24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರಿಗೆ ಕಾಳುಮೆಣಸಿನ ಸುಧಾರಿತ ತಾಂತ್ರಿಕತೆಗಳ ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ : ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸಾಂಬಾರ ಮಂಡಳಿ (ಸ್ಪೈಸ್ ಬೋರ್ಡ್) ಮೂಡಿಗೆರೆ ವತಿಯಿಂದ ದ.ಕ.ಜಿಲ್ಲೆಯ ರೈತರಿಗೆ ಕಾಳುಮೆಣಸಿನ ಸುಧಾರಿತ ತಾಂತ್ರಿಕತೆಗಳ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮವು ಸೆ.4 ರಂದು ನಡೆಯಿತು.

ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಹರಿದಾಸ್ ಎಸ್. ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಪ್ರಭಾರ ಜಂಟಿ ಕೃಷಿ ನಿರ್ದೇಶಕ ಶಿವಶಂಕರ್ ದಾನೆಗೊಂಡರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಂಬಾರ ಮಂಡಳಿಯ ಪ್ರಾದೇಶಿಕ ಕಚೇರಿ ಸಕಲೇಶಪುರ ಇಲ್ಲಿನ ಉಪ ನಿರ್ದೇಶಕ ಮಹಾಬಲೇಶ್ವರ ವೈ. ಹೊನ್ನೂರು ಇವರು ಭಾರತದಲ್ಲಿ ಸಾಂಬಾರ ಬೆಳೆಗಳ ರಫ್ತು ಮಾಡಲು ಇರುವ ಅವಕಾಶಗಳ ಕುರಿತು ವಿವರಿಸಿದರು. ಸಹಾಯಕ ಕೃಷಿ ನಿರ್ದೇಶಕರು ಬೆಳ್ತಂಗಡಿ ರಂಜಿತ್ ಕುಮಾರ್ ಟಿ.ಎಂ. ಇವರು ಕೃಷಿ ಇಲಾಖೆಯ ಪ್ರಮುಖ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಡಾ. ಹರ್ಷ ಕೆ ಎನ್, ವಿಜ್ಞಾನಿಗಳು, ಐಸಿಆರ್ ಐ, ದೋಣಿಗಲ್ ಸಕಲೇಶಪುರ ಇವರು ಕಾಳುಮೆಣಸಿನಲ್ಲಿ ಉತ್ತಮ ಕೃಷಿ ಪದ್ಧತಿಗಳು ಕುರಿತು ಮತ್ತು ಕುಮಾರ ಎಸ್, ಹಿರಿಯ ಕ್ಷೇತ್ರಾಧಿಕಾರಿ, ಸಾಂಬಾರ ಮಂಡಳಿಯ ಪ್ರಾದೇಶಿಕ ಕಚೇರಿ ಸಕಲೇಶಪುರ ಇವರು ಕಾಳುಮೆಣಸಿನ ನರ್ಸರಿ ವಿಧಾನಗಳ ಕುರಿತು ತರಬೇತಿಯನ್ನು ನೀಡಿದರು.

ಪ್ರಗತಿಪರ ಕೃಷಿಕ ಶ್ರೀ ಪ್ರಭಾಕರ ಮಯ್ಯ ಸುರ್ಯ ಇವರು ಕಾಳುಮೆಣಸಿನ ನಾಟಿ ಕುರಿತು ಪ್ರಾತ್ಯಕ್ಷಿಕೆ ಕೈಗೊಂಡರು. ಅಳದಂಗಡಿ ನಿವೃತ್ತ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಂಜೀವ ನಾಯ್ಕ್ ಉಜಿರೆ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕಿ ಶ್ರೀಮತಿ ಶೈಲಜಾ ಎ. ಎನ್, ಶ್ರೀಮತಿ ಸುಕನ್ಯಾ, ನಿರ್ದೇಶಕರು, ಅಳದಂಗಡಿ ಹೆಚ್.ಎಫ್.ಪಿ.ಸಿ ಉಪಸ್ಥಿತರಿದ್ದರು.

Related posts

ರೆಖ್ಯ: ಶ್ರೀಮತಿ ಬಿರ್ಕು ನಿಧನ

Suddi Udaya

ಬೆಳ್ತಂಗಡಿಯಲ್ಲಿ ಐ ಕೇರ್ ಒಪ್ಟಿಕಲ್ಸ್ ಶುಭಾರಂಭ

Suddi Udaya

ಎಸ್ ಎಸ್ ಎಲ್ ಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಚಿನ್ಮಯ್ ಗೆ ಮಂಜುಶ್ರೀ ಸೀನಿಯರ್ ಚೇಂಬರಿಂದ ಸನ್ಮಾನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮಹಿಳಾ ವಿಭಾಗದಿಂದ ಮಹಿಳಾ ಸಪ್ತಾಹ..

Suddi Udaya

ಸೌಜನ್ಯ ಕೊಲೆ ಪ್ರಕರಣ: ಕೊಕ್ಕಡ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ

Suddi Udaya

ಮಾತೃಶ್ರೀಡಾ. ಹೇಮಾವತಿ ಬಿ ಹೆಗ್ಗಡೆಯವರಿಗೆ ಸಾಧನಾ ರಾಜ್ಯಪ್ರಶಸ್ತಿ ಪ್ರದಾನ

Suddi Udaya
error: Content is protected !!