September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸರಕಾರದ ಎಮ್.ಎಸ್.ಐ.ಎಲ್ ಮದ್ಯದ ಅಂಗಡಿಗೆ ಜನಜಾಗೃತಿ ವೇದಿಕೆ, ಬಾರ್ಯ ಗ್ರಾ.ಪಂ. ಮತ್ತು ಗ್ರಾಮಸ್ಥರಿಂದ ತೀವ್ರ ವಿರೋಧ

ಬಾರ್ಯ ಗ್ರಾಮಪಂಚಾಯತ್ ವ್ಯಾಪ್ತಿಗೆ ಸಂಬಂಧಪಟ್ಟ0ತೆ ಪುತ್ತಿಲ ಮೂರುಗೋಳಿಯಲ್ಲಿ ಸರಕಾರದ MSIL ಮದ್ಯದ ಅಂಗಡಿಯನ್ನು ರಾತೋರಾತ್ರಿ ತೆರೆದಿದ್ದು ಇದನ್ನು ಬಂದ್ ಮಾಡಿಸಿ ಇಲ್ಲಿ ಯಾವುದೇ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದೆಂದು ಗ್ರಾಮ ಸಭೆಯಲ್ಲಿ ಸದಸ್ಯರು ಮತ್ತು ಗ್ರಾಮಸ್ಥರು ಕೂಡ ಖಂಡಿಸಿದ್ದು. ತೆರವು ಮಾಡಿಸದೇ ಇದ್ದಲ್ಲಿ ಮುಂದಿನ ದಿನದಲ್ಲಿ ತೀವ್ರ ಹೋರಾಟದ ಬಗ್ಗೆ ಅಬಕಾರಿ ನಿರೀಕ್ಷಕರಾದ ಲಕ್ಶ್ಮಣ ಉಪ್ಪಾರ ಇವರಿಗೆ ತಣ್ಣೀರುಪಂಥ ವಲಯದ ಜನಜಾಗೃತಿ ವೇದಿಕೆ ಮತ್ತು ಊರವರಿಂದ ಮತ್ತು ಗ್ರಾಮ ಪಂಚಾಯತ್ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಣ್ಣೀರುಪಂಥ ವಲಯದ ಜನಜಾಗೃತಿ ವೇದಿಕೆ ವಲಯಧ್ಯಕ್ಷ ಪ್ರಭಾಕರ್ ಗೌಡ ಪೋಸೊಂದೋಡಿ, ಜನಜಾಗೃತಿ ವೇದಿಕೆ ತಾಲೂಕು ಕಾರ್ಯಕಾರಿಣಿ ಸದಸ್ಯರಾದ ಮೋನಪ್ಪ ಗೌಡ ಮಣಿಲ, ಬಾರ್ಯ ಜನಜಾಗೃತಿ ವೇದಿಕೆ ಗ್ರಾಮ ಸಮಿತಿ ಅಧ್ಯಕ್ಷರು ಮತ್ತು ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಪುತ್ತಿಲ ಜನಜಾಗೃತಿ ವೇದಿಕೆ ಗ್ರಾಮ ಸಮಿತಿ ಅಧ್ಯಕ್ಷ ಯಾದವ, ಪುತ್ತಿಲ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಉಮೇಶ್, ತಣ್ಣೀರುಪಂಥ ವಲಯದ ಮೇಲ್ವಿಚಾರಕ ಗುಣಕರ್, ಸೇವಾಪ್ರತಿನಿಧಿಗಳಾದ ಶಿವರಾಮ್ ತೆಕ್ಕಾರು, ಶ್ರೀಮತಿ ಗೀತಾ ಶ್ರೀಮತಿ ಸುನೀತಾ ಉಪಸ್ಥಿತರಿದ್ದರು.

Related posts

ಎಸ್‌.ಡಿ.ಎಂ ಶಿಕ್ಷಣ ಸಂಸ್ಥೆಗಳ ಕೇಂದ್ರ ಕಛೇರಿಗೆ ಅಂತಾರಾಷ್ಟ್ರೀಯ ಕಬ್ಬಡ್ಡಿ ತರಬೇತುದಾರ ರವೀಂದ್ರ ಶೆಟ್ಟಿ ಭೇಟಿ

Suddi Udaya

ವೇಣೂರು ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ

Suddi Udaya

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಅಳದಂಗಡಿ ವಲಯ ವಾರ್ಷಿಕ ಮಹಾಸಭೆ

Suddi Udaya

ಮೈರೋಳ್ತಡ್ಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಮಾಜಿ ಶಾಸಕ ವಸಂತ ಬಂಗೇರರಿಗೆ ನುಡಿ ನಮನ

Suddi Udaya

ಉಜಿರೆ: ಯುವಕ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!