34.3 C
ಪುತ್ತೂರು, ಬೆಳ್ತಂಗಡಿ
March 29, 2025
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸುದ್ದಿ ಉದಯ ವಾರಪತ್ರಿಕೆಯ ವತಿಯಿಂದ ಮುಳಿಯ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಹಮ್ಮಿಕೊಂಡ ‘ರಾಧೆ-ಕೃಷ್ಣ’ ಪೋಟೋ ಸ್ಪರ್ಧಾ ವಿಜೇತ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಣೆ

ಸುದ್ದಿ ಉದಯ ಪತ್ರಿಕೆ ರಾಜ್ಯಮಟ್ಟದಲ್ಲಿ ಬೆಳಗಲಿ: ಜಯಾನಂದ ಗೌಡ

ಬೆಳ್ತಂಗಡಿ: ಸುದ್ದಿ ಉದಯ ವಾರಪತ್ರಿಕೆ ಬೆಳ್ತಂಗಡಿ ಇದರ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿ ಸಂಭ್ರಮದ ಪ್ರಯುಕ್ತ ಮುಳಿಯ ಜುವೆಲ್ಸ್ ಬೆಳ್ತಂಗಡಿ ಇವರ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ ‘ರಾಧೆ-ಕೃಷ್ಣ’ ಪೋಟೋ ಸ್ಪರ್ಧೆಯ ವಿಜೇತ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಸೆ.18ರಂದು ಸುದ್ದಿ ಉದಯ ವಾರಪತ್ರಿಕಾ ಕಚೇರಿಯಲ್ಲಿ ಜರುಗಿತು.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ ಪ್ರಜ್ವಲ್ ಅವರು ಸ್ಪರ್ಧಾ ವಿಜೇತ ಪುಟಾಣಿ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಸುದ್ದಿ ಉದಯ ಪತ್ರಿಕೆ ಉತ್ತಮ ಗುಣಮಟ್ಟದಲ್ಲಿ ಪ್ರಕಟಗೊಳ್ಳುತ್ತಿದ್ದು, ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ ಪುಟ್ಟ ಮಕ್ಕಳ ಪ್ರತಿಭೆಯ ವಿಕಸನಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಸುದ್ದಿ ಉದಯ ಪತ್ರಿಕಾ ಬಳಗ ಬಹಳಷ್ಟು ಕಷ್ಟಪಟ್ಟು ಪತ್ರಿಕೆಯನ್ನು ಪ್ರತಿವಾರ ಹೊರತರುತ್ತಿದ್ದು, ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಕಾಗೆ ಗೂಡಿನಲ್ಲಿ ಕೋಗಿಲೆ ಮರಿ ಇಟ್ಟಾಗೆ, ಸುದ್ದಿ ಉದಯ ಬಳಗ ಕಷ್ಟಪಡುವುದು, ಕೆಲವರು ಕುಳಿತಲ್ಲೇ ಅದರ ಲಾಭ ಪಡೆದುಕೊಳ್ಳುವ ಸ್ಥಿತಿ ಈಗ ಇದೆ. ಇದು ಸರಿಯಲ್ಲ ಎಂದು ಹೇಳಿ ಪತ್ರಿಕೆ ರಾಜ್ಯಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆಯಲಿ ಎಂದು ಹಾರೈಸಿದರು.

ಮುಳಿಯ ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ದಿನೇಶ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸುದ್ದಿ ಉದಯ ಪತ್ರಿಕೆಯ ಹಿರಿಯ ಪ್ರತಿನಿಧಿ ರತ್ನಾಕರ್ ನಾವೂರು ಅವರು ಒಂದೂವರೆ ವರ್ಷದಲ್ಲಿ ಸುದ್ದಿ ಉದಯ ಪತ್ರಿಕೆ ಮಾಡಿರುವ ಸಾಧನೆಯನ್ನು ಮೆಚ್ಚಬೇಕು. ಪತ್ರಿಕೆಯ ವತಿಯಿಂದ ಪುಟ್ಟ ಮಕ್ಕಳಿಗೆ ಈ ಸ್ಪರ್ಧೆ ಮಾಡುವ ಮೂಲಕ ಮಕ್ಕಳಿಗೂ ಅವಕಾಶ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಯಾನಂದ ಗೌಡ ಪ್ರಜ್ವಲ್ ಅವರನ್ನು ಸುದ್ದಿ ಉದಯ ಪತ್ರಿಕ ಬಳಗದ ವತಿಯಿಂದ ಗೌರವಿಸಲಾಯಿತು. ಸ್ಪರ್ಧಾ ವಿಜೇತರ ಮಕ್ಕಳ ಪೋಷಕರ ಪರವಾಗಿ ಮಡಂತ್ಯಾರು ಕಾಲೇಜಿನ ಶಿಕ್ಷಕ ವಸಂತ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸುದ್ದಿ ಉದಯ ಪತ್ರಿಕೆ ಕಚೇರಿ ವ್ಯವಸ್ಥಾಪಕ ತಿಮ್ಮಪ್ಪ ಗೌಡ, ವರದಿಗಾರ ಸುದಿತ್, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ್ ಗೌಡ, ಅಕೌಂಟೆಂಟ್ ಸುಧಾ, ಆನ್‌ಲೈನ್ ವಿಭಾಗದ ಪ್ರತಿಭಾ, ಕಂಪ್ಯೂಟರ್ ವಿಭಾಗದ ಧನ್ಯ, ಚಾನೆಲ್ ವಿಭಾಗದ ಸೌಮ್ಯ ಹಾಗೂ ಡಿಸೈನರ್ ಇರ್ಫಾನ್, ಸುದ್ದಿ ಪ್ರತಿನಿಧಿಗಳಾದ ಸುರೇಶ್ ಕೌಡಂಗೆ, ಹರ್ಷ ಬಳ್ಳಮಂಜ, ಮನು ಮದ್ದಡ್ಕ, ಗಿರೀಶ್ ಬಿ.ಕೆ ಬಂದಾರು, ಪುರಂದರ ಕೆ. ಕಡೀರಾ, ಕರುಣಾಕರ ಶಿಶಿಲ, ಬಹುಮಾನ ಪಡೆದ ಪುಟ್ಟ ಮಕ್ಕಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್ ಕುಲಾಲ್ ಸ್ವಾಗತಿಸಿದರು.ಉಪಸಂಪಾದಕ ಸಂತೋಷ್ ಪಿ.ಕೋಟ್ಯಾನ್ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ತುಕರಾಮ್ ಬಿ. ವಂದಿಸಿದರು.

Related posts

ಜಾಂಡೀಸ್ ಉಲ್ಬಣಗೊಂಡು ಕೇಳ್ಕರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿಕಟಪೂರ್ವಾಧ್ಯಕ್ಷ ಸುಧೀಶ್ ಹೆಗ್ಡೆ ನಿಧನ

Suddi Udaya

ಬಾರ್ಯ: ಸರಳಿಕಟ್ಟೆ ಸ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ಹಬ್ಬ ಆಚರಣೆ

Suddi Udaya

ಫೇಸ್‌ ಬುಕ್‌ ಆಪ್‌ ನಲ್ಲಿ ಲೋನ್ ಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ತೆಂಕಕಾರಂದೂರು ನಿವಾಸಿ ನೆಬಿಸಾರಿಗೆ ರೂ.96,743 ವಂಚನೆ

Suddi Udaya

ಉಜಿರೆಯಲ್ಲಿ ನಡೆದ ಆ್ಯಸಿಡ್ ದಾಳಿ ಪ್ರಕರಣ; 29 ವರ್ಷದ ಬಳಿಕ ಆರೋಪಿ ದೋಷಮುಕ್ತ

Suddi Udaya

ಉಜಿರೆ: ರತ್ನಮಾನಸದಲ್ಲಿ ಮಾತೃ, ಪಿತೃ ,ಪೋಷಕರ ಸಭೆ ಹಾಗೂ ಗುರು ವಂದನ ಕಾರ್ಯಕ್ರಮ

Suddi Udaya

ಶಿಶಿಲ: ‘ವೇದ ಕುಸುಮ’ ಶಿಬಿರ ಸಂಪನ್ನ

Suddi Udaya
error: Content is protected !!