ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ನ ವತಿಯಿಂದ “ವೈದ್ಯರೊಂದಿಗೆ ಸಂವಾದ” ಕಾರ್ಯಕ್ರಮ

Suddi Udaya

ಉಜಿರೆ : “ಆರೋಗ್ಯದ ಕಡೆ ಗಮನಹರಿಸಿ. ಗೂಗಲ್ ವೈದ್ಯ ಹಾಗೂ ಗೂಗಲ್ ರೋಗಿ ಆಗಬೇಡಿ” ಎಂದು ಉಜಿರೆಯ ಎಸ್.ಡಿ.ಎಮ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಆರ್ಥೋಪೆಡಿಷನ್ ಡಾ. ಹೆಚ್ ಶತಾನಂದ ಪ್ರಸಾದ್ ರಾವ್ ಹೇಳಿದರು.

ಇವರು ಎಸ್.ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್‌.ಇ) ಉಜಿರೆ ಇಲ್ಲಿ ಆ.30 ರಂದು ರೋಟರಿ ಕ್ಲಬ್ ಹಾಗೂ ಶಾಲೆಯ ಇಂಟರಾಕ್ಟ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ವೈದ್ಯರೊಂದಿಗೆ ಸಂವಾದ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ರೋಟರಿ ಕ್ಲಬ್ ನ ಕಾರ್ಯದರ್ಶಿ ಸಂದೇಶ್ ರಾವ್ ಉಪಸ್ಥಿತರಿದ್ದರು.

ಶಿಕ್ಷಕಿ ಕಲ್ಯಾಣಿ ರಾವ್ ಸಂಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸೋಹನ್ ನಿರೂಪಿಸಿ, ವಿದ್ಯಾರ್ಥಿನಿ ಇಶಿತ ಸ್ವಾಗತಿಸಿ ವಿದ್ಯಾರ್ಥಿ ಕುನಾಲ್ ವಂದಿಸಿದರು.

Leave a Comment

error: Content is protected !!