April 2, 2025
Uncategorized

ನಾವೂರು ತಡೆಗೋಡೆ ನಿರ್ಮಾಣನೀರು ನಿಂತು ನಡೆದುಕೊಂಡು ಹೋಗುವುದಕ್ಕೆ ಸಮಸ್ಯೆ

ನಾವೂರು : ಇಲ್ಲಿಯ 6ನೇ ಮೈಲಿ ಕಲ್ಲಿನ ಬಳಿ ಗಂಪ, ನಾವೂರುಪಲ್ಕೆ, ಹೊಡಿಕ್ಕಾರ್, ಕಿರ್ನಡ್ಕ ಈ ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಾಲು ದಾರಿ ಇದು ಖಾಸಗಿ ವ್ಯಕ್ತಿಗೆ ಸಂಬಂಧಪಟ್ಟ ಜಾಗ, ಆದರೆ ಇದರ ಬದಿಯಲ್ಲೇ ಮೇಲ್ಕಾಣಿಸಿದ ಹಲವಾರು ಮನೆಗಳಿಗೆ ಈ ದಾರಿಯ ಮುಖಾಂತರವೇ ಹಾದು ಹೋಗಬೇಕು ಆದರೆ ಎಫ್ಎಮ್‌ಬಿಯಲ್ಲಿ ಈ ಭಾಗಕ್ಕೆ ಹಾದು ಹೋಗುವ ಕಾಲುದಾರಿ ದಾಖಲೆ ಇದೆ,

ಆದರೆ ಈಗ ಈ ಜಾಗವನ್ನು ಖರೀದಿಸಿದ ವ್ಯಕ್ತಿ ತಡೆಗೋಡೆ ನಿರ್ಮಿಸಿರುತ್ತಾರೆ, ಆದರೆ ತಡೆಗೋಡೆ ನಿರ್ಮಿಸುವುದು ತಪ್ಪು ಎನ್ನುವುದು ಈ ಭಾಗದ ಜನರ ಅಭಿಪ್ರಾಯವಲ್ಲ, ಆದರೆ ತಡೆ ಗೋಡೆ ಮಾಡುವಾಗ ಸರಿಯಾದ ಮೋರಿಯನ್ನು ಹಾಕದೆ ನೀರು ನಿಂತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಪರಿಸರದ ಜನರಿಗೆ ಈಗ ಅಲ್ಲಿ ನಡೆದುಕೊಂಡು ಹೋಗುವುದಕ್ಕೆ ಸಮಸ್ಯೆಯಾಗಿದೆ
( ಮೇಲ್ಕಾಣಿಸಿದ ಚಿತ್ರವನ್ನು ಸರಿಯಾಗಿ ಗಮನಿಸಿ )
ಈ ಸಮಸ್ಯೆಯನ್ನು ಜಾಗ ಖರೀದಿಸಿದ ವ್ಯಕ್ತಿಯ ಗಮನಕ್ಕೆ ತಂದಾಗ, ನಮ್ಮ ಬಗ್ಗೆ ಬೆಳ್ತಂಗಡಿ ಮತ್ತು ಮಂಗಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ,
ಅದಲ್ಲದೆ ನಮ್ಮ ಈ ಸಮಸ್ಯೆಯ ಬಗ್ಗೆ ಸುಮಾರು ಮೂರು ತಿಂಗಳ ಮೊದಲೇ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ದೂರು ನೀಡಿದ್ದು
ಅವರು ಯಾವುದೇ ಕ್ರಮ ಕೈಗೊಂಡಿಲ್ಲ . ಕೂಡಲೇ ಸಂಬಂದಿಸಿದವರು ನಮಗೆ ನಡೆದು ಕೊಂಡು ಹೋಗಲು ವ್ಯವಸ್ಥೆಗೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಿ ,

  • ನೊಂದ ಪರಿಸರವಾಸಿಗಳು

Related posts

ಉಜಿರೆಯಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ

Suddi Udaya

ಜೆಸಿಐ ಮಡಂತ್ಯಾರು ಇದರ 2025ನೆ ಸಾಲಿನ ಅಧ್ಯಕ್ಷರಾಗಿ ಅಮಿತಾ ಅಶೋಕ್

Suddi Udaya

ಉಜಿರೆ ಮೋಹನ್ ಕುಮಾರ್ ಮಾಲಕತ್ವದ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ನೂತನ ಶಾಖೆ ಉಪ್ಪಿನಂಗಡಿಯಲ್ಲಿ ಶುಭಾರಂಭ

Suddi Udaya

ಎಸ್.ಎಸ್.ಎಲ್.ಸಿ ಮರು ಮೌಲ್ಯಮಾಪನ: ಶ್ರೀ ಧ. ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿ ಅಮೃತಾ 622 ಅಂಕಗಳೊಂದಿಗೆ ತಾಲೂಕಿಗೆ ಪ್ರಥಮ

Suddi Udaya

ವಾಣಿ ಪದವಿ ಪೂರ್ವ ಕಾಲೇಜ್ ತಂಡಗಳು ಜನಪದ ಗೀತ ಗಾಯನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಕೆದ್ದುವಿನಲ್ಲಿ ಅನಾಥವಾಗಿದ್ದ ಬಾಡಜ್ಜನಿಗೆ ಆಶ್ರಯ ಕಲ್ಪಿಸಿದ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ

Suddi Udaya
error: Content is protected !!