ನಾವೂರು : ಇಲ್ಲಿಯ 6ನೇ ಮೈಲಿ ಕಲ್ಲಿನ ಬಳಿ ಗಂಪ, ನಾವೂರುಪಲ್ಕೆ, ಹೊಡಿಕ್ಕಾರ್, ಕಿರ್ನಡ್ಕ ಈ ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಾಲು ದಾರಿ ಇದು ಖಾಸಗಿ ವ್ಯಕ್ತಿಗೆ ಸಂಬಂಧಪಟ್ಟ ಜಾಗ, ಆದರೆ ಇದರ ಬದಿಯಲ್ಲೇ ಮೇಲ್ಕಾಣಿಸಿದ ಹಲವಾರು ಮನೆಗಳಿಗೆ ಈ ದಾರಿಯ ಮುಖಾಂತರವೇ ಹಾದು ಹೋಗಬೇಕು ಆದರೆ ಎಫ್ಎಮ್‌ಬಿಯಲ್ಲಿ ಈ ಭಾಗಕ್ಕೆ ಹಾದು ಹೋಗುವ ಕಾಲುದಾರಿ ದಾಖಲೆ ಇದೆ,
ಆದರೆ ಈಗ ಈ ಜಾಗವನ್ನು ಖರೀದಿಸಿದ ವ್ಯಕ್ತಿ ತಡೆಗೋಡೆ ನಿರ್ಮಿಸಿರುತ್ತಾರೆ, ಆದರೆ ತಡೆಗೋಡೆ ನಿರ್ಮಿಸುವುದು ತಪ್ಪು ಎನ್ನುವುದು ಈ ಭಾಗದ ಜನರ ಅಭಿಪ್ರಾಯವಲ್ಲ, ಆದರೆ ತಡೆ ಗೋಡೆ ಮಾಡುವಾಗ ಸರಿಯಾದ ಮೋರಿಯನ್ನು ಹಾಕದೆ ನೀರು ನಿಂತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಪರಿಸರದ ಜನರಿಗೆ ಈಗ ಅಲ್ಲಿ ನಡೆದುಕೊಂಡು ಹೋಗುವುದಕ್ಕೆ ಸಮಸ್ಯೆಯಾಗಿದೆ
( ಮೇಲ್ಕಾಣಿಸಿದ ಚಿತ್ರವನ್ನು ಸರಿಯಾಗಿ ಗಮನಿಸಿ )
ಈ ಸಮಸ್ಯೆಯನ್ನು ಜಾಗ ಖರೀದಿಸಿದ ವ್ಯಕ್ತಿಯ ಗಮನಕ್ಕೆ ತಂದಾಗ, ನಮ್ಮ ಬಗ್ಗೆ ಬೆಳ್ತಂಗಡಿ ಮತ್ತು ಮಂಗಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ,
ಅದಲ್ಲದೆ ನಮ್ಮ ಈ ಸಮಸ್ಯೆಯ ಬಗ್ಗೆ ಸುಮಾರು ಮೂರು ತಿಂಗಳ ಮೊದಲೇ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ದೂರು ನೀಡಿದ್ದು
ಅವರು ಯಾವುದೇ ಕ್ರಮ ಕೈಗೊಂಡಿಲ್ಲ . ಕೂಡಲೇ ಸಂಬಂದಿಸಿದವರು ನಮಗೆ ನಡೆದು ಕೊಂಡು ಹೋಗಲು ವ್ಯವಸ್ಥೆಗೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಿ ,
- ನೊಂದ ಪರಿಸರವಾಸಿಗಳು