ಮಾಲಾಡಿ: ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ತಿಪ್ಪೇಸ್ವಾಮಿ ಕೆ.ಟಿ. ಇವರು ಮಾಲಾಡಿ ಗ್ರಾಮ ಪಂಚಾಯತ್ ಕಛೇರಿಗೆ ಭೇಟಿ ನೀಡಿದರು.
ಮಕ್ಕಳ ಮತ್ತು ಮಹಿಳಾ ರಕ್ಷಣಾ ಕಾವಲು ಸಮಿತಿಯ ಸಭಾ ನಡವಳಿ, ಮಕ್ಕಳ ಗ್ರಾಮ ಸಭೆಯ ನಡವಳಿ, ಶಿಕ್ಷಣ ಕಾರ್ಯಪಡೆಯ ವಿವರ, ಶೇಕಡಾ 25ರಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಮಾಡಿರುವ ವೆಚ್ಛದ ವಿವರ, ಶೇ.5 ರಲ್ಲಿ ಮಾಡಿರುವ ವೆಚ್ಚದ ವಿವರ ಹಾಗೂ ಶೇ.2 ರ ವೆಚ್ಚದ ವಿವರಗಳನ್ನು ಪರಿಶೀಲಿಸಿ ಪಂಚಾಯತ್ ನ ಕಾರ್ಯ ವೈಖರಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಜಿಲ್ಲಾ ರಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೀಯ ಆಗ್ನೇಸ್, ಪಂಚಾಯತ್ ಸದಸ್ಯರಾದ ಎಸ್. ಬೇಬಿ ಸುವರ್ಣ, ಉಮೇಶ್, ಐರಿನ್ ಮೋರಸ್, ವಿದ್ಯಾ ಸಾಲಿಯಾನ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ, ಕಾರ್ಯದರ್ಶಿ ಯಶೋಧರ ಶೆಟ್ಟಿ, ಗ್ರಾಮ ಸಹಾಯಕ ಗುಣಕರ, ಇನ್ನಿತರ ಅಧಿಕಾರಿಗಳು, ಪಂಚಾಯತ್ ಸಿಬ್ಬಂಧಿಗಳು ಉಪಸ್ಥಿತರಿದ್ದರು.