September 6, 2026
Uncategorized

ಶ್ರೀ ಸಿದ್ದಿವಿನಾಯಕ ದೇವಸ್ಥಾನ ಪೆರ್ಲ -ಬೈಪಾಡಿಯಲ್ಲಿ ದೇವಸ್ಥಾನದ ಮಹಿಳಾ ಸಮಿತಿ ರಚನೆ

ಬಂದಾರು : ಶ್ರೀ ಸಿದ್ದಿವಿನಾಯಕ ದೇವಸ್ಥಾನ ಪೆರ್ಲ -ಬೈಪಾಡಿಯಲ್ಲಿ ದೇವಸ್ಥಾನದ ಮಹಿಳಾ ಸಮಿತಿಯೂ ಇತ್ತೀಚೆಗೆ ರಚನೆಯಾಗಿರುತ್ತದೆ. ಸೆ 21 ರಂದು ಸಿದ್ದಿವಿನಾಯಕ ದೇವರ ಸನ್ನಿದಿಯಲ್ಲಿ ದೀಪ ಬೆಳಗಿಸಿ ಅರ್ಚಕರ ಮೂಲಕ ಪ್ರಾರ್ಥನೆ ಸಲ್ಲಿಸಿ ನೂತನ ಮಹಿಳಾ ಸಮಿತಿಯ ಕಾರ್ಯಚಟುವಟಿಕೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಸಮಿತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರ ಜೋಡಣೆ ಮಾಡುವಲ್ಲಿ ಎಲ್ಲರೂ ಕೈ ಜೋಡಿಸೋದು ,ಸಮಿತಿಯು ಯಾವುದೇ ಕಾರ್ಯಾಚಟುವಟಿಕೆ ಮಾಡುವುದಿದ್ದರೂ ಆಡಳಿತ ಮಂಡಳಿಗೆ ತಿಳಿಸುವುದು ,ಬ್ರಹ್ಮಕಲಶೋತ್ಸವ ಸಮಯ ಸಮವಸ್ತ್ರ ಧರಿಸುವ ಬಗ್ಗೆ ಹಾಗೂ ಹಲವಾರು ವಿಷಯಗಳ ಬಗ್ಗೆ ಆಡಳಿತ ಸಮಿತಿ ಅಧ್ಯಕ್ಷರಾದ ರಮೇಶ್ ಗೌಡ ಅಡ್ಡಾರು ಇವರ ಅದ್ಯಕ್ಷತೆಯಲ್ಲಿ ಚರ್ಚಿಸಲಾಯಿತು.
ದೇವಸ್ಥಾನದ ಮಹಿಳಾ ಸಮಿತಿ ಅಧ್ಯಕ್ಷೆಯಾದ ಶ್ವೇತಾ ಹಾರ್ತ್ಯಾರ್, ಉಪಾಧ್ಯಕ್ಷರಾದ ಶ್ಯಾಮಲಾ ಪಯ್ಯೋಡಿ, ರಶ್ಮಿತಾ ಪರಪ್ಪಾಜೆ, ಕುಸುಮಾವತಿ ಅಡ್ಡಾರು, ಕಾರ್ಯದರ್ಶಿ ಮೌನಶ್ರೀ ನಾಗoದೋಡಿ, ಗೀತಾ ತಾರಕೆರೆ, ಪುಷ್ಪಾವತಿ ಪೇರಲ್ದಡಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯಶೋಧ ಅಡ್ಡಾರು ಸ್ವಾಗತಿಸಿ, ಮೌನಶ್ರೀ ನಾಗoದೋಡಿ ನಿರೂಪಿಸಿ ಧನ್ಯವಾದ ಸಲ್ಲಿಸಿದರು

.

Related posts

ಬೆಳ್ತಂಗಡಿ ಧರ್ಮಪ್ರಾಂತ್ಯದದಲ್ಲಿ ಜುಬಿಲಿ ವರ್ಷ ಉದ್ಘಾಟನೆ

Suddi Udaya

ವಗ್ಗ: ಬೈಕ್ ಮತ್ತು ಸರ್ಕಾರಿ ಬಸ್ ನಡುವೆ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

Suddi Udaya

ಮದ್ದಡ್ಕ ಹೇಮಂತ್ ಶೆಣೈ ನೇಣು ಬಿಗಿದು ಆತ್ಮಹತ್ಯೆ

Suddi Udaya

ನಾರಾವಿ: ಅರಸಿಕಟ್ಟೆ ನಾರಾಯಣ ಮಯ್ಯರಿಗೆ ನುಡಿ ನಮನ

Suddi Udaya

ಅಂಡೆತ್ತಡ್ಕ ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸಮುದಾಯ ದತ್ತ ಶಾಲಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಗಣೇಶ್ ಹೋಟೆಲ್ ನ ಮಾಲಕ ದಿವಾಕರ ಪ್ರಭು ನಿಧನ

Suddi Udaya
error: Content is protected !!