29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜೇನು ಕೃಷಿ ತರಬೇತಿ

ಬೆಳ್ತಂಗಡಿ: ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆ.21, 22 ರಂದು ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹಮ್ಮಿಕೊಂಡಿದ್ದ ಜೇನು ಕೃಷಿ ಕುರಿತು ತರಬೇತಿಯಲ್ಲಿ ಆ.22 ರಂದು ಶ್ಯಾಮ್ ಸುಂದರ ಭಟ್ ಆಲಡ್ಕ ಬೆಳ್ತಂಗಡಿ ಇವರ “ಮಧುಮಕ್ಷಿಕ” ಎಂಬ ಹೆಸರಿನ ಜೇನು ಸಾಕಾಣಿಕಾ, ಸಂಸ್ಕರಣಾ ಘಟಕಕ್ಕೆ ಭೇಟಿ ಕೈಗೊಳ್ಳಲಾಯಿತು.

ಇವರು ತುಡುವೆ ಜೇನು, ನಸರಿ ಜೇನು ಮಾರಾಟದ ಜೊತೆಗೆ ಜೇನಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು ಯುವ ಜೇನು ಕೃಷಿಕರಿಗೆ ಮಾದರಿ ಆಗಿದ್ದಲ್ಲದೆ ಅನೇಕ ತರಬೇತಿಯನ್ನು ನೀಡಿದ್ದಾರೆ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುತ್ತಾರೆ. ಇವರ ಜೇನಿನ ಮೌಲ್ಯ ವರ್ಧಿತ ಉತ್ಪನ್ನಗಳೆಂದರೆ ಜೇನುತುಪ್ಪದಿಂದ ತಯಾರಿಸಿದ ಲೇಹ್ಯ (ಮಧು ಕಲ್ಪ) ಸಿರಪ್ (ಮಧುಸಾರ), ಶರಬತ್ (ಮಧುಪೇಯರಸ), ಜೇನು, ನೆಲ್ಲಿಕಾಯಿ ಮತ್ತು ಬೆಲ್ಲ ಹಾಕಿ ಮಾಡಿರುವ ಎರಡು ರೀತಿಯ ಚಟ್ ಪಟ್ ಕ್ಯಾಂಡಿ, ಜೇನು ಮೇಣದ ಸೌಂದರ್ಯ ವರ್ಧಕ ಕ್ರೀಮ್ ಇತ್ಯಾದಿ. ಆಸಕ್ತರು ಅವರ ಜಾಲತಾಣ https://madhumakshika.com/ ಕೇ ಭೇಟಿ ನೀಡಬಹುದು.

ಪ್ರಭಾಕರ ಮಯ್ಯ ಪ್ರಗತಿಪರ ಕೃಷಿಕರು ಸುರ್ಯ, ನಡ ಗ್ರಾಮ ಬೆಳ್ತಂಗಡಿ ತಾ. ಇವರು ಪ್ರಾತ್ಯಕ್ಷಿಕೆ ವೇಳೆ ರೈತರಿಗೆ ಮಾಹಿತಿ ನೀಡಿದರು. ಹಾಗೂ ಬೆಳಿಗ್ಗಿನ ಅವಧಿಯಲ್ಲಿ ಮಲ್ಲಿಗೆ ಕೃಷಿ ಕುರಿತು ತರಬೇತಿ ನೀಡಿದರು. ಕೃಷಿ ಅಧಿಕಾರಿ ಗಣೇಶ್ ತರಬೇತಿಯನ್ನು ಆಯೋಜಿಸಿದ್ದರು.

Related posts

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ಮುಂಡಾಜೆ ಬಿ ಕಾರ್ಯಕ್ಷೇತ್ರದ ‘ಶ್ರೀ ಲಕ್ಷ್ಮಿ’ ಹೊಸ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ

Suddi Udaya

ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ: ನಾಲ್ಕು ಮತ್ತು ಐದನೇ ತಂಡದ ಪ್ರಮಾಣ ಪತ್ರ ವಿತರಣಾ ಸಮಾರಂಭ

Suddi Udaya

ಬಳಂಜ: ಸನಾತನ ಸಂಸ್ಥೆಯಿಂದ ವಿಶೇಷ ಪ್ರವಚನ

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಲೆಕುಡಿಯರ ವಾರ್ಷಿಕ ಸಮಾವೇಶ

Suddi Udaya

ಧರ್ಮಸ್ಥಳ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಜೂ.16 ರಂದು ಸಿಬಿಐ ವಿಶೇಷ ಕೋರ್ಟ್‍ನಿಂದ ಅಂತಿಮ ತೀರ್ಪು

Suddi Udaya
error: Content is protected !!