September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅರಸಿನಮಕ್ಕಿ: ಕಾರ್ಗಿಲ್ ಕದನದ 25 ವರ್ಷದ ನೆನಪಿಗಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮ

ಅರಸಿನಮಕ್ಕಿ: ಕಾರ್ಗಿಲ್ ಕದನದ 25 ವರ್ಷದ ನೆನಪಿಗಾಗಿ ಅರಸಿನಮಕ್ಕಿ ಪ್ರೌಢ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮವನ್ನು ಅರಸಿನಮಕ್ಕಿ-ಶಿಶಿಲ ಶೌರ್ಯ ವಿಪತ್ತು ಘಟಕ ಮತ್ತು ಪ್ರೌಢ ಶಾಲಾ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಅಂದಿನ ಕಾರ್ಗಿಲ್ ಹೋರಾಟದಲ್ಲಿ ತೊಡಗಿಸಿಕೊಂಡ ಶಿಬಾಜೆ ಗ್ರಾಮದ ಪ್ರಸನ್ನ ಬರ್ಗುಳ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಮಕ್ಕಳೊಂದಿಗೆ ಸಂವಾದ ನಡೆಸಿ ಸೈನಿಕನಾಗ ಬಯಸುವ ಯುವ ಶಕ್ತಿಗೆ ಪ್ರೇರಣೆಯ ಮಾತುಗಳನ್ನಾಡಿದರು. ಹಾಗೆಯೇ ತಾನು ಕಾರ್ಗಿಲ್ ಹೋರಾಟದಲ್ಲಿ ತೊಡಗಿಸಿಕೊಂಡ ಪರಿಯನ್ನು ಮಕ್ಕಳಿಗೆ ತಿಳಿಸಿದರು. ಕಾರ್ಗಿಲ್ ವನ ನಿರ್ಮಿಸಿ ಮೆಚ್ಚುಗೆ ಗಳಿಸಿದ್ದ ಸಚಿನ್ ಭಿಡೆ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮುಖ್ಯೋಪಾಧ್ಯಾಯ ಚಂದ್ರು, ಶಿಬಾಜೆ ಪಂಚಾಯತ್‌ ಉಪಾಧ್ಯಕ್ಷರಾದ ದಿನಕರ್ ಕುರುಪ್, ರತ್ನಮ್ಮ, ವಲಯ ಮೇಲ್ವಿಚಾರಕಿ ಶಶಿಕಲಾ, ಶೌರ್ಯ ವಿಪತ್ತು ಘಟಕದ ಸಂಯೋಜಕಿ ರಶ್ಮಿತಾ ಶಿಶಿಲ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದ್ರು ಸ್ವಾಗತಿಸಿ, ಪರಿಚಯ ಮತ್ತು ಪ್ರಾಸ್ಥವಿಕ ನುಡಿಯನ್ನು ಅವಿನಾಶ್ ಭಿಡೆ ನೆರವೇರಿಸಿದರು. ಮಂಜುಳ ನಿರೂಪಿಸಿ, ಚೇತನಾಕ್ಷಿ ಧನ್ಯವಾದಗೈದರು.

Related posts

ಗುರುವಾಯನಕೆರೆ -ಬೆಳ್ತಂಗಡಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್

Suddi Udaya

ನಾರಾವಿ ವಲಯದ ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿ

Suddi Udaya

ಶಿರ್ಲಾಲು: ಶ್ರೀ ರಾಮ ದೇವರ ಪ್ರತಿಷ್ಠೆ ಮತ್ತು ಲೋಕಾರ್ಪಣೆ: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಭಜನಾ ಕಾರ್ಯಕ್ರಮ

Suddi Udaya

ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬೆಳಾಲು: ಮೈತ್ರಿ ಯುವಕ ಮಂಡಲದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 19 ನೇ ವರ್ಷದ ಮೊಸರು ಕುಡಿಕೆ ಉತ್ಸವ

Suddi Udaya

ರೋಗಿಗಳ ಪಾಲಿನ ಭರವಸೆಯ ಹೊಂಗಿರಣ ಡಾ. ಪ್ರಭಾಚಂದ್ರ

Suddi Udaya
error: Content is protected !!