ಚಾರ್ಮಾಡಿ: ಕಳೆದ ಎಂಟು ದಿನಗಳಿಂದ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀಟಿಗೆ ಪರಿಸರದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು ಅಸಮರ್ಪಕ ನೀರು ಪೂರೈಕೆಯ ವಿರುದ್ದ ನಾಗರಿಕರು ಪಂಚಾಯತ್ ಎದುರು ನೀರಿಗಾಗಿ ಪ್ರತಿಭಟನೆ ನಡೆಸಿದರು.
ಕುಡಿಯಲು ನೀರಿಲ್ಲದೆ ಮಳೆ ನೀರನ್ನು ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಪಂಚಾಯತ್ ನ ಬೋರು ಕೆಟ್ಟು ಹೋದರು ಇನ್ನೂ ರಿಪೇರಿ ಮಾಡಿಲ್ಲ. ಆದ್ದರಿಂದ ನಮಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದು ಅಬ್ದುಲ್ ನಜೀರ್ ತಿಳಿಸಿದರು.