ ಮೊದಲು ಧರ್ಮಸ್ಥಳ ಯೋಜನೆಯ ಒಕ್ಕೂಟಗಳ, ಸಾಧನಾ ಜ್ಞಾನವಿಕಾಸ ಕೇಂದ್ರ , ಜನಜಾಗೃತಿ ಗ್ರಾಮ ಸಮಿತಿ, ಹಾಗೂ ಶ್ರೀ ಸೋಮನಾಥೇಶ್ವರೀ ಭಜನಾ ಮಂಡಳಿಯ ಸಹಕಾರದೊಂದಿಗೆ 21 ನೇ ವರ್ಷದ ವರಮಹಾಲಕ್ಷ್ಮೀ ವ್ರತ ಪೂಜೆಯು ಅರ್ಚಕ ಪ್ರಕಾಶ್ ಭಟ್ ಅವರ ಮಾರ್ಗದರ್ಶನದಲ್ಲಿ ನೆರವೇರಿತು.


ವಲಯ ಮೇಲ್ವಿಚಾರಕಿ ಸುಮಂಗಲಾ ಅವರು ಸ್ವಾಗತಿಸಿದರು. ಸದಸ್ಯ ಸಂದೀಪ್ ಎಸ್.ಎನ್. ನೀರಲ್ಕೆ ವರದಿ ಮಂಡಿಸಿದರು. ಶ್ರೀನಿವಾಸ ಆಚಾರ್ಯ ವಂದಿಸಿದರು. ಮನೋಹರ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಸಿರುವಾಣಿ ಹೊರೆಕಾಣಿಕೆ ಮತ್ತು ದೈವ-ದೇವರ ಆಭರಣಗಳ ವೈಭವಯುತ ಮೆರವಣಿಗೆ ಶಾಸಕ ಹರೀಶ್ ಪೂಂಜರವರಿಂದ ಹಾಗೂ ಮುಂಬೈ ಉದ್ಯಮಿ ಸುರೇಶ್ ಪೂಜಾರಿಯವರಿಂದ ಚಾಲನೆ

Suddi Udaya

ಮುಂಡಾಜೆ : ಮನೆಯಲ್ಲಿಟ್ಟಿದ್ದ ರೂ.5 ಲಕ್ಷ ಬೆಲೆಬಾಳುವ 122ಗ್ರಾಂ ಚಿನ್ನಾಭರಣ ಕಳವು : ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಉಜಿರೆ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ಪೋಸ್ಟರ್ ತಯಾರಿಕಾ ಕಾರ್ಯಾಗಾರ

Suddi Udaya

ಕುದ್ಯಾಡಿ ಶಾಲಾ ಮಕ್ಕಳಿಗೆ ಬ್ಯಾಗ್, ಸಮವಸ್ತ್ರ, ಕೊಡೆ ವಿತರಣೆ

Suddi Udaya

ಸಾವ್ಯ ಬೆಸ್ಟ್ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

Suddi Udaya

ಫೆ-2: ಅಭ್ಯಾಸ್ ಅಕಾಡೆಮಿ ಮತ್ತು ಪೈ ಅಕಾಡೆಮಿಯಿಂದ ಪರಿಣಿತ ವಿಷಯ ಸಂಪನ್ಮೂಲ ತರಬೇತುದಾರರಿಂದ ಪರೀಕ್ಷಾ ಪೂರ್ವ ಸಿದ್ಧತೆ ಬಗ್ಗೆ ಉಚಿತ ತರಬೇತಿ ಕಾರ್ಯಾಗಾರ

Suddi Udaya
error: Content is protected !!