ಪೆರಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ವರದಿ ವರ್ಷದಲ್ಲಿ ರೂ 358 ಕೋಟಿ ರೂ.ಗಿಂತ ಅಧಿಕ ವ್ಯವಹಾರ ನಡೆಸಿದ್ದು ರೂ.98.90 ಲಕ್ಷಗಿಂತ ಅಧಿಕ ಲಾಭಗಳಿಸಿದೆ. ಸದಸ್ಯರಿಗೆ 21 ಶೇ.ದಂತೆ ಡಿವಿಡೆಂಟ್ ನೀಡಲು ನಿರ್ಣಯಿಸಲಾಗಿದೆ” ಎಂದು ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ನ ಹೇಳಿದರು.
ಪೆರಾಡಿ ಸಿಎ ಬ್ಯಾಂಕಿನ ವಠಾರದಲ್ಲಿ ಸೆ.15 ರಂದು ಜರಗಿದ ಸಂಘದ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ವರದಿ ವರ್ಷದಲ್ಲಿ 3182 ಎ ತರಗತಿ ಸದಸ್ಯರಿದ್ದು, 1.55 ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. 53 ಕೋಟಿ ರೂ.ಗಿಂತ ಅಧಿಕ ಠೇವಣಿ ಸಂಗ್ರಹವಿದೆ.ರೈತ ಸದಸ್ಯರಿಗೆ ಸಾಲವನ್ನು ಗರಿಷ್ಠ ಮಟ್ಟದಲ್ಲಿ ವಿತರಿಸಲಾಗಿದೆ ಎಂದರು.
ತಾಲೂಕಿನ ಕೆಲವೊಂದು ಸಹಕಾರಿ ಬ್ಯಾಂಕಿನಲ್ಲಿ ಓಪಿ ಸಾಲವನ್ನು ಶೆ.12 ರಲ್ಲಿ ನೀಡುತ್ತಿದ್ದು,ನಮ್ಮ ಈ ಬ್ಯಾಂಕಿನಲ್ಲಿ ಶೇ.14 ರಲ್ಲಿ ನೀಡುತ್ತಿದ್ದೇವೆ.ಇದರಿಂದ ರೈತ ಸದಸ್ಯರಿಗೆ ತೊಂದರೆಯಾಗುತ್ತಿದೆ ಎಂದು ಮಾಜಿ ನಿರ್ದೇಶಕ ಜಯಂತ್ ಕೋಟ್ಯಾನ್ ತಿಳಿಸಿದರು.
ಈಗಾಗಲೇ ನಮ್ಮ ಬ್ಯಾಂಕಿನಲ್ಲಿ ಓಪಿ ಸಾಲವನ್ನು ಶೆ. 15 ರಲ್ಲಿ ನೀಡುತ್ತಿದ್ದು ಶೇ.1 ಕಡಿಮೆ ಮಾಡಿ ಶೇ.14ರಲ್ಲಿ ನೀಡುತ್ತಿದ್ದೇವೆ. ಇನ್ನೂ ಕಡಿಮೆ ಮಾಡಿದರೆ ವ್ಯವಹಾರದಲ್ಲಿ ಸಮಸ್ಯೆಯಾಗುತ್ತದೆ ಎಂದು ಸಂಘದ ಅಧ್ಯಕ್ಷ ಸತೀಶ್ ಕಾಶಿಪಟ್ನ ತಿಳಿಸಿದರು.
ಕಾರ್ಯಕ್ರಮದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಎಸ್.ಎಸ್.ಎಲ್.ಸಿ ಯಲ್ಲಿ ಶೇ 100 ಫಲಿತಾಂಶದೊಂದಿಗೆ ಉತ್ತಮ ಸಾಧನೆ ಮಾಡಿದ ಶೈಕ್ಷಣಿಕ ಸಂಸ್ಥೆಗಳಾದ ಇಂದಿರಾಗಾಂಧಿ ವಸತಿ ಶಾಲೆ,ಎಸ್.ಡಿ.ಎಂ ಪೆರಿಂಜೆ,ಸರಕಾರಿ ಪ್ರೌಢ ಶಾಲೆ ಕಾಶಿಪಟ್ನ ವಿದ್ಯಾಸಂಸ್ಥೆಗಳನ್ನು ಗುರುತಿಸಲಾಯಿತು. ಹಾಗೂ ಕೃಷಿ ಸಾಧಕರನ್ನು ಸನ್ಮಾನಿಸಲಾಯಿತು.ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರ ನೀಡಿ ಗುರುತಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ದೇವಕಿ ಡಿ ಶೆಟ್ಟಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಶೇಖ್ ಲತೀಫ್, ನಿರ್ದೇಶಕರಾದ ಎನ್.ಆರ್ ಸೀತರಾಮ ರೈ,ಪ್ರವೀಣ್ ಗಿಲ್ಬರ್ಟ್ ಪಿಂಟೋ,ಪುತ್ತು ನಾಯ್ಕ,ಹರಿಪ್ರಸಾದ್ ಪಿ,ಧರ್ಣಪ್ಪ ಪೂಜಾರಿ,ಶ್ರೀಮತಿ ಸುಜಾತ,ಶ್ರೀಪತಿ ಉಪಾಧ್ಯಾಯ,ರಾಜೇಶ್ ಎನ್.ಶೆಟ್ಟಿ, ಕೃಷ್ಣಪ್ಪ,ದ.ಕ.ಜಿ.ಕೇ.ಬ್ಯಾಂಕ್ ಪ್ರತಿನಿಧಿ ಸುದರ್ಶನ್
ಉಪಸ್ಥಿತರಿದ್ದರು
ಸಂಘದ ನಿರ್ದೇಶಕ ಹರಿಪ್ರಸಾದ್ ಪಿ,ಸ್ವಾಗತಿಸಿದರು.ಸಿಂಚನಾ,ಸಂಗೀತ,ಪ್ರಭಾ ಪ್ರಾರ್ಥನೆ ಹಾಡಿದರು. ನಿರ್ದೇಶಕ ವಂದಿಸಿದರು.ನಿರ್ದೇಶಕ ಎನ್ ಆರ್ ಸೀತರಾಮ ರೈ ವಂದಿಸಿದರು.
ಇತ್ತೀಚೆಗೆ ಅಗಲಿದ ಹಿರಿಯ ರಾಜಕೀಯ ನೇತಾರ,ಬೆಳ್ತಂಗಡಿ ಮಾಜಿ ಶಾಸಕ ದಿ.ಕೆ.ವಸಂತ ಬಂಗೇರ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ದಿ.ನಿರಂಜನ್ ಬಾವಂತಬೆಟ್ಟು ಹಾಗೂ ನಿಧನರಾದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.